ಯಾದಗಿರಿ:ಲೋಕಸಭಾ ಸಾರ್ವತ್ರಿಕ ಚುನಾವಣೆಗಳು-2024ರ ಅಂಗವಾಗಿ ಮೇ 07 ರಂದು ನಡೆಯುವ ಮತದಾನದ ಹಿನ್ನೆಲೆ ಮತದಾರರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಲು ಜಿಲ್ಲಾಡಳಿತ,ಜಿ.ಪಂ ಯಾದಗಿರಿ,ವಡಗೇರಾ ತಾ.ಪಂ ಹಾಗೂ ವಡಗೇರಾ ತಾಲೂಕಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಸಂಗ್ವಾರ ಮಾರ್ಗದರ್ಶನದಲ್ಲಿ 2024ರ ಏಪ್ರಿಲ್ 19 ಶುಕ್ರವಾರ ರಂದು ವಡಗೇರಾ ಹೋಬಳಿ ಮಟ್ಟದಲ್ಲಿ ವಡಗೇರ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹೋಬಳಿ ಮಟ್ಟದ ಸ್ವೀಪ್ ಚಟುವಟಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸ್ವೀಪ್ ಚಟುವಟಿಕೆಯಡಿ ಆವರಣದಲ್ಲಿ ನಾನಾ ತರಹದ ಹಲವು ಬಣ್ಣಗಳ ಚಿತ್ತಾಕರ್ಷಣಿಯ ಮತದಾನ ಜಾಗೃತಿಯ ರಂಗೋಲಿ ಬಿಡಿಸುವ ಸ್ಪರ್ಧೆ, ಗೋಣಿ ಚೀಲ ಓಟದ ಸ್ಪರ್ಧೆ,ಹಗ್ಗ ಜಗ್ಗಾಟ ಇನ್ನಿತರ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯ ನಿರ್ವಾಹಕ ಅಧಿಕಾರಿಗಳ ನೇತೃತ್ವದಲ್ಲಿ ರಾಯಬಾರಿಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಎತ್ತಿನಗಾಡಿ ಮೂಲಕ ಜಾಥ ಕೈಗೊಂಡು ಗ್ರಾಮಸ್ಥರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಯಿತು.ಈ ಸಂದರ್ಭದಲ್ಲಿ ತಾಲೂಕಾ ಮಟ್ಟದ ಅಧಿಕಾರಿಗಳು,ಆಶಾ ಅಂಗನವಾಡಿ ಕಾರ್ಯಕರ್ತೆಯರು ಸಂಜೀವಿನಿ ಸಿಬ್ಬಂದಿಗಳು ಸೇರಿದಂತೆ ಸಂಘದ ಮಹಿಳೆಯರು ಉಪಸ್ಥಿತರಿದ್ದರು.
ವರದಿ:ಶಿವರಾಜ ಸಾಹುಕಾರ್ ವಡಗೇರಾ