ತುಮಕೂರು:ಶಿರಾ ನಗರದಲ್ಲಿ ಶುಕ್ರವಾರ ನಡೆದ ಬಿಜೆಪಿ ಜೆಡಿಎಸ್ ಅಭ್ಯರ್ಥಿ ಪರ ಸಮಾವೇಶದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ದೇಶದಲ್ಲಿ ಬಿಜೆಪಿ ಸರ್ಕಾರಕ್ಕೆ ಬರಬೇಕು ನರೇಂದ್ರ ಮೋದಿಜಿ ಅವರು ಮೂರನೇ ಬಾರಿ ಪ್ರಧಾನಮಂತ್ರಿಯಾಗಬೇಕು ಕಾಂಗ್ರೆಸ್ ಸರ್ಕಾರವು ಪಿಕ್ ಪಾಕೆಟ್ ಸರ್ಕಾರ ಎಂದು ದೂರಿದರು ಮತ್ತು ವಿಧಾನ ಪರಿಷತ್ ಸದಸ್ಯರಾದಂತಹ ಎಂ ಎಲ್ ಸಿ ಚಿದಾನಂದ ಅವರು ಸಹ ಈ ಸಮಾವೇಶದಲ್ಲಿ ಮಾತನಾಡಿದರು ಕಾಂಗ್ರೆಸ್ ಸರ್ಕಾರವು ಮಾಡಿರುವ ಕೇವಲ ಜನಪ್ರಿಯತೆಗೆ ಚುನಾವಣೆ ಗೆಲ್ಲುವ ಕಾರಣಕ್ಕಾಗಿ ಕಾಂಗ್ರೆಸ್ನವರು ಅವರ ಗ್ಯಾರೆಂಟಿಗಳನ್ನ ಮುಂದೆ ಇಟ್ಟುಕೊಂಡು ಹೊರಟಿದ್ದಾರೆ ಆದರೆ ಕುಮಾರಣ್ಣ ಅವರು ಕೊಟ್ಟಿರ್ತಕಂತ ಗ್ಯಾರಂಟಿಗಳ ಮುಂದೆ ಮೋದಿಜಿ ಅವರು ಕೊಟ್ಟಂತ ಗ್ಯಾರಂಟಿಗಳ ಮುಂದೆ ಈ ಐದು ಗ್ಯಾರಂಟಿಗಳು ಏನು ಅಲ್ಲ ಕುಮಾರಣ್ಣ ಅವರು ಪಂಚರತ್ನ ಯೋಜನೆಗಳನ್ನ ಜಾರಿಗೆ ತಂದಿದ್ದರು ಅದರಲ್ಲಿ ಒಂದು ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಒಂದು ಪಂಚಾಯತಿಗೆ ಒಂದು ಪಂಚಾಯತಿ ಕೇಂದ್ರಕ್ಕೆ ಒಂದು ಹೋಬಳಿ ಕೇಂದ್ರಕ್ಕೆ ಸುಸಜ್ಜಿತ ಶಾಲೆಯನ್ನು ತೆರಿತೀನಿ ಅಂತ ಹೇಳಿದ್ರು ಇವತ್ತು ಸರ್ಕಾರಿ ಶಾಲೆಗಳು ಬಿದ್ದು ಹೋಗುತ್ತಿವೆ ಸರ್ಕಾರಿ ಶಾಲೆಗಳಲ್ಲಿ ಒಂದು ಒಳ್ಳೆಯ ಸೌಕರ್ಯವಿಲ್ಲ ಶಾಲೆಗೆ ಹೋಗುವ ಮಕ್ಕಳಿಗೆ ಬಸ್ಸಿನ ಸೌಲಭ್ಯವಿಲ್ಲ ತಾಯಂದಿರು ಧರ್ಮಸ್ಥಳಕ್ಕೆ ಹೋಗುವುದಕ್ಕೆ ಸೌಕರ್ಯವಿದೆ ಆದರೆ ಶಾಲೆಗೆ ಹೋಗುವ ಮಕ್ಕಳಿಗೆ ಬಸ್ಸಿನ ಸೌಲಭ್ಯ ಕಡಿಮೆ ಈ ರೀತಿಯ ಅದ್ವಾನ ಅರಾಜಕತೆ ಇದೆಲ್ಲ ಯಾರಣ್ಣ ಸಿದ್ದರಾಮಯ್ಯ ಬಂದ್ರು 10 ಕೆ.ಜಿ ಅಕ್ಕಿ ಕೊಡ್ತೀವಿ ಅಂತ ಹೇಳಿದ್ರು ಹತ್ತು ಕೆಜಿ ಅಕ್ಕಿ ಅಲ್ಲ ಒಂದೇ ಒಂದು ಕಾಳು ಸಹ ಕೂಡ ಯೋಗ್ಯತೆ ಆಗಿಲ್ಲ 5 ಕೆಜಿ ಅಕ್ಕಿಯನ್ನು ಕೊಡತಕ್ಕದ್ದು ಈ ರಾಷ್ಟ್ರದ ಕೇಂದ್ರ ಸರ್ಕಾರ ಎಂದು ಹೇಳಿದರು ನಂತರ ಚಿತ್ರದುರ್ಗ ಲೋಕಸಭಾ ವಿಧಾನಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾದ ಗೋವಿಂದ ಕಾರಜೋಳ ಮಾತನಾಡಿದರು ಅವರು ಕಾಂಗ್ರೆಸ್ ಸರ್ಕಾರವನ್ನು ಕುರಿತು 56 ವರ್ಷದ ಆಡಳಿತದಲ್ಲಿ ಅನೇಕ ಕಾಂಗ್ರೆಸ್ ನಾಯಕರು ಭ್ರಷ್ಟಾಚಾರದ ಬಗ್ಗೆ ಬಹಳ ಉದ್ದ ಉದ್ದವಾಗಿ ಮಾತನಾಡುತ್ತಾರೆ ಕೆಲವು ನಾಯಕರು ಜೈಲಿಗೆ ಹೋದರು ಕೆಲವು ನಾಯಕರು ಜೈಲಿಗೆ ಹೋಗಿ ಬೇಲ್ ಮೇಲೆ ಹೊರ ಬಂದರು ಇದು ಕಾಂಗ್ರೆಸ್ ನಾಯಕರ ಪರಿಸ್ಥಿತಿ ಎಂದು ಹೇಳಿದರು ನಮ್ಮ ಪ್ರಧಾನ ಮಂತ್ರಿಗಳಾದಂತಹ ನರೇಂದ್ರ ಮೋದಿಜಿಯವರು ಯಾವುದೇ ಹಗರಣದಲ್ಲಿ ಸಿಕ್ಕಿಲ್ಲ,ಭ್ರಷ್ಟಾಚಾರದ ಆಪಾದನೆ ಇಲ್ಲ ಇಂತಹ ಶ್ರೇಷ್ಠ ಪ್ರಧಾನಮಂತ್ರಿ ಆಗಿದ್ದಾರೆ ಬಂಧುಗಳೇ ಅದಕ್ಕಾಗಿ ದೇವೇಗೌಡ ಸಾಹೇಬರು ಅಷ್ಟು ಸುಲಭವಾಗಿ ಯಾರನ್ನು ಒಪ್ಪುವುದಿಲ್ಲ ಅಷ್ಟು ಸುಲಭವಾಗಿ ಹೊಗಳುವುದಿಲ್ಲ ಎಂದರೆ ಈ ದೇಶಕ್ಕೆ ಒಬ್ಬ ಸಮರ್ಥ ಆಡಳಿತಗಾರಬೇಕು ದೇಶವನ್ನ ಮುನ್ನಡೆಸುವಂತಹ ಆಡಳಿತಗಾರಬೇಕು ಅಂತಹ ಶಕ್ತಿ ಇರುವಂತಹ ರಾಜಕಾರಣಿ ಎಂದರೆ ಶ್ರೀ ನರೇಂದ್ರ ಮೋದಿಜಿ ಅವರು ಎಂದು ಹೇಳಿದರು ಈ ಒಂದು ಸಮಾವೇಶಕ್ಕೆ ಎಂ ಎಲ್ ಸಿ ಚಿದಾನಂದ ಗೌಡ ಅವರ ನೇತೃತ್ವದಲ್ಲಿ ಆದಲೂರು ಉದ್ರೇಶ್ ಅವರ ತಂಡ ಕೇಂದ್ರ ಸರ್ಕಾರದಲ್ಲಿ ನರೇಂದ್ರ ಮೋದಿಜಿ ಅವರು ಮೂರನೇ ಬಾರಿ ಪ್ರಧಾನಿಯಾಗಬೇಕು ಎನ್ನುವ ಉದ್ದೇಶದಿಂದ ತಾಲೂಕಿನ ಆದ್ಯಂತ ಗ್ರಾಮಗಳಿಗೆ ತೆರಳಿ ಬಸ್ಸನ್ನ ಕಳಿಸಿ ಸಾವಿರಾರು ಸಂಖ್ಯೆಯ ಮತಬಾಂಧವರನ್ನ ಸಹ ಒಂದು ಕಡೆ ಸೇರಿಸಿ ಸಮಾವೇಶ ಯಶಸ್ವಿಗೊಳಿಸುವಂತೆ ಮಾಡಿದರು.
ವರದಿಗಾರರು ಕೊಟ್ಟ ಕರಿಯಣ್ಣ