ಭದ್ರಾವತಿ:ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ವತಿಯಿಂದ ಬಿಳಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ರವರ ಸಾನಿಧ್ಯದಲ್ಲಿ ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ್ ವಿದ್ಯಾರ್ಥಿನಿಯ ಬರ್ಬರ ಹತ್ಯೆಯನ್ನು ಖಂಡಿಸಿ, ಅಪರಾಧಿಗಳಿಗೆ ಕಠಿಣ ಶಿಕ್ಷೆಯನ್ನು ವಿಧಿಸಲು ರಾಜ್ಯ ಸರ್ಕಾರವನ್ನು ಆಗ್ರಹಿಸಿ ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಎನ್ ಸಿ ಪ್ರಕಾಶ್ ರವರ ಅಧ್ಯಕ್ಷತೆಯಲ್ಲಿ ಖಂಡನಾಸಭೆ ನಡೆಸಿ ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಲಾಯಿತು.
ಸಮಾಜದ ವಿವಿಧ ಸಂಘಟನೆಗಳಾದ ಸಾಧು ಸದ್ಧರ್ಮ ಸಮಾಜದ ಅಧ್ಯಕ್ಷ ರವಿಕುಮಾರ್,ನೊಳಂಬ ಸಮಾಜದ ಬಸವರಾಜ್,ವೀರಶೈವ ಸೇವಾ ಸಮಿತಿಯ ಆರ್.ಮಹೇಶ್ ಕುಮಾರ್,ಜಂಗಮ ಸಮಾಜದ ಅಡವೀಶಯ್ಯ, ಗಾಣಿಗ ಸಮಾಜದ ಮಲ್ಲಿಕಾರ್ಜುನ್, ಪಂಚಮಸಾಲಿ ಸಮಾಜದ ಸತೀಶ್, ಶರಣ ಸಾಹಿತ್ಯ ಪರಿಷತ್ನ ಅಧ್ಯಕ್ಷ ಮಲ್ಲಿಕಾರ್ಜುನ್, ಅಕ್ಕನ ಬಳಗ ಅಕ್ಕಮಹಾದೇವಿ ಬಳಗದ ಬಸವರಾಜಯ್ಯ, ಕುಂಬಾರ ಸಮಾಜದ ಚಂದ್ರಣ್ಣ, ಬಸವ ಮಂಟಪದ ಬಸವರಾಜ್, ಜನ ಕಲ್ಯಾಣ ಟ್ರಸ್ಟ್ ನ ಸಿದ್ದಲಿಂಗಯ್ಯ ಹಾಗೂ ಮಹಿಳಾ ಘಟಕದ ಅಧ್ಯಕ್ಷೆ ರೂಪನಾಗರಾಜ್ ಯುವ ಘಟಕದ ಅಧ್ಯಕ್ಷ ಮಂಜುನಾಥ್ ಸೇರಿದಂತೆ ಸಮಾಜ ಬಾಂಧವರು ನೇಹ ಹತ್ಯೆಯ ಖಂಡನಾ ಸಭೆ ಹಾಗೂ ತಹಶೀಲ್ದಾರ್ ರವರಿಗೆ ಮನವಿ ಅರ್ಪಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಹುಬ್ಬಳ್ಳಿಯಲ್ಲಿ ನಡೆದ ನೇಹ ಹಿರೇಮಠ್ ವಿದ್ಯಾರ್ಥಿನಿಯ ಬರ್ಬರ ಹತ್ಯೆಯನ್ನು ಖಂಡಿಸಿ, ಅಪರಾಧಿಗಳಿಗೆ ಕಠಿಣ ಶಿಕ್ಷೆಯನ್ನು ವಿಧಿಸಲು ರಾಜ್ಯ ಸರ್ಕಾರವನ್ನು ಆಗ್ರಹಿಸಿ ಭದ್ರಾವತಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.ಕಾರ್ಯದರ್ಶಿ ರವಿಕುಮಾರ್ ಸ್ವಾಗತಿಸಿದರು,ಜನ್ನಾಪುರ ಜಗದೀಶ್ ವಂದಿಸಿದರು.
ವರದಿ : ಕೆ ಆರ್ ಶಂಕರ್ ಭದ್ರಾವತಿ