ಕಲಬುರಗಿ:ರಾವೂರ ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನ ಮಠದ ಪರಮ ತಪಸ್ವಿ ಶ್ರೀ ಸಿದ್ದಲಿಂಗೇಶ್ವರ ಜಾತ್ರಾ ಮಹೋತ್ಸವಕ್ಕೆ ಪರಮಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು ಚಾಲನೆ ನೀಡಿದರು.30ನೇ ತಾರೀಖಿನವರೆಗೂ ಸಂಜೆ 7:30 ಕ್ಕೆ ಜಗನ್ಮಾತೆ ಗುಡ್ಡಾಪುರ ದಾನಮ್ಮ ದೇವಿಯ ಪುರಾಣವನ್ನು ವೇದಮೂರ್ತಿ ಸದಾನಂದ ಶಾಸ್ತ್ರಿಗಳು ನಡೆಸಿಕೊಡಲಿದ್ದಾರೆ ಹಾಗೂ 25 ರ ರವಿವಾರದಂದು ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಲಿದೆ, ಸಂಜೆ ಪ್ರವಚನ ಕಾರ್ಯಕ್ರಮದಲ್ಲಿ ಮಹಾಲಿಂಗಪ್ಪ ಹಿರೇಗೌಡರ ವಿರಚಿತ ಜನಪದ ಸಂಗಮ ಪುಸ್ತಕ ಲೋಕಾರ್ಪಣೆಯನ್ನು ಮಾಜಿ ಶಾಸಕ ವಿಶ್ವನಾಥ್ ಪಾಟೀಲ್ ಹೆಬ್ಬಾಳ್ ಹಾಗೂ ಲಿಂಗರಾಜ್ ಅಪ್ಪ ಅವರು ಮಾಡಲಿದ್ದಾರೆ.ದಿನಾಂಕ 27ರಂದು ಶನಿವಾರ ಸಂಜೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದವರಿಗೆ ದಿವಂಗತ ರೇವಣಸಿದ್ದಪ್ಪ ಮಾಸ್ತರ್ ಕೆಳಮನೆ ಅವರ ಸ್ಮರಣಾರ್ಥ ಅವರ ಮಕ್ಕಳಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ,30ನೇ ತಾರೀಖಿನ ಕೊನೆಯ ದಿನ ರಾವೂರ್ ಗ್ರಾಮದಿಂದ ಸರ್ಕಾರಿ ಹುದ್ದೆಗಳಿಗೆ ಆಯ್ಕೆಯಾದವರಿಗೆ ಶ್ರೀಮಠದಿಂದ ಸತ್ಕಾರ ನಡೆಯಲಿದೆ,ಮೇ 2ನೇ ತಾರೀಖುದಂದು 6.30 ನಿಮಿಷಕ್ಕೆ ಸಹಸ್ತಾರು ಭಕ್ತರ ಮಧ್ಯೆ ಹುಕ್ಕೇರಿ ಮಠದ ಪೂಜಾ ಸದಾಶಿವ ಸ್ವಾಮಿಗಳ ಸಾನಿಧ್ಯದಲ್ಲಿ ಮಹಾರಥೋತ್ಸವ ಜರುಗಲಿದೆ,ಅಂದು ಸಂಜೆ ಜೀ ವಾಹಿನಿ ಖ್ಯಾತಿಯ ಹನುಮಂತ ಲಮಾಣಿ ಕನ್ನಡ ಕೋಗಿಲೆ ವಿನ್ನರ್ ಖಾಸಿಮಲಿ ಮತ್ತು ಸ್ವಾತಿ ಸಿರ್ಸಿ ಅವರಿಂದ ಸಂಗೀತ ರಸಮಾಂಜರಿ ಕಾರ್ಯಕ್ರಮ ನಡೆಯಲಿದೆ.ಈ ಸಂದರ್ಭದಲ್ಲಿ ಹಾಸ್ಯ ಕಲಾವಿದರಾದಂತಹ ಗುಂಡನ ಡಿಗಿ ಅವರ ನೇತೃತ್ವದಲ್ಲಿ ಹಾಸ್ಯ ಸಂಜೆ ನಡೆಯಲಿದೆ ಹಾಗೂ ಈ ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನಮಾಡಲಾಗುವುದು.ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಶ್ರೀಗಳು ವಿನಂತಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಚೆನ್ನಣ್ಣ ಬಾಳಿ,
ಗುಂಡಣ್ಣ ಬಾಳಿ,
ಬಸವರಾಜ ಅಳ್ಳಳ್ಳಿ,
ಸಿದ್ಲಿಂಗ್ ಜೋಶಿ,
ಸೋಮಶೇಖರ ಮಠಪತಿ,
ಇನ್ನಿತರ ಸದ್ಭಕ್ತರು ಈ ಸಮಯದಲ್ಲಿ ಉಪಸ್ಥಿತರಿದ್ದರು.
ವರದಿ ಮೊಹಮ್ಮದ್ ಅಲಿ,ಚಿತ್ತಾಪುರ