ಹಿರಿಯರಿದ್ದರೆ ಮನೆ ಚಂದ.ಅಜ್ಜ ಅಜ್ಜಿಯರಿದ್ದರೆ ಬಲು ಆನಂದ.ಮಕ್ಕಳು,ಸೊಸೆಯಂದಿರು,ಮೊಮ್ಮಕ್ಕಳು ತುಂಬಿದ ಮನೆ ಅಂದ.ಎಲ್ಲರೂ ಸೇರಿ ಆಚರಿಸುವ ಸಂಪ್ರದಾಯ,ಪದ್ಧತಿ,ಹಬ್ಬ ಹರಿದಿನಗಳು,ಕೂಡು ಹಿರಿಯರ ಕುಟುಂಬದಲ್ಲಿ ಕಾಣಬಹುದಾಗಿದೆ, ಕಲ್ಮಶವಿಲ್ಲದ ಮನೆ ಒಳಗೆ ಗುರು ಹಿರಿಯರ ಮಾತೇ ಮುಖ್ಯವಾಣಿಯಾಗಿದೆ,ಮೊಮ್ಮಕ್ಕಳ ನಗು ಅಜ್ಜ ಅಜ್ಜಿಯರಿಗೆ ಬಲು ಇಷ್ಟ,ಮೊಮ್ಮಕ್ಕಳಿಗೆ ಕಥೆ ಹೇಳುವ ಮೂಲಕ ಅಜ್ಜ ಅಜ್ಜಿಯರು ಸಂಪ್ರದಾಯ ಪದ್ಧತಿಯನ್ನು ಹೇಳುವುದರ ಮೂಲಕ ಮಕ್ಕಳು ಅದನ್ನು ತಿಳಿದುಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆ.ರಜೆಯ ಕಾಲದಲ್ಲಿ ಮಕ್ಕಳು ಹೆಚ್ಚು ಇಷ್ಟಪಡುವುದು ಹಳ್ಳಿಯ ವಾತಾವರಣವನ್ನು ಅದರಲ್ಲೂ ಮುಖ್ಯವಾಗಿ ಅಜ್ಜ-ಅಜ್ಜಿಯರನ್ನ ನೆನಪಿಸಿಕೊಳ್ಳುತ್ತಾರೆ,ಅಜ್ಜಿಯ ಕೈ ತುತ್ತು ಅಜ್ಜನ ಕತೆ ಕಾದಂಬರಿಗಳು,ಬೆಳದಿಂಗಳ ಊಟ,ಚಂದ್ರ ಮಾಮನ ಕತೆ,ಈಗ ಮೊಮ್ಮಕ್ಕಳು ಹಳ್ಳಿಯ ವಾತಾವರಣಕ್ಕೆ ಹೊಂದುಕೊಳ್ಳುತ್ತಾರೆ,ಪಟ್ಟಣ ವಾತಾವರಣಕ್ಕಿಂತ ಹಳ್ಳಿ ವಾತಾವರಣ ಹೆಚ್ಚು ಖುಷಿಕೊಡುತ್ತದೆ. ನದಿಯಲ್ಲಿ ಈಜುವುದು,ದನ ಕರಗಳನ್ನ ಮೇಯಿಸುವುದು,ಎತ್ತಿನ ಗಾಡಿ ಓಡಿಸುವುದು,ಹೀಗೆ ಬಲು ರೋಮಾಂಚನವಾಗಿದೆ.ಹಳ್ಳಿಯಲ್ಲಿ ಎಲ್ಲರೂ ಒಂದುಗೂಡಿ ಹಬ್ಬವನ್ನು ಆಚರಿಸುವ ಪದ್ಧತಿಯು ಆಗ ಇತ್ತು,ಇತ್ತೀಚಿನ ಕಾಲದಲ್ಲಿ ಅಜ್ಜ ಅಜ್ಜಿಯರನ್ನು ಮೊಮ್ಮಕ್ಕಳು ತೀರ ಮಾತನಾಡಿಸುವುದು ಕಡಿಮೆ ಆಗುತ್ತಾ ಇದೆ ಕಾರಣ ಮೊಬೈಲ್ ಗಳ ಹಾವಳಿ,ಟಿವಿ ಮಾಧ್ಯಮಗಳು,ಗುರುಹಿರಿಯಂಬ ಭಾವನೆ ಕಡಿಮೆ ಇರುವುದು.ತಂದೆ ತಾಯಿಗಳು ತಮ್ಮ ಅಪ್ಪ ಅಮ್ಮಂದಿರನ್ನ ದೂರ ಮಾಡಿರೋದು ಮಕ್ಕಳೊಂದಿಗೆ ಬಿಡದಿರುವುದು ಅವರಿಗೆ ಪ್ರೀತಿ ದೊರೆಯದೆ ಇರುವುದು ಇತ್ತೀಚಿನ ದಿನದಲ್ಲಿ ಹೆಚ್ಚಾಗಿದೆ.ಆದ್ದರಿಂದ ಹಿರಿಯರಿದ್ದರೆ ಮನೆ ಚಂದ,ಕೂಡಿ ಬಾಳಿದರೆ ಸ್ವರ್ಗವೇ ಧರೆಗಿಳಿದಂತೆ ಆನಂದ.
-ಚಂದ್ರಶೇಖರಚಾರ್ ಎಂ
ಶಿಕ್ಷಕರು ವಿಶ್ವಮಾನವ ಪ್ರೌಢಶಾಲೆ
ಚಿತ್ರದುರ್ಗ