ಹನೂರು:ಚಾಮರಾಜನಗರ ಎನ್.ಡಿ.ಎ ಮೈತ್ರಿ ಅಭ್ಯರ್ಥಿಯಾದ ಎಸ್. ಬಾಲರಾಜು ಪರವಾಗಿ ಮತ ಯಾಚನೆ ಮಾಡಲಾಯಿತು.ಮಣಗಳ್ಳಿ ಗ್ರಾಮದಲ್ಲಿ ಬಿಜೆಪಿ ಜಿಲ್ಲಾ ಎಸ್ ಸಿ ಮೋರ್ಚಾ ಕಾರ್ಯದರ್ಶಿಯಾದ ಸಿಕೆ ಕೃಷ್ಣಕುಮಾರ್ ಅವರು ಗ್ರಾಮದ ತೋಟ ಹಾಗೂ ಮನೆಮನೆಗೆ ತೆರಳಿ ಬಿಜೆಪಿ ಅಭ್ಯರ್ಥಿಯ ಪರ ಮತಯಾಚನೆ ನಡೆಸಿದರು.
ಇದೆ ವೇಳೆ ಬಿಜೆಪಿ ಎಸ್ ಸಿ ಮೋರ್ಚಾ ಕಾರ್ಯದರ್ಶಿಯಾದ ಸಿಕೆ ಕೃಷ್ಣಕುಮಾರ್ ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯವರು ಭಾರತ ದೇಶ ಮೊದಲ ಸ್ಥಾನಕ್ಕೆ ತರಲಿಕ್ಕೆ ಹತ್ತು ವರ್ಷಗಳಿಂದ ಒಂದು ದಿನವೂ ರಜಾ ಹಾಕದೆ ಹಗಲಿರುಳು ಶ್ರಮಿಸುತ್ತಿದ್ದಾರೆ.
ಉಜ್ವಲ ಯೋಜನೆ,ಆಯುಷ್ಮಾನ್ ಭಾರತ ಆರೋಗ್ಯ ಕಾರ್ಡ ಹಾಗೂ ಇನ್ನಿತರ ಜನಪರ ಯೋಜನೆಗಳನ್ನು ಎಲ್ಲಾ ವರ್ಗದ ಜನರಿಗೋಸ್ಕರ ತಂದಿದ್ದಾರೆ ಅಯೋಧ್ಯದಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಮಾಡಿದ್ದಾರೆ.
ಕಾಂಗ್ರೆಸ್ ಸರ್ಕಾರ ಇದ್ದ ಸಂದರ್ಭದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮೃತಪಟ್ಟ ಸಂದರ್ಭದಲ್ಲಿ ಅವರನ್ನು ಹೂಳಲಕ್ಕೆ ಜಾಗ ಕೊಟ್ಟಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬರೆದಂತಹ ಸಂವಿಧಾನದ ಅಡಿಯಲ್ಲಿ ನಾವು ಭಾರತ ದೇಶವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ ಆದರೆ ಕಾಂಗ್ರೆಸ್ ಮುಖಂಡರುಗಳು ಬಿಜೆಪಿ ಸರ್ಕಾರ ಬಂದರೆ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರೇ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಹುಟ್ಟಿಬಂದರೂ ಸಂವಿಧಾನ ಬದಲಾವಣೆ ಮಾಡಿ ಅಂದರೂ ಸಹ ನಾವು ಮಾಡೋದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ ಆದರಿಂದ ಕಾಂಗ್ರೆಸ್ ಮುಖಂಡರ ಮಾತನ್ನು ನಂಬಬೇಡಿ.
ಯಡಿಯೂರಪ್ಪ ವಿಜಯೇಂದ್ರ,ದೇವೇಗೌಡರು, ಕುಮಾರಸ್ವಾಮಿ ಅವರ ಆಶೀರ್ವಾದದಿಂದ ಬಾಲರಾಜು ರವರು ಅತ್ಯಧಿಕ ಬಹುಮತಗಳ ಅಂತರದಿಂದ ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ. ಆದ್ರಿಂದ ಮತದಾರ ಪ್ರಭುಗಳು ನಿಮ್ಮ ಅಮೂಲ್ಯವಾದ ಮತವನ್ನು ನೀಡಬೇಕೆಂದು ಕೈ ಮುಗಿದ ಬೇಡಿಕೊಳ್ಳುತ್ತೇನೆ ಎಂದು ಮತ ಯಾಚನೆ ಮಾಡಿದರು.
ಇದೇ ಸಂದರ್ಭದಲ್ಲಿ ಮಣಗಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಲ್ಲಿಕಾರ್ಜುನ,ಬಿಜೆಪಿ ಮುಖಂಡರಾದ ಮಾದೇಶ್,ಗೂಳಿ ನಾಯಕ ಹಾಗೂ ಇನ್ನಿತರರು ಹಾಜರಿದ್ದರು.
ವರದಿ:ಉಸ್ಮಾನ್ ಖಾನ್