ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಚಟ್ನಳ್ಳಿ ಗ್ರಾಮದ ಕೋಟಿ ಬಸವೇಶ್ವರ ಜಾತ್ರಾ ಮಹೋತ್ಸವ ಬಹಳ ವಿಜೃಂಭಣಿಯಿಂದ ಜರುಗಿತು ನೂರಾರು ಭಕ್ತರ ಜಯಘೋಷದೊಂದಿಗೆ ಈ ಜಾತ್ರಾ ಮಹೋತ್ಸವ ಬಹಳ ವಿಜೃಂಭಣೆಯಿಂದ ಜರುಗಿತು.
ಮುಂಜಾನೆಯಿಂದಲೇ ಗ್ರಾಮದ ಸಾರ್ವಜನಿಕರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸೇರಿ ತಾವು ಅಂದುಕೊಂಡ ಬೇಡಿಕೆಗಳ ಈಡೇರಿಸಿದ ದೇವರಿಗೆ ಇಷ್ಟವಾದ ನೈವೇದ್ಯ,ಕಾಯಿ ಕರ್ಪೂರ ಅರ್ಪಿಸುವ ಮೂಲಕ ತಮ್ಮ ಭಕ್ತಿ ಸಮರ್ಪಿಸಿದರು.
ಸಂಜೆ 6 ಗಂಟೆಗೆ ದೇವಸ್ಥಾನದ ಆವರಣದಲ್ಲಿ ಬೃಹತ್ ಬಹಳ ವಿಜೃಂಭಣೆಯಿಂದ ರಥೋತ್ಸವ ಜರುಗಿತು.
ಊರಿನ ಹಿರಿಯರು ಹಾಗೂ ಗ್ರಾಮಸ್ಥರು ಸೇರಿ ಗ್ರಾಮೀಣ ಭಾಗದ ಸಂಪ್ರದಾಯವಾದ ಕ್ರೀಡೆ ಚೀಲ ಎತ್ತುವ ಸ್ಪರ್ಧೆ ಹಾಗೂ ಕುಸ್ತಿ ಸ್ಪರ್ಧೆ ಬಹಳ ಸಡಗರದಿಂದ ನೇರವೇರಿಸಿದರು.ಈ ಸಂಧರ್ಭದಲ್ಲಿ ಬಸವಂತಪ್ಪ ಸಾಹುಕಾರ್ ಬಿರಾದಾರ ಮಾಲಿ ಪಾಟೀಲ್,ವಿಶ್ವನಾಥ್‌ರೆಡ್ಡಿ ಪೊಲೀಸ್ ಪಾಟೀಲ್,ಡಾ. ವೆಂಕಟ್‌ರೆಡ್ಡಿ ಹಾಗೂ ಊರಿನ ಹಿರಿಯರು ಕರ್ನಾಟಕ ಕಾರ್ಮಿಕ ರಕ್ಷಣಾ ವೇದಿಕೆ ಟ್ರೇಡ್ ಯೂನಿಯನ್ ಯಾದಗಿರಿ ಜಿಲ್ಲಾಧ್ಯಕ್ಷರಾದ ಸಂಗಮೇಶ್.ಎಸ್.ಕುಂಬಾರ್ ಸುತ್ತಮುತ್ತಲಿನ ಗ್ರಾಮಸ್ಥರು ಹಿರಿಯರು ಯುವಕರು,ಮಹಿಳೆಯರು ಈ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ್ದರು.
ವರದಿ ರಾಜಶೇಖರ ಮಾಲಿ ಪಾಟೀಲ್