ಗೌರಿಬಿದನೂರು ನ್ಯಾಷನಲ್ ಕಾಲೇಜಿನಲ್ಲಿ ಏರ್ಪಡಿಸಲಾದ ವಿಶ್ವ ಪುಸ್ತಕ ಹಾಗೂ ವಿಲಿಯಂ ಶೇಕ್ಸ್‌ಪಿಯರ್ ದಿನಾಚರಣೆಯ ಸಭೆಯಲ್ಲಿ
ಆಧುನಿಕ ಬದುಕಿನ ಒತ್ತಡದ ಜೀವನದಲ್ಲಿ ಪುಸ್ತಕ ಓದುವ ಹವ್ಯಾಸ ಕಡಿಮೆಯಾಗುತ್ತಿದೆ ಎಂದು ಪ್ರಾಂಶುಪಾಲೆ ಡಾ.ಗಾಯತ್ರಿ ಅಭಿಪ್ರಾಯಪಟ್ಟರು.
ನಗರದ ಎಇಎಸ್ ನ್ಯಾಷನಲ್ ಕಾಲೇಜಿನಲ್ಲಿ ಗ್ರಂಥಾಲಯ ವಿಭಾಗದಿಂದ ಏರ್ಪಡಿಸಲಾಗಿದ್ದ ವಿಶ್ವ ಪುಸ್ತಕ ದಿನಾಚರಣೆ ಹಾಗೂ ವಿಲಿಯಂ ಷೇಕ್ಸಪೀಯರ್ ಜನ್ಮ ದಿನಾಚರಣೆ ಉದ್ಘಾಟಿಸಿ ಮಾತನಾಡುತ್ತಾ ಪುಸ್ತಕ ಅತ್ಯತ್ತಮ ಗೆಳೆಯ ಇದ್ದಂತೆ ಪುಸ್ತಕ ಓದುವುದರಿಂದ ವಿಶ್ವ ಸುತ್ತಿದ ಅನುಭವವಾಗುತ್ತದೆ ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.
ಗ್ರಂಥಪಾಲಕ ಟಿ.ಎನ್.ಜಯರಾಮ ರೆಡ್ಡಿ ಮಾತನಾಡಿ ಪುಸ್ತಕಗಳು ಮಾನವ ಸಂಗಾತಿಗಳಾಗಿವೆ ಪುಸ್ತಕಗಳು ಗತ ವೈಭವದ ಸಾಕ್ಷಿಯಾಗಿ ಮತ್ತು ಮುಂದಿನ ಪೀಳಿಗೆಗೆ ಜ್ಞಾನ ರವಾನೆ ಮತ್ತು ಬದುಕಿನ ಭವಿಷ್ಯವನ್ನು ರೂಪಿಸುತ್ತದೆ ಗ್ರಂಥವಿಲ್ಲದ ಕೋಣೆ ಆತ್ಮವಿಲ್ಲದ ದೇಹದಂತೆ ಪ್ರತಿಯೊಬ್ಬ ವಿದ್ಯಾರ್ಥಿಯು ಪ್ರತಿಯೊಬ್ಬ ಓದುಗ ತನ್ನದೇ ಆದ ಪುಟ್ಟ ಗ್ರಂಥಾಲಯ ಮತ್ತು ತನ್ನದೇ ಆದ ಪುಸ್ತಕ ಭಂಡಾರವನ್ನು ತಾವಿರುವ ಸ್ಥಳದಲ್ಲಿ ರೂಪಿಸಿಕೊಳ್ಳಬೇಕೆಂದು ಹೇಳಿದರು.
ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಟಿ.ಜಯರಾಮ್ ಮಾತನಾಡಿ ವಿದ್ಯಾರ್ಥಿಗಳು ಪುಸ್ತಕಗಳನ್ನು ಹಾಗೂ ದಿನ ಪತ್ರಿಕೆಗಳನ್ನು ಓದುವುದರಿಂದ ಹೆಚ್ಚು ಜ್ಞಾನ ಸಂಪಾದನೆ ಪಡೆಯಬಹುದು ಎಂದರು.
ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಟಿ.ನಂಜುಂಡಪ್ಪ ಮಾತನಾಡಿ ಶ್ರೇಷ್ಠ ಪುಸ್ತಕಗಳನ್ನು ಅಭ್ಯಾಸ ಮಾಡುವುದರಿಂದ ವಿದ್ಯಾರ್ಥಿಗಳಲ್ಲಿ ಉತ್ತಮ ವ್ಯಕ್ತಿತ್ವ ನಿರ್ಮಾಣಗೊಳ್ಳಲು ಸಹಕಾರಿಯಾಗಲಿದೆ ಎಂದರು.
ಪ್ರಾಧ್ಯಾಪಕರಾದ ರಾಮಾಂಜಿನಮ್ಮ,ಡಾ.ಶೈಲಜಾ ಸಪ್ತ ಗಿರಿ,ಡಾ.ಗುಣರಂಜನಿ,ಪ್ರೊ.ವಿಜಯ್ ಕುಮಾರ್ ಮದ್ದಿಲೇಟಿ,ಗ್ರಂಥಾಲಯದ ಸಿಬ್ಬಂದಿ ಶ್ರೀನಾಥರೆಡ್ಡಿ,ಗಂಗರಾಜು,ರಾಜು ಮತಿತ್ತರರು ಇದ್ದರು.
ವರದಿ-ತುಳಸಿ ನಾಯ್ಕ್