ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಸರ್ಕಾರಿ ಕಾಲೇಜು ಮೈದಾನದಲ್ಲಿ 2024 ರ ಲೋಕಸಭಾ ಚುನಾವಣೆಗೆ ಸಕಲ ಸಿದ್ಧತೆಗಳನ್ನು ನಡೆಸಿ ಹಾಗೂ ಅಭ್ಯರ್ಥಿಯ ಭವಿಷ್ಯವನ್ನು ನಿರ್ಧಾರ ಮಾಡುವ (ವಿದ್ಯುನ್ಮಾನ ಮತ ಯಂತ್ರ) ಮತ ಪೆಟ್ಟಿಗೆಗಳನ್ನು ಹಂಚಲಾಯಿತು.ಇದರಲ್ಲಿ ಸಾವಿರಾರು ಹಳ್ಳಿಗಳಿಗೆ ಬೂತ್ ಮಟ್ಟದಲ್ಲಿ ಚುನಾವಣೆಯ ಅಧಿಕಾರಿಗಳು ಸರ್ಕಾರಿ ಕಾರ್ಯಕರ್ತರಿಗೆ ಹಂಚಿದರು,ಈ ಮೂಲಕ ಚುನಾವಣೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಚುನಾವಣೆ ಸಮಯದಲ್ಲಿ ಸಕಲ ಸಿದ್ಧತೆಗಳನ್ನು ಚುನಾವಣಾ ಅಧಿಕಾರಿಗಳು ತಿಳಿಸಿದರು.ಈ ಸಂದರ್ಭದಲ್ಲಿ ಸಾವಿರಾರು ಸರ್ಕಾರಿ ಕಾರ್ಯಕರ್ತರು ಮತ ಪೆಟ್ಟಿಗೆಯನ್ನು ಹಿಡಿದು ಆಯಾ ಬೂತ್ ಮಟ್ಟಗಳಿಗೆ ತಲುಪಿದರು ಹಾಗೂ ಒಂದು ಮತ ಪೆಟ್ಟಿಗೆಗೆ ಒಬ್ಬ ಪೊಲೀಸ್ ಮತ್ತು ಒಬ್ಬ ಮಿಲಿಟರಿ ಯನ್ನು ಕಳಿಸಿಕೊಡಲಾಯಿತು ಹಾಗೂ 100 ಕ್ಕೂ ಹೆಚ್ಚು ಸರ್ಕಾರಿ ವಾಹನಗಳು ಸಹ ಎಲೆಕ್ಷನ್ ಸೇವೆಯಲ್ಲಿ ಕಾರ್ಯನಿರತವಾಗಿದ್ದವು.
ವರದಿ ಗಗನ್ ಸಾಮ್ರಾಟ್ ಶಿಡ್ಲಘಟ್ಟ