ಕಲಬುರಗಿ:ನಗರದ ನಾಗಾಂಬಿಕಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕಲಬುರಗಿ ಜಿಲ್ಲಾ ಕರ್ನಾಟಕ ಜಾನಪದ ಪರಿಷತ್ತು ಹಮ್ಮಿಕೊಂಡ ಈ ನಾಡಿನ ಜಾನಪದ ವಿದ್ವಾಂಸರಾದ ಡಾ.ಎಸ್.ಕೆ.ಕರೀಂಖಾನ್ ಅವರ ಬದುಕು ಬರಹ ಸರಣಿ ಉಪನ್ಯಾಸ ಮಾಲಿಕೆಯು ಸುಂದರವಾಗಿ ಜರುಗಿತು.ಒಬ್ಬ ಹುಡುಗ ಚಿಕ್ಕವನಿರುವಾಗಲೇ ಹೆತ್ತವರನ್ನು ಕಳೆದುಕೊಂಡು ಅತ್ಯಂತ ಆದರ್ಶ ಜೀವನ ಗೈದ ಡಾ.ಎಸ್. ಕೆ.ಕರೀಂಖಾನ್ ಅವರು ಕೇವಲ ಎಂಟನೇ ತರಗತಿಯವರೆಗೆ ಅಭ್ಯಾಸ ಮಾಡಿ ಓದು ನಿಲ್ಲಿಸಿ ಜಾನಪದ ಆಸಕ್ತಿಯನ್ನು ಬೆಳೆಸಿಕೊಂಡು ಜಾನಪದ ಪರಂಪರೆ ಉಳಿಸಿಕೊಂಡು ಹೋಗಲು ಕಾಲನಡಿಗೆಯ ಮೂಲಕ ಹಳ್ಳಿ ಹಳ್ಳಿಗಳಿಗೆ ತಿರುಗಿ ಜಾನಪದ ಹಾಡುಗಳನ್ನು ಸಂಗ್ರಹಿಸಿ ಹೆಸರಾದರು ಕರೀಂಖಾನ್ ಅವರು ಎಂದರು.ಮುಸ್ಲಿಂ ವ್ಯಕ್ತಿಯಾಗಿದ್ದರು ಕೂಡ ಇವರೊಬ್ಬ ಶರಣ ಜೀವಿಯಾಗಿ ಕನ್ನಡ,ಸಂಸ್ಕೃತ ಅಧ್ಯಯನ ಮಾಡಿದ ಒಬ್ಬ ಶ್ರೇಷ್ಠ ವ್ಯಕ್ತಿಯಾಗಿ ಶಕ್ತಿಯಾಗಿ ಶಿವಶರಣರಂತೆ ತ್ಯಾಗಿಯಾಗಿ ಆದರ್ಶ ಜೀವನ ನಡೆಸಿದವರು.ಅಷ್ಟೇ ಅಲ್ಲದೆ ಡಾ.ಕರೀಂಖಾನರು ದೇಶ ಭಕ್ತರಾಗಿದ್ದು,ಗಾಂಧೀಜಿಯವರ ಆದರ್ಶಗಳನ್ನು ಪಾಲಿಸಿತ್ತಾ,ಜಾನಪದದಲ್ಲಿ ಅನೇಕ ಕೃತಿಗಳನ್ನು ಹೊರತಂದಿದ್ದಾರೆ.ಇವರ ಸೇವೆ ಈ ನಾಡಿಗೆ ಅಚ್ಚ ಹಸಿರಾಗಿ ಉಳಿದಿದೆ ಎಂದು ಡಾ.ನೀಲಾಂಬಿಕಾ ಪೋಲಿಸ್ ಪಾಟೀಲರು ಉಪನ್ಯಾಸ ನೀಡಿದರು.ಕಾರ್ಯಕ್ರಮ ದೀಪ ಬೆಳಗಿಸಿ ಉದ್ಘಾಟಿಸಿದ ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಯವರು ಮಾತನಾಡುತ್ತಾ, ಜಾನಪದವು ಅಳಿವಿನ ಅಂಚಿನಲ್ಲಿರುವಾಗಲೇ ಮಾಲಿ ಪಾಟೀಲರು ಅದಕ್ಕೆ ಮೆರಗು ತರುತ್ತಿದ್ದಾರೆ,ಅವರೊಂದಿಗೆ ಸದಾ ನಾವು ನೀವು ಕೈ ಸೇರಿಸಿ ಜಾನಪದ ಉಳಿಸೋಣ ಎಂದರು.ಪ್ರಾಸ್ತಾವಿಕವಾಗಿ ಜಿಲ್ಲಾ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಸಿ.ಎಸ್.ಮಾಲಿಪಾಟೀಲರು ಮಾತನಾಡಿದರು.ಕಾರ್ಯಕ್ರಮದಲ್ಲಿದ್ದ ಮಕ್ಕಳ ಹಿರಿಯ ಸಾಹಿತಿ ಶ್ರೀ ಎ.ಕೆ.ರಾಮೇಶ್ವರರು ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಾದ ತಮ್ಮ ಸಲುವಾಗಿ ಹಮ್ಮಿಕೊಂಡಿದ್ದು ಜಾನಪದ ಝೇಂಕಾರವನ್ನು ನಾವು ನೀವು ಕೂಡಿ ಮಾ ಡೋಣವೆಂದು ಹೇಳಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕರು, ಪ್ರಾಚಾರ್ಯರಾದ ಡಾ.ಅರವಿಂದ ಬಿರಾದಾರ ಮಾತನಾಡುತ್ತಾ,ನಾವು ಸದಾ ಪಾಠ ಬೋಧನೆಯಲ್ಲಿಯೇ ತಲ್ಲಿನರಾಗುವ ನಾವುಗಳು ಇಂತಹ ಸುಂದರವಾದ ಜಾನಪದ ಕಾ ರ್ಯಕ್ರಮಗಳು ಹಮ್ಮಿಕೊಳ್ಳುವುದರಿಂದ ಸಾಂಸ್ಕೃತಿಕ ಲೋಕದ ಬಗ್ಗೆ ನಮಗೂ ಕೂಡ ಅರಿವಿಗೆ ಬರುತ್ತದೆ.ಈ ಕಾರ್ಯಕ್ರಮ ನಮ್ಮ ಕಾಲೇಜಿನಲ್ಲಿ ಇಟ್ಟುಕೊಂಡು ವಿದ್ಯಾರ್ಥಿನಿಯರಿಗೆ ಮನಮುಟ್ಟುವಂತೆ ಮಾಡಿದ ಮಾಲಿಪಾಟೀಲರಿಗೆ ಎಷ್ಟು ಕೃತಘ್ನತೆಗಳು ಹೇಳಿದರು ಕಡಿಮೆ,ನಾವು ಸದಾ ಅವರೊಂದಿಗೆ ಇರುತ್ತೇವೆ ಎಂದು ಹೇಳಿದರು.ಈ ಸಂದರ್ಭದಲ್ಲಿ ವಿಶೇಷವಾಗಿ ಈ ಪರಿಷತ್ತಿನಿಂದ ಮತ್ತು ಕಾಲೇಜಿನಿಂದ ಇತ್ತೀಚೆಗೆ ಸಾವಿತ್ರಿದೇವಿ ಫುಲೆ ಪ್ರಶಸ್ತಿ ಪುರಸ್ಕೃತರಾದ ಕವಿತ್ರಿ ಹಾಗೂ ಶಿಕ್ಷಕಿಯಾದ ಶ್ರೀಮತಿ ಮಲ್ಲಮ್ಮ.ಎಸ್.ಕಾಳಗಿ ಇವರಿಗೆ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.ವೇದಿಕೆಯ ಮೇಲೆ ಕರ್ನಾಟಕ ಜಾನಪದ ಪರಿಷತ್ತಿನ ಕಲಬುರಗಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಡಿ.ಪಿ.ಸಜ್ಜನ ಮತ್ತು ಇತರರು ಇದ್ದರು.ಈ ಕಾರ್ಯಕ್ರಮದಲ್ಲಿ ಕಲಬುರಗಿ ಜಿಲ್ಲಾ ಕನ್ಪನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಶ್ರೀ ಧರ್ಮಣ್ಣ ಧನ್ನಿ,ಕಾಳಗಿ ತಾಲೂಕಿನ ಅಧ್ಯಕ್ಷರಾದ ಶ್ರೀ ಸಂತೋಷ ಕುಡೋಳ್ಳಿ ಕಾಲೇಜಿನ ಆಡಳಿತಾಧಿಕಾರಿ ಶ್ರೀ ಅಕ್ಷಯ ಅ.ಬಿರಾದಾರ,ಶ್ರೀಮತಿ ಸಾಬೀಯ ಸುಲ್ತಾನ,ಪಾರ್ವತಿ,ಬಸವರಾಜ ಉಪನ್ಯಾಸಕರು ಸಿಬ್ಬಂದಿಯವರು ವಿದ್ಯಾರ್ಥಿನಿಯರು ಇದ್ದರು. ಕಾರ್ಯಕ್ರಮದ ನಿರೂಪಣೆ ಕು,ವೈಷ್ಣವಿ,ಪ್ರಾರ್ಥನೆ,ಕು,ಭಾಗ್ಯಶ್ರೀ ಶ್ರೀ ಹಾಗೂ ವೀರಮ್ಮ ಸ್ವಾಗತ,ಉಪನ್ಯಾಸಕರಾದ ಶ್ರೀಮತಿ ಮಹಾನಂದಾ ಮಾಲಿಪಾಟೀಲ,ವಂದನಾರ್ಪಣೆ,ಶ್ರೀ ಡಿ.ಪಿ.ಸಜ್ಜನ ವಹಿಸಿದರೆಂದು ಪತ್ರಿಕಾ ಪ್ರಕಟಣೆಯಲ್ಲಿ ಡಿ.ಪಿ.ಸಜ್ಜನ ತಿಳಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.