ಹಾವೇರಿ/ಶಿಗ್ಗಾಂವ:ಕೇಂದ್ರ ಸರಕಾರದ ಸಂಜೀವಿನಿ ಯೋಜನೆಯಲ್ಲಿ ಸ್ವಸಹಾಯ ಒಕ್ಕೂಟಗಳಿಗೆ ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಮತ್ತು ಸಬ್ಸಿಡಿ ಸಹಿತವಾಗಿ ವ್ಯಾಪಾರ ವಹಿವಾಟು ಮಾಡಿ 3 ಕೋಟಿ ಮಹಿಳೆಯರನ್ನು ಲಕ್ಷಾಧಿಪತಿಗಳನ್ನಾಗಿ ಮಾಡುವ ಯೋಜನೆಯನ್ನ ಈಗಾಗಲೇ ಮಾಡಲಾಗಿದೆ ಎಂದು ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಹೇಳಿದರು.
ತಾಲೂಕಿನ ಹಿರೇಬೆಂಡಿಗೇರಿ,ಹಿರೇಮಣಕಟ್ಟಿ, ಕಬನೂರ,ಹುಲಗೂರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮತಯಾಚನೆ ಮಾಡಿ ಮಾತನಾಡಿದ ಅವರು ಎಲ್ಲಾ ಹಳ್ಳಿಗಳಿಗೆ ಡೋನ್ ಕೊಟ್ಟು ಆ ಡೋನ್ ನಡೆಸಲು ಮಹಿಳೆಯರಿಗೆ ತರಬೇತಿ ಕೊಡಲಾಗುತ್ತಿದೆ.ಕೃಷಿ ಸಮ್ಮಾನ್ ನಿಧಿ ಯೋಜನೆ, ಆಯುಷ್ಮಾನ್ ಯೋಜನೆ ಮಾಡಲಾಗಿದೆ.ಜನತೆಗೆ ಹೊರೆಯಾಗದ ರೀತಿಯ ಯೋಜನೆಗಳನ್ನು ಕೇಂದ್ರ ಮೋದಿ ಸರಕಾರ ಮಾಡುತ್ತಿದೆ.
ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಎಲ್ಲಾ ದರಗಳನ್ನು ಏರಿಸಿ ಜನತೆಗೆ ಗ್ಯಾರಂಟಿಗಳ ನೆಪ ಹೇಳಿ ಒಬ್ಬರಿಂದ ಕಸಿದು ಒಬ್ಬರಿಗೆ ಕೊಡುವ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಜೋಶಿ ಅವರು, ಈಗಾಗಲೇ ಪಹಣಿ ಪತ್ರಿಕೆ,ಸ್ಟ್ಯಾಂಪ್ ದರ,ಬಾಂಡ್ ದರಗಳನ್ನ ಹೆಚ್ಚಿಸಿ ಜನತೆಗೆ ಕಷ್ಟ ತಂದೊಡ್ಡಿದ್ದಾರೆ ಎಂದರು.
ಮೋದಿಯವರು ದೇಶ ಸೇರಿದಂತೆ ಜೀವನದ ಭದ್ರತೆಯ ಗ್ಯಾರಂಟಿಯನ್ನು ಈಗಾಗಲೇ ಘೋಷಿಸಿದ್ದಾರೆ.ಕಾಂಗ್ರೆಸ್ ನವರು ಪಾಕಿಸ್ತಾನ್ ಜಿಂದಾಬಾದ್ ಎಂದವರಿಗೆ ರಕ್ಷಿಸುವ ಕಾರ್ಯ ಮಾಡುತ್ತಿದ್ದಾರೆ.ಟೆರರಿಸ್ಟ್ ಗಳು ಹೋಟೆಲ್ ಗಳಲ್ಲಿ ಬಾಂಬ್ ಹಾಕಿದರೂ ರಾಜ್ಯ ಸರ್ಕಾರ ಮೋದಿಯವರು ಮತ್ತು ಅಮಿತ್ ಶಾ ಅವರ ನೇತೃತ್ವದಲ್ಲಿ ಕಾಳಜಿ ವಹಿಸಿ ಆ ಟೆರರಿಸ್ಟಳನ್ನ ಹಿಡಿಯುವಂತೆ ಮಾಡಿದ್ದಾರೆ. ಕಾಂಗ್ರೆಸ್ ಸರಕಾರ ಮುಸ್ಲಿಂರನ್ನ ಓಲೈಸುವ ಕಾರ್ಯ ಮಾಡಿ ಈ ರೀತಿಯ ಆಡಳಿತವನ್ನು ನಡೆಸಿದ್ದರಿಂದ ಹುಬ್ಬಳ್ಳಿಯ ನೇಹಾ ಹಿರೇಮಠ ಎಂಬ ಹೆಣ್ಣು ಮಗಳನ್ನ ಬರ್ಬರ ಹತ್ಯೆ ಮಾಡುವಷ್ಟು ಧೈರ್ಯ ಅವರಿಗೆ ಬರುವಂತೆ ಮಾಡಿದ್ದಾರೆ,ಹೀಗಾಗಿ ಜನತೆ ಕಾಂಗ್ರೆಸ್ಸನ್ನ ತಿರಸ್ಕರಿಸುತ್ತಿದ್ದಾರೆ,ಆದ್ದರಿಂದ ಜೀವನದ ಭದ್ರತೆಯನ್ನು ಕೊಡುವುದು ಏಕ ಮಾತ್ರ ದೇಶದ ನಾಯಕ ಅದು ನರೇಂದ್ರ ಮೋದಿ ಅವರಿಂದ ಮಾತ್ರ ಸಾಧ್ಯ,ನಾವು ನಿಮ್ಮ ಜೊತೆ ಸದಾ ಇರುತ್ತೇವೆ.ಕ್ಷೇತ್ರಕ್ಕೆ ನಾನು ಬರುವುದು ಕಡಿಮೆಯಾಗಿದ್ದರೂ ಸಹಿತ ಜನತೆ ನನಗೆ ಬಹಳಷ್ಟು ಸಹಕಾರವನ್ನು ನೀಡಿದ್ದಾರೆ. ಮುಂದೆಯೂ ಸಹಿತ ಸಂಪೂರ್ಣ ಸಹಕಾರ ನೀಡಿ, ಬೊಮ್ಮಾಯಿಯವರು ಈ ಕ್ಷೇತ್ರದ ಶಾಸಕರಿದ್ದರು, ಅವರು ಸಹಿತ ಸಹಕಾರ ನೀಡಿ,ಬೊಮ್ಮಾಯಿಯವರು ಈ ಕ್ಷೇತ್ರದ ಶಾಸಕರಿದ್ದರು,ಅವರು ಸಹಿತ ಈಗ ಹಾವೇರಿ- ಗದಗ ಲೋಕಸಭಾ ಅಭ್ಯರ್ಥಿಗಳಾಗಿರುವುದರಿಂದ ಇನ್ನು ಮುಂದೆ ಇಲ್ಲಿಯ ಕೆಲಸ ಕಾರ್ಯಗಳಿಗೆ ನೇರವಾದ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ ಎಂದು ಜನರಿಗೆ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಭಾ ಜ ಪ ತಾಲೂಕಾ ಅದ್ಯಕ್ಷರು ಹಾಗೂ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿಗಾರ:ಮಂಜುನಾಥ ಪಾಟೀಲ