ಗದಗ ಜಿಲ್ಲೆಯ ರೋಣ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ಶ್ರೀ ಬಸವೇಶ್ವರರ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ಪುರಾಣ ಪ್ರಾರಂಭಿಸಲ್ಪಟ್ಟಿದ್ದು.
ಪುರಾಣ ಪ್ರವಚನಕಾರರಾಗಿ ಶ್ರೀ ಡಾ.ಪಂಡಿತ್ ಪುಟ್ಟರಾಜ ಕವಿ ಗವಾಯಿಯವರ ಶಿಷ್ಯಂದಿರಾದ ಶ್ರೀ ವೇದಮೂರ್ತಿ ಶೇಖರಯ್ಯ ಶಾಸ್ತ್ರಿಗಳು ಎಸ್
ಮಲಕಸಮುದ್ರಮಠ ರೋಣ,ಶ್ರೀ ವೀರೇಶ್ವರ ಪುಣ್ಯಾಶ್ರಮ ಗದಗ,
ಸಂಗೀತ:ಶ್ರೀ ವೇದಮೂರ್ತಿ ಶಿವಲಿಂಗಯ್ಯ ಗವಾಯಿಗಳು ಹಿರೇಮಠ ಸಾ:ಬಿಳೇಬಾಳ ತಾ:ಕುಂದಗೋಳ
ತಬಲಾ ಸೇವೆ:ಶ್ರೀ ರುದ್ರೇಶ ಕರಡಕಲ್ಲ
ಶ್ರೀ ವೀರೇಶ್ವರ ಪುಣ್ಯಶ್ರಮ ಗದಗ
ಇವರುಗಳ ಸುಮಧುರ ಸಂಗೀತದೊಂದಿಗೆ ಸಾಗಿ ಬಂದ ಪುರಾಣ ಮಂಗಲಗೊಳ್ಳುವದು.
ಕಾರ್ಯಕ್ರಮಗಳು:
9-5-2024 ರಂದು ಗುರುವಾರ ನಂದಿಪಟ ಆರೋಪಣ (ಬಸುಪಟ್ಟು)
10-5-2024 ಶುಕ್ರವಾರ ಬಸವ ಜಯಂತಿ ಕಾರ್ಯಕ್ರಮ ಮೇಟಿ ಬಂಧುಗಳ ಮನೆಯಿಂದ ಕಳಸ ತರುವುದು
12-5-2024 ರಂದು ರವಿವಾರ ಉಡಿ ತುಂಬುವ ಹಾಗೂ ಕುಂಬೋತ್ಸವ ಪುರಾಣ ಮೆರವಣಿಗೆ ನಂತರ ಪುರಾಣಮಂಗಲ ಹಿರೇಮಠದ ವೇದಮೂರ್ತಿಗಳ ನೇತೃತ್ವದಲ್ಲಿ ಮಧ್ಯಾಹ್ನ 12-25 ಕ್ಕೆ ಸಲ್ಲುವ ಅಭಿಜಿನ್ ಲಗ್ನದ ಶುಭ ಮುಹೂರ್ತದಲ್ಲಿ ಸಾಮೂಹಿಕ ವಿವಾಹಗಳು ನಂತರ ಶ್ರೀಗಳಿಂದ ಆಶೀರ್ವಚನ ಮತ್ತು ಮಹಾಗಣಾರಾಧನೆ ಅಂದೇ ಸಂಜೆಗೆ ಬಸವಣ್ಣ-ನೀಲಮ್ಮನವರ ಲಗ್ನ
13-5-2024 ಸೋಮವಾರ ಸಾಯಂಕಾಲ 5:00 ಗಂಟೆಗೆ ಸಕಾಲ ವಾದ್ಯ ವೈಭವಗಳೊಂದಿಗೆ ಹಾಗೂ ಸಕಾಲ ಬಿರದಾವಳಿಗಳೊಂದಿಗೆ ಬಹು ವಿಜೃಂಭಣೆಯಿಂದ ಶ್ರೀ ಬಸವೇಶ್ವರ ರಥೋತ್ಸವವು ಜರಗುವುದು.
ವರದಿ-ಮಲ್ಲಪ್ಪ.ಜಿ.ಸೊಂಟಿ