ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಮತದಾರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸುವ ಕುರಿತು
ಶಿವಮೊಗ್ಗ:ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಮತದಾರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಅಕ್ಟೋಬರ್ 25 ರ ವರೆಗೆ ಅವಕಾಶ ಕಲ್ಪಿಸಲಾಗಿದೆ.
ಅರ್ಹತೆ:
ಈಗಾಗಲೇ ಪದವಿ ಮುಗಿಸಿ ಮೂರು ವರ್ಷವನ್ನು ಪೂರ್ಣಗೊಳಿಸಿರುವ ಎಲ್ಲಾ ವ್ಯಕ್ತಿಗಳು ಮತದಾರರ ಪಟ್ಟಿಗೆ ಹೆಸರನ್ನು ಸೇರ್ಪಡೆಗೊಳಿಸಲು ಅರ್ಹರಾಗಿರುತ್ತಾರೆ ಸಂಬಂಧಿಸಿದ ನಮೂನೆ ಮತ್ತು ಪದವಿಯ ಮೂರು ವರ್ಷದ ಅಂಕ ಪಟ್ಟಿಯನ್ನು ಗೆಜೆಟೆಡ್ ಅಧಿಕಾರಿಗಳಿಂದ ಮೇಲು ರುಜು ಹಾಕಿಸಿ ತಮ್ಮ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿಯೊಂದಿಗೆ ತಮ್ಮ ವ್ಯಾಪ್ತಿಯ ತಾಲೂಕು ಕಚೇರಿಗೆ ನೀಡಿ ತಮ್ಮ ಹೆಸರು ಮತದಾರ ಪಟ್ಟಿಯಲ್ಲಿ ಬರುವಂತೆ ಎಲ್ಲರೂ ಕ್ರಮ ಕೈಗೊಳ್ಳುವುದು.
ತಾವು ಯಾವ ತಾಲೂಕು ಕಚೇರಿ ವ್ಯಾಪ್ತಿಗೆ ಒಳಪಡುತ್ತೀರೋ ಅಲ್ಲೇ ನೀಡಿ ತಮ್ಮ ತಮ್ಮ ಹೆಸರನ್ನು ಸೇರಿಸುವುದು.
ಈ ಪ್ರಕ್ರಿಯೆಯನ್ನು ಎಲ್ಲರೂ ಅಕ್ಟೋಬರ್ 25-2023ರ ಮೊದಲು ಪೂರ್ಣಗೊಳಿಸುವುದು.
ನೈರುತ್ಯ ಪದವೀಧರ ಕ್ಷೇತ್ರದ ಒಳಪಡುವ ಜಿಲ್ಲೆಗಳು:
ದಕ್ಷಿಣ ಕನ್ನಡ,ಉಡುಪಿ,ಶಿವಮೊಗ್ಗ,ಮಡಿಕೇರಿ, ಚಿಕ್ಕಮಗಳೂರು,ದಾವಣಗೆರೆ ಜಿಲ್ಲೆಯ ಹೊನ್ನಾಳಿ ಮತ್ತು ಚೆನ್ನಗಿರಿ ತಾಲೂಕು.
ವಿಶೇಷ ಸೂಚನೆ:ಪ್ರತಿ ಸಲದ ಚುನಾವಣೆಗೆ ಹೊಸದಾಗಿ ಹೆಸರನ್ನು ಮತ ಪಟ್ಟಿಗೆ ಸೇರಿಸುವುದು ಕಡ್ಡಾಯ ದಕ್ಷಿಣ ಕನ್ನಡ ಜಿಲ್ಲೆಯ ಪದವಿ ಪೂರೈಸಿದ ಎಲ್ಲಾ ಶಿಕ್ಷಕ ಬಂಧುಗಳು ಮತ್ತು ನಿಮ್ಮ ಪರಿಚಯದ ಪದವಿ ಪೂರೈಸಿದ ಅರ್ಹ ಪದವೀಧರರಿಗೆ ಮತ ಪಟ್ಟಿಗೆ ಹೆಸರನ್ನು ಸೇರ್ಪಡೆಗೊಳಿಸಲು ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಇದರ ಪದಾಧಿಕಾರಿಗಳು ವಿನಂತಿಸಿದ್ದಾರೆ.
ವರದಿ:ಕೊಡಕ್ಕಲ್ ಶಿವಪ್ರಸಾದ್