ಶಿವಮೊಗ್ಗ:ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು ಕೇಂದ್ರ ಸರ್ಕಾರ ಪುರಸ್ಕೃತ ರಾಷ್ಟ್ರೀಯ ಗೋಕುಲ್ ಮಿಷನ್ ಯೋಜನೆಯಡಿ ತಳಿ ಸಂವರ್ಧನೆಗೆ ಯೋಗ್ಯವಾದ ರಾಸುಗಳು ಕೃತಕ ಗರ್ಭಧಾರಣೆಗೆ ಒಳಪಡುವ ಪ್ರಮಾಣವನ್ನು ಹೆಚ್ಚಿಸುವ ಮತ್ತು ಕೃತಕ ಗರ್ಭಧಾರಣೆಯನ್ನು ಸೌಲಭ್ಯ ವಂಚಿತ ಪ್ರದೇಶಗಳಿಗೆ ತಲುಪಿಸುವ ಉದ್ದೇಶದಿಂದ ಹಳ್ಳಿಯ ನಿರುದ್ಯೋಗಿ ಯುವಕ/ ಯುವತಿಯರಿಗೆ ಸ್ವಯಂ ಉದ್ಯೋಗವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸ್ಥಳೀಯ ಮೈತ್ರಿ (ಮಲ್ಟಿ ಪರ್ಪಸ್ ಆರ್ಟಿಫಿಷಿಯಲ್ ಇನ್ಸೆಮಿನೇಷನ್ ಟೆಕ್ನಿಕ್ಸ್ ಇನ್ ರೂರಲ್ ಇಂಡಿಯಾ) ಕಾರ್ಯಕ್ರಮವನ್ನು ಅನುಷ್ಟಾನಗೊಳಿಸಿ, ತರಬೇತಿ ಪಡೆಯಲು ಆಸಕ್ತಿ ಹೊಂದಿರುವವರಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ 1 ತಿಂಗಳ ಕ್ಲಾಸ್ ರೂಂ ಭೋದನಾ ತರಬೇತಿ ಹಾಗೂ 2 ತಿಂದ ಪ್ರಾಯೋಗಿಕ ತರಬೇತಿಯನ್ನು ಇಲಾಖೆಯ ಪಶು ಆಸ್ಪತ್ರೆ/ಪಶು ಚಿಕಿತ್ಸಾಲಯಗಳಲ್ಲಿ ನೀಡಲಾಗುವುದು. ತರಬೇತಿಯ ಅವಧಿಯಲ್ಲಿ ಮತ್ತು ನಂತರ ನಿರ್ವಹಿಸುವ ಕೆಲಸಕ್ಕೆ ಅನುಗುಣವಾಗಿ ಪ್ರೋತ್ಸಾಹ ಧನ ನೀಡಲಾಗುವುದು.
ತರಬೇತಿ ಪಡೆಯಲು ಕಡ್ಡಾಯವಾಗಿ ಸ್ಥಳೀಯವಾಗಿ ಕಾರ್ಯನಿರ್ವಹಿಸಲು ಆಸಕ್ತರಾಗಿರಬೇಕು. ಕನಿಷ್ಠ ಎಸ್.ಎಸ್.ಎಲ್.ಸಿ.ತೇರ್ಗಡೆಯಾಗಿದ್ದು 18 ವರ್ಷಗಳ ಮೇಲ್ಪಟ್ಟವರಾಗಿರಬೇಕು.ತರಬೇತಿಯ ನಂತರ ಮೈತ್ರಿ ಕೇಂದ್ರದ ವ್ಯಾಪ್ತಿಯ ಹಳ್ಳಿಗಳಲ್ಲಿ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪಶುಗಳಿಗೆ ಕೃತಕ ಗರ್ಭಧಾರಣಾ ಕಾರ್ಯನಿರ್ವಹಿಸಲು ಸರ್ಕಾರದಿಂದ ಪ್ರೋತ್ಸಾಹ ಧನ ನೀಡಲಾಗುವುದು.
ಆಸಕ್ತಿಯುಳ್ಳವರು ನಿಗದಿತ ನಮೂನೆ ಅರ್ಜಿಯನ್ನು ತಾಲೂಕು ಮುಖ್ಯ ಪಶು ವೈದ್ಯಾಧಿಕಾರಿಗಳಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಎಸ್.ಎಸ್.ಎಲ್.ಸಿ. ಅಂಕಪಟ್ಟಿ, ಆಧಾರ್ ಕಾರ್ಡ್, ಚಾಲ್ತಿಯಲ್ಲಿರುವ ಪಾಸ್‍ಬುಕ್ ಜೇರಾಕ್ಸ್ ಪ್ರತಿ, 2 ಪಾಸ್‍ಪೋರ್ಟ್ ಸೈಜ್ ಪೋಟೋ, ರೂ. 100/-ಗಳ ಇ-ಸ್ಟ್ಯಾಂಪ್ ಪೇಪರ್‍ನಲ್ಲಿ ಅಫಿಡವಿಟ್, ಜಾತಿ ಪ್ರಮಾಣ ಪತ್ರದೊಂದಿಗೆ ಸಲ್ಲಿಸುವುದು.
ಹೆಚ್ಚಿನ ಮಾಹಿತಿಗಾಗಿ ತಾಲೂಕು ಪಶು ವೈದ್ಯಾಧಿಕಾರಿಗಳು, ಪಶು ಆಸ್ಪತ್ರೆ/ ಉಪನಿರ್ದೇಶಕರ ಕಚೇರಿ, ಪಶುಪಾಲನಾ ಇಲಾಖೆ, ಶಿವಮೊಗ್ಗ, ದೂ.ಸಂ.: 08182-222969/221428 ಇವರನ್ನು ಸಂಪರ್ಕಿಸುವುದು.
ವರದಿ:ಕೊಡಕ್ಕಲ್ ಶಿವಪ್ರಸಾದ್