ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಶ್ರೀ ವೀರಭದ್ರೇಶ್ವರ ದೇವಸ್ಥಾನದ ನೂತನ ರಥೋತ್ಸವದ ಕಳಸಾವರೋಹಣ

ಗದಗ ಜಿಲ್ಲೆಯ ನರಗುಂದ ತಾಲೂಕಿನ ಹದಲಿ ಗ್ರಾಮದಲ್ಲಿ ಇಂದು ವಾದ್ಯಗಳೊಂದಿಗೆ ಪೂಜ್ಯರ ಮತ್ತು ಶ್ರೀ ವೀರಭದ್ರೇಶ್ವರ ಕಮಿಟಿಯ ಸರ್ವ ಸದಸ್ಯರ ನೇತೃತ್ವದಲ್ಲಿ ಗ್ರಾಮದ ಸರ್ವ ಜನರ ಸಮ್ಮುಖದಲ್ಲಿ ನೆರವೇರಿತು.

ಹದಲಿ ಶ್ರೀ ವೀರಭದ್ರೇಶ್ವರ ಜಾತ್ರೆ:

ಗದಗ ಜಿಲ್ಲಾ ನರಗುಂದ ತಾಲೂಕಿನ ಹದಲಿ ಗ್ರಾಮದ 300 ವರ್ಷಗಳ ಇತಿಹಾಸವಿರುವ ಶ್ರೀ ವೀರಭದ್ರೇಶ್ವರ ದೇವಸ್ಥಾನದ ನೂತನ ರಥೋತ್ಸವ ಮತ್ತು ಜಾತ್ರಾ ಮಹೋತ್ಸವ ಮೇ 23 ರ ಆಗಿ ಹುಣ್ಣಿಮೆ ಸಕಲ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನೆರವೇರಿತು.

ಐತಿಹಾಸಿಕ ಹಿನ್ನೆಲೆ:
ನರಗುಂದದ ವೀರ ಅರಸ ಬಾಬಾಸಾಹೇಬ ಭಾವೆ ಸಂಸ್ಥಾನದ ಕಾಲದಿಂದಲೂ ಅಂದಿನಿಂದ ಇಂದಿನವರೆಗೆ ಹದಲಿ ಗ್ರಾಮದ ಪ್ರತಿಯೊಬ್ಬರೂ ತಮ್ಮ ಮನೆಯ ಆರಾಧ್ಯ ದೇವರಂತೆ ಶ್ರೀ ವೀರಭದ್ರೇಶ್ವರ ದೇವರನ್ನು ಆರಾಧಿಸುತ್ತಿದ್ದಾರೆ.ಶ್ರೀ ವೀರಭದ್ರೇಶ್ವರ ಹಾಗೂ ಗ್ರಾಮ ದೇವತೆಯರ ಬೆಲೆಬಾಳುವ ಬಂಗಾರದ ಆಭರಣಗಳನ್ನು ನರಗುಂದ ಉಪಖಜಾನೆ ಇಲಾಖೆ
ಅಧಿಕಾರಿಗಳು ತಹಸೀಲ್ದಾರ್ ಮುಖಾಂತರ ಖಜಾನೆಯಲ್ಲಿರುವ ಶ್ರೀ ವೀರಭದ್ರೇಶ್ವರಸ್ವಾಮಿಯ ಕಿರೀಟ,ಮುಖವಾಡ,ರುಂಡಮಾಲ,ತ್ರಿಮೂರ್ತಿ,ಗ್ರಾಮ ದೇವತೆಯರ ಮೂರ್ತಿ,ಬೆಳ್ಳಿಮೂರ್ತಿ,ಬಂಗಾರದ ಪದಕ,ಶ್ರೀ ವೀರಭದ್ರೇಶ್ವರ ಮೂರ್ತಿ
ಚಾಮರಚೌಡ,4 ಪಾದುಕೆಗಳು,ಕಿವಿಯೋಲೆ,ಕೆಂಪು ಹವಳದ ಸರ,ಹಣೆಪಟ್ಟಿ,ನಡುಪಟ್ಟಿ,ಬಸವಣ್ಣನ ಕೊರಳುಪಟ್ಟಿ ಸೇರಿ ಬೆಲೆಬಾಳುವ ಚಿನ್ನಾಭರಣಗಳನ್ನು ದೇವಸ್ಥಾನಕ್ಕೆ ತರಲಾಯಿತು.ಪೊಲೀಸ್,ಸಿಸಿಟಿವಿ ಕ್ಯಾಮರಾದ ಭದ್ರತೆಯಲ್ಲಿ ಎಲ್ಲಾ ಆಭರಣಗಳನ್ನು ಜಾತ್ರೆಯಲ್ಲಿ ಪ್ರದರ್ಶನಕ್ಕಿಡಲಾಗಿ ಜಾತ್ರಾ ಮಹೋತ್ಸವ ನಂತರ ಎಲ್ಲಾ ಆಭರಣಗಳನ್ನು ಮರಳಿ ಸರ್ಕಾರದ ಖಜಾನೆಗೆ ಒಪ್ಪಿಸುವ ಹೊಣೆಗಾರಿಕೆ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಟ್ರಸ್ಟ್ ಕಮಿಟಿ ಸದಸ್ಯರು ವಹಿಸಿಕೊಂಡಿದ್ದಾರೆ.

ನೂತನ ರಥ:
ವರವಿ ಗ್ರಾಮದ ರಥಶಿಲ್ಪಿ ಮೌನೇಶ ಪತ್ತಾರ ಅವರ ಕೈ ಚಳಕದಲ್ಲಿ ಸಾಗವಾನಿ 11 ಮರದ ಕಲಾಕುಸರಿಯಲ್ಲಿ ತೇರು ಅರಳಿಸಿದ್ದಾರೆ.ಅದ್ದೂರಿ ರಥೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.ಹಳೆಯ ರಥ ಶಿಥಿಲಗೊಂಡಿದ್ದರಿಂದ ಎರಡು ವರ್ಷಗಳಿಂದ ರಥೋತ್ಸವ ಸ್ಥಗಿತಗೊಂಡಿತ್ತು.ಗ್ರಾಮದ ಸದ್ಭಕ್ತರೆಲ್ಲರೂ ಸೇರಿ 1 ಕೋಟಿ ರೂ. ವೆಚ್ಚದಲ್ಲಿ ಬೃಹತ್ ತೇರು ನಿರ್ಮಿಸಿದ್ದಾರೆ.ನೂತನ ರಥ ಶುಧ್ಧೀಕರಣಕ್ಕಾಗಿ ಯಜ್ಞ,ಹೋಮ ಹವನವನ್ನು ಮಾಡಲಾಯಿತು.ಶ್ರೀಗಳು ಜನರಿಗೆ ಹಿತೋಪದೇಶವನ್ನು ಬೋಧಿಸಿದರು.ಸತತವಾಗಿ ಐದು ದಿನಗಳ ಕಾಲ ಪ್ರಸಾದ ವ್ಯವಸ್ಥೆಯನ್ನು ಅತಿ ಅಚ್ಚುಕಟ್ಟಾಗಿ ನಿರ್ವಹಿಸಲಾಗಿತ್ತು.ಪ್ರತಿ ದಿನ ಒಂದರಂತೆ ಬೆಲ್ಲದ ಬೆಳೆ,ಮಾವಿನ ಹಣ್ಣಿನ ಸೀಕರಣಿ, ಬುಂದೆ,ಶ್ಯಾವಗಿ ಪಾಯಸ ಮತ್ತು ಕೊನೆಯ ದಿನ ಗೋಧಿ ಹುಗ್ಗಿ ಪ್ರಸಾದವನ್ನು ಮಾಡಲಾಗಿತ್ತು. ರಥೋತ್ಸವದುದ್ದಕ್ಕೂ ಡೊಳ್ಳು ಕುಣಿತ,ಕರಡಿ ಮೇಳ, ಜಾನಪದ ನೃತ್ಯ,ಸರ್ವ ಜನಾಂಗದ ತೋಟವಾದ ಹದಲಿ ಗ್ರಾಮದ ಎಲ್ಲಾ ಭಕ್ತ ಮಹಾ ಜನತೆ ನೂತನ ರಥೋತ್ಸವವನ್ನು ವಿಜೃಂಭನೆಯಿಂದ ಆಚರಿಸಿ ಸಂತೋಷದಿಂದ ಶ್ರೀ ವೀರಭದ್ರ ದೇವರ ಕೃಪೆಗೆ ಪಾತ್ರರಾದರ ಮೂಲಕ ಐದು ದಿನಗಳ ಕಾಲ ಪ್ರವಚನ, ಸಂಗೀತ,ನಾಟಕ,ರಸಮಂಜರಿ ಕಾರ್ಯಕ್ರಮ,ಭಜನಾ ಪದ ಹೀಗೆ ಹಲವು ಕಾರ್ಯಕ್ರಮಗಳಿಂದ ಸಂತೋಷ ಭಕ್ತಿ ಭಾವದಲ್ಲಿ ಮಿಂದೆದ್ದರೇ,ಮಕ್ಕಳು ಜಾರು ಬಂಡೆ, ಜಂಪಿಗ್ ನಂತರ ಕ್ರೀಡೆಗಳಲ್ಲಿ ತಲ್ಲಿನರಾಗಿ ಆನಂದವನ್ನು ಅನುಭವಿಸಿದರು.ಇಷ್ಟೇ ಅಲ್ಲದೇ ಇನ್ನೂ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿ, ಭಾಗವಹಿಸಿ ರಥೋತ್ಸವಕ್ಕೆ ಮೆರುಗು ತಂದರು.

ವರದಿ ನಾಗರಾಜ ಪ್ರಚಂಡಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ