ಯಾದಗಿರಿ ಜಿಲ್ಲೆಯ ವಡಗೇರಾ ಪಟ್ಟಣ ಹಾಗೂ ತಾಲೂಕಿನ ಗ್ರಾಮೀಣ ಭಾಗದಲ್ಲಿ ಸೊಳ್ಳೆಗಳ ಹಾವಳಿಯಿಂದ ಜನ,ಜಾನುವಾರುಗಳು ತತ್ತರಿಸಿ ಹೋಗಿದ್ದಾರೆ.ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮಾತ್ರ ತೀವ್ರ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ವಡಗೇರಾ ತಾಲೂಕು ಅಧ್ಯಕ್ಷ ಅಬ್ದುಲ್ ಚಿಗಾನೂರ್ ಆರೋಪಿಸಿದ್ದಾರೆ. ಸೊಳ್ಳೆಗಳ ಕಾಟದಿಂದ ತಪ್ಪಿಸಿಕೊಳ್ಳಲು ಜನರು ಸೊಳ್ಳೆ ಪರದೆ, ಸೊಳ್ಳೆಬತ್ತಿ,ಆಲ್ ಔಟ್,ಗುಡ್ ನೈಟ್ ಕೊಯಿಲ ಮೊರೆ ಹೋಗಿದ್ದಾರೆ.ಸೊಳ್ಳೆಗಳ ಕಾಟದಿಂದ ಜಾನುವಾರಗಳ ಪರಿಸ್ಥಿತಿ ಅಂತೂ ಹೇಳತೀರದು ಮೂಕ ಪ್ರಾಣಿಗಳು ತುಂಬಾ ವೇದನೆ ಅನುಭವಿಸುತ್ತಿವೆ ಈ ಸೊಳ್ಳೆಗಳ ಉತ್ಪತ್ತಿಗೆ ಕೆಲವು ಕಡೆ ಗ್ರಾಮೀಣ ಭಾಗದಲ್ಲಿ ಚರಂಡಿ ಹೂಳು ಎತ್ತದಿರುವುದು ಮತ್ತು ಸ್ವಚ್ಛತೆ ಕಾಪಾಡಿದರುವುದು ಪ್ರಮುಖ ಕಾರಣವಾಗಿದೆ.ಸೊಳ್ಳೆಗಳು ಕಚ್ಚುತ್ತಿರುವುದರಿಂದ ಮಲೇರಿಯಾ ಡೆಂಗು ಟೈಫಾಯಿಡ್ ನಂತ ರೋಗಗಳು ಹರಡುತ್ತಿವೆ ಆದರೆ ಅಧಿಕಾರಿಗಳು ಮಾತ್ರ ಸ್ವಚ್ಛತೆ ಕಾಪಾಡಿಕೊಳ್ಳದೆ ಮತ್ತು ಫಾಗಿಂಗ್ ಮಾಡಿಸದೆ ನಿಷ್ಕಾಳಜಿ ವಹಿಸುತ್ತಿದ್ದಾರೆ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ವಡಗೇರಾ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡಿ ಫಾಗಿಂಗ್ ಮಾಡಿಸುವಂತೆ ಕರ್ನಾಟಕ ರಕ್ಷಣೆ ವೇದಿಕೆ ತಾಲೂಕು ಅಧ್ಯಕ್ಷ ಅಬ್ದುಲ್ ಚಿಗಾನೂರ ಆಗ್ರಹಿಸಿದ್ದಾರೆ.
ವರದಿ:ಶಿವರಾಜ ಸಾಹುಕಾರ್ ವಡಗೇರಾ