ಬಾಗಲಕೋಟೆ/ಅಮೀನಗಡ:ಸರ್ಕಾರಿ ಶಾಲೆಗಳಲ್ಲಿ ಎಲ್ಲಾ ಮೂಲಭೂತ ಸೌಲಭ್ಯಗಳು ಹೊಂದಿರುವ ಮೂಲಕ ಗುಣಾತ್ಮಕ ಶಿಕ್ಷಣ ನೀಡುತ್ತಿವೆ ಸಾರ್ವಜನಿಕರು,ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಾತಿ ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಾಸ್ಮಿನ್ ಕಿಲೇದಾರ ಹೇಳಿದರು.
ಪಟ್ಟಣ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ2 ಶಾಲೆಯಲ್ಲಿ 2024-25 ನೆ ಸಾಲಿನ ಶಾಲಾ ಪ್ರಾರಂಭೋತ್ಸವ ಹಾಗೂ ದಾಖಲಾತಿ ಆಂದೋಲನಕ್ಕೆ ಬಲೂನ ಹಾರಿ ಬಿಡುವುದರ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಸರ್ಕಾರಿ ಶಾಲೆಗಳಲ್ಲಿ ನುರಿತ ಅನುಭವ ತರಬೇತಿ ಪಡೆದಿರುವ ಶಿಕ್ಷಕರು ಇದ್ದು ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಮುಂಚೂಣಿಯಲ್ಲಿದ್ದಾರೆ.ಪಟ್ಟಣದ ಈ ಶಾಲೆ ಪಿ.ಎಂ.ಶ್ರೀ ಯೋಜನೆಯಲ್ಲಿ ಆಯ್ಕೆಯಾಗಿದ್ದು ಪ್ರಸಕ್ತ ಸಾಲಿನ ಎಲ್.ಕೆ.ಜಿ ಆರಂಭವಾಗುತ್ತಿದ್ದು ಇದರ ಸದುಪಯೋಗ ಸಾರ್ವಜನಿಕರು ಪಡೆದುಕೊಳ್ಳಬೇಕು ಮುಂದಿನ ದಿನಗಳಲ್ಲಿ ಇದು ಮಾದರಿ ಶಾಲೆ ಆಗಲಿದೆ ಎಂದರು.
ಬಿ.ಆರ್.ಸಿ.ಓ ವಿನೋದ ಭೋವಿ ಮಾತನಾಡಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ,ದೈಹಿಕ ಮಾನಸಿಕ ಸದೃಡರಾಗಿ ಸಮಾಜದಲ್ಲಿ ಉತ್ತಮ ನಾಗರೀಕರಾಗಲು ಸಾಧ್ಯ ಎಂದರು.
ಬಿ.ಆರ್.ಪಿ ಆರ್.ಎಂ ಬಾಗವಾನ ಮಾತನಾಡಿ ಪಿಎಂಶ್ರೀ ಆಯ್ಕೆಯಾಗಿರುವ ಈ ಶಾಲೆ ಮುಂದಿನ ನಾಲ್ಕು ವರ್ಷಗಳಲ್ಲಿ ಅಭಿವೃದ್ಧಿ ಹೊಂದಲಿದೆ ಸಾರ್ವಜನಿಕರು ಸರ್ಕಾರಿ ಶಾಲೆಗೆ ಉಚಿತವಾಗಿ ಮಕ್ಕಳನ್ನು ದಾಖಲಾತಿ ಮಾಡಿಸಿ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಹೇಳಿದರು.
ಇದೇ ಸಂದರ್ಭದಲ್ಲಿ ಎಲ್.ಕೆ.ಜಿ ಹಾಗೂ 1 ನೇ ತರಗತಿ ಪ್ರವೇಶ ಪಡೆದ ಮಕ್ಕಳಿಗೆ ಗುಲಾಬಿ ಹೂ ಮತ್ತು ಸಿಹಿ ನೀಡಿ ಸ್ವಾಗತಿಸಲಾಯಿತು.
ಡಯಟ್ ಉಪನ್ಯಾಸಕಿ ಕೆ.ಎ.ಚವ್ಹಾಣ,ತಾಲೂಕು ದೈಹಿಕ ಪರಿವೀಕ್ಷಕ ಎಸ್.ಟಿ.ಫೈಲ್,ಸಿ.ಆರ್.ಪಿ. ಅಶೋಕ್.ಎಮ್ಮಿ,ಮುಖ್ಯ ಗುರು ಎಂ.ಎಸ್.ಹರಗಬಲ್ಲ ಶಿಕ್ಷಕರಾದ ಬಿ.ಬಿ.ಭಾಪ್ರಿ,ಆರ್.ಎಂ.ಎಮ್ಮಿ. ಆಯ್.ಬಿ.ಬಾಪುರೆ,ಎಸ್.ಎಸ್.ಲಮಾಣಿ, ಮಲ್ಲಿಕಾರ್ಜುನ ಸಜ್ಜನ ಹಾಗೂ ಅಡುಗೆ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
ಕರುನಾಡಕಂದ ಸುದ್ದಿಪತ್ರಿಕೆ ಮತ್ತು ಆನ್‌ಲೈನ್ ತಾಣದ "ಕರುನಾಡ ಕಂದ ಜನಜಾಗೃತಿ ವೇದಿಕೆಯ ವಿಶೇಷ ಪುಟಕ್ಕೆ ಭೇಟಿ ನೀಡಿ