ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಗ್ರಾಮೀಣ ಪೋಲಿಸ್ ಠಾಣೆಯ ಹಿಂದುಗಡೆ ಇರುವ ವನಸಿರಿ ಫೌಂಡೇಶನ್ ನಿಂದ ಮರುಜೀವ ಪಡೆದ ಅಮರ ಶ್ರೀ ಆಲದ ಮರದ ಹತ್ತಿರ ಸರಕಾರಿ ಶಾಲೆಗಳನ್ನು ಹಸಿರುಮಯವಾಗಿಸಲು ವನಸಿರಿ ಫೌಂಡೇಶನ್ ನಿಂದ 10 ಸಾವಿರ ಸಸಿಗಳ ವಿತರಣೆ ಕಾರ್ಯಕ್ರಮವನ್ನು ಜೂನ್ 3 ಮತ್ತು ಜೂನ್ 4 ರಂದು ಹಮ್ಮಿಕೊಳ್ಳಲಾಗಿದೆ ಎಂದು ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಅಮರೇಗೌಡ ಮಲ್ಲಾಪೂರ ಅವರು ತಿಳಿಸಿದರು.
ಸಿಂಧನೂರು ನಗರದ ವನಸಿರಿ ಫೌಂಡೇಶನ್ ಕಾರ್ಯಾಲಯದಲ್ಲಿ ಮಾತನಾಡಿದ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಅಮರೇಗೌಡ ಮಲ್ಲಾಪೂರ ಅವರು ವನಸಿರಿ ತಂಡ ಹಲವಾರು ವರ್ಷಗಳಿಂದ ಸರಕಾರಿ ಶಾಲೆಗಳ ಹಸಿರುಕರಣ ಮಾಡಲು ಶ್ರಮಿಸುತ್ತಿದೆ.ನಮ್ಮ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚು ಬಿಸಿಲಿನ ತಾಪಮಾನ ಹೊಂದಿದ್ದು ಇದನ್ನು ತಗ್ಗಿಸುವ ಸಲುವಾಗಿ ಪ್ರತಿವರ್ಷ ಸುಮಾರು 1ಲಕ್ಷ ಗಿಡಗಳನ್ನು ನೆಡುವ ಗುರಿಯನ್ನು ಹೊಂದಲಾಗಿದೆ ಅದರಲ್ಲೂ ಸರಕಾರಿ ಶಾಲೆಗಳನ್ನೇ ಹಸಿರುಮಯವಾಗಿಸಲು ಮಾಡಲು ಮೊದಲ ಆದ್ಯತೆ ನೀಡುತ್ತಿದ್ದೇವೆ ಇದೇ ಜೂನ್ 5 ರಂದು ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಎಲ್ಲಾ ಸರಕಾರಿ ಶಾಲೆಗಳಲ್ಲಿ ಕಡ್ಡಾಯವಾಗಿ ಗಿಡಮರಗಳನ್ನು ಬೆಳಸಬೇಕು ಎಂಬ ಸದುದ್ದೇಶದಿಂದ ನಮ್ಮ ವನಸಿರಿ ತಂಡದಿಂದ ಈ ಬಾರಿ 10ಸಾವಿರ ಸಸಿಗಳನ್ನು ಸರಕಾರಿ ಶಾಲೆಗಳಲ್ಲೇ ನೆಡಬೇಕೆಂಬುದು ನಮ್ಮ ದ್ಯೇಯವಾಗಿದೆ.ಇದೇ ಜೂನ್ 3 ಮತ್ತು 4 ರಂದು ಸಿಂಧನೂರು ನಗರದ ಅಮರ ಶ್ರೀ ಆಲದ ಮರದ ಹತ್ತಿರ ಸುಮಾರು10 ಸಾವಿರ ಸಸಿಗಳನ್ನು ಉಚಿತವಾಗಿ ನೀಡಲಾಗುತ್ತಿದ್ದೇವೆ ಇದರ ಸದುಪಯೋಗವನ್ನು ಎಲ್ಲ ಸರಕಾರಿ ಶಾಲೆಗಳ ಶಿಕ್ಷಕರು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.