ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡ ಗ್ರಾಮದಲ್ಲಿ ಪೋಸ್ಟ್ ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀಯುತ ಅಶೋಕ್ ಪಾಂಡ್ರೆ ಇವರ ಸೇವಾ ನಿವೃತ್ತಿ ಕಾರ್ಯಕ್ರಮವನ್ನು ಜೈನಮಂದಿರದಲ್ಲಿ ಏರ್ಪಡಿಸಲಾಗಿತ್ತು.
ಆರ್ ಎಸ್ ಎಸ್ ನ ಸಂಚಾಲಕರಾದ ಶ್ರೀ ಸ್ವತಂತ್ರ ಸಿಂಧೆ ಅವರು ಮಾತನಾಡಿ ನಿವೃತ್ತಿ ಎಂದರೆ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಹೆಚ್ಚು ಸಮಯ ವಿಶ್ರಾಂತಿ ಪಡೆಯುವುದು. ನೀವು ಉತ್ತಮ ವೃತ್ತಿ ಜೀವನವನ್ನು ಹೊಂದಿದ್ದೀರಿ ಮತ್ತು ನಿಮ್ಮೊಂದಿಗೆ, ನಿಮ್ಮ ಕುಟುಂಬದೊಂದಿಗೆ ಮತ್ತು ನನ್ನಂತಹ ಸ್ನೇಹಿತರೊಂದಿಗೆ ಕಳೆಯಲು ನೀವು ಹೆಚ್ಚು ಸಮಯವನ್ನು ಹೊಂದಿದ್ದೀರಿ ಎಂದು ನನಗೆ ತುಂಬಾ ಖುಷಿಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಸದಸ್ಯರಾದ ಶ್ರೀ ಅಶೋಕ್ ಶಹಾ, ರಾಜು ಶಹಾ, ಪಿಕೆಪಿಎಸ್ ಸದಸ್ಯರಾದ ಗುರುನಾಥ್ ಜಕ್ಕಪ್ಪ ಹಾವಳಗಿ, ಮಾಜಿ ಪಿಕೆಪಿಎಸ್ ಅಧ್ಯಕ್ಷರಾದ ವಿಠ್ಠಲ ಗೌಡ ಈರಪ್ಪ ಗೌಡ ಪಾಟೀಲ್, ಗ್ರಾಮ ಪಂಚಾಯಿತಿಯ ಸದಸ್ಯರಾದ ವಿಠ್ಠಲ ಗೌಡ ಪಾಟೀಲ್, ಪಂಡಿತ್ ಕ್ಷತ್ರಿ, ಅಣ್ಣಾರಾಯ ಪಾಟೀಲ್, ಶ್ರೀಶೈಲ್ ಸಾವಳೇ, ಪವನ್ ನಿಂಬಾಳ, ಮಲ್ಲಿಕಾರ್ಜುನ್ ಹೊಸಮನಿ, ಮಹಾದೇವ್ ಶಿರಗೂರ, ಭೀಮನಗೌಡ ಪಾಟೀಲ್, ಬಾಬು ಶಿರೂರ್, ಶ್ರೀಮಂತ ತೋಳನೂರ, ಬಾಹುಬಲಿ ಪಾಂಡ್ರೆ, ಸುರೇಶ್ ಪಾಂಡ್ರೆ, ವಿಜಯಕುಮಾರ್ ಪಾಂಡ್ರೆ, ಮಹಾದೇವ ಹತ್ತರಕಿ, ಗುರು ತೇಲಿ, ವಿಲಾಸ ಅಂದೆವಾಡಿ, ರಾವ್ ಸಾಬ್ ಗೌಡ ಪಾಟೀಲ್, ಚಂದು ಬೂದಿಹಾಳ, ಅಣ್ಣಾರ ಅಂದೇವಾಡಿ ಮುತ್ತಣ್ಣ ಸ್ವಾಮಿ, ಕುಪೇಂದ್ರ ಕೋಳೆಕರ್, ಮುಂತಾದವರು ಅಶೋಕ್ ಪಾಂಡ್ರೆ ಇವರನ್ನು ಸನ್ಮಾನಿಸಿದರು.
ವರದಿ ಮನೋಜ್ ನಿಂಬಾಳ