ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಹಂಡಿತವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಇಂದು ವಿಶ್ವ ತಂಬಾಕು ರಹಿತ ದಿನಾಚರಣೆಯನ್ನು ಆಚರಣೆ ಮಾಡಲಾಯಿತು.ಈ ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಕೆಲ್ಲೂರು ಆರೋಗ್ಯ ನಿರೀಕ್ಷಣಾಧಿಕಾರಿಯಾದ ರವಿ ಹೆಚ್ಎಸ್ ರವರು ಈ ಕಾರ್ಯಕ್ರಮದಲ್ಲಿ ತಂಬಾಕಿನಿಂದ ಆಗುವ ದುಷ್ಪರಿಣಾಮಗಳು ಹಾಗೂ ಸ್ವಚ್ಛತೆ ನೀರಿನ ಬಗ್ಗೆ ನಮ್ಮ ಪರಿಸರದಲ್ಲಿ ಹೇಗಿರಬೇಕು ಎಂದು ಮಕ್ಕಳಿಗೆ ಹಾಗೂ ಅಡಿಗೆ ಸಿಬ್ಬಂದಿ ಅವರಿಗೂ ಸಹ ಪರಿಸರದ ಅರಿವು ಮತ್ತು ನಾವು ಹೇಗೆ ಪರಿಸರವನ್ನು ಮತ್ತು ಸುತ್ತಮುತ್ತಲಿನ ವಾತಾವರಣವನ್ನು ಶುಚಿಯಾಗಿ ಹೇಗೆ ಇಟ್ಟುಕೊಳ್ಳಬೇಕೆಂದು ಅರಿವು ಮೂಡಿಸಿದರು ಈ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರಾದ ಕಾಂತಾಚಾರ್ಯರು ಮಾತನಾಡಿ ನಮ್ಮ ಪರಿಸರದಲ್ಲಿ ನಾವು ಹೇಗೆ ಇರಬೇಕು ಮತ್ತು ಶೌಚಾಲಯವನ್ನು ಹೇಗೆ ಬಳಸಬೇಕು ಮಕ್ಕಳನ್ನು ಅಡಿಗೆ ಸಿಬ್ಬಂದಿ ಅವರು ಯಾವ ರೀತಿ ನೋಡಿಕೊಳ್ಳಬೇಕೆಂದು ತಿಳಿಸಿದರು ನಾವೆಲ್ಲರೂ ಸೇರಿ ಪರಿಸರವನ್ನು ಉಳಿಸಿ ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಸೂಚಿಯಾಗಿ ಇರಬೇಕೆಂದು ತಿಳಿಸಿದರು.
ಮಳೆಗಾಲದ ಸಂದರ್ಭದಲ್ಲಿ ಮಳೆಯ ನೀರನ್ನು ನಿಲ್ಲದ ಹಾಗೆ ಹರಿದು ಹೋಗುವಂತೆ ಹಾಗೂ ಶುದ್ಧ ನೀರನ್ನು ಬಳಸುವುದರ ಬಗ್ಗೆ ಅಧಿಕಾರಿಗಳು ತಿಳಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷರಾದ ಹೆಚ್ ಆರ್ ಶಂಕರ್ ವಹಿಸಿದರು ಗ್ರಂಥಾಲಯ ಮೇಲ್ವಿಚಾರಕರಾದ ಹೆಚ್ ಕೆ ಪ್ರೇಮ್ ಕುಮಾರ್ ರವರು ಅಂಗನವಾಡಿ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ವಾಟರ್ ಮ್ಯಾನ್ ಎಸ್ ಡಿ ಎಂ ಸಿ ಸದ್ಯಸರು ಶಾಲಾ ಮಕ್ಕಳು ಹಾಜರಿದ್ದರು.
ವರದಿ-ಹೆಚ್.ಆರ್.ಶಂಕರ್