ಸಿರುಗುಪ್ಪ : ತಾಲೂಕಿನ ಆಂಧ್ರಪ್ರದೇಶದ ಗಡಿಗ್ರಾಮದ ಬಿ ಎಂ ಸೂಗೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ವಿಧ್ಯಾರ್ಥಿನಿ ಕುಮಾರಿ ಬಿ ಅನಿತ ರಾಷ್ತ್ರಮಟ್ಟದ ಮತದಾರರ ಕುರಿತು ಬಳ್ಳಾರಿ ಜಿಲ್ಲೆಯ ಜಿಲ್ಲಾಪಂಚಾಯತ್ ನ ನಜೀರಸಾಬ್ ಸಭಾಂಗಣದಲ್ಲಿ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ, ವಿಧ್ಯಾರ್ಥಿನಿಯಾದ ಕುಮಾರಿ ಬಿ ಅನಿತ ತಾಲೂಕಿನ ಕುಗ್ರಾಮವಾದ ಅಲಬನೂರು ಗ್ರಾಮದ ವೆಮಣ್ಣ ಮತ್ತು ಪಕ್ಕೀರಮ್ಮ ದಂಪತಿಗಳ ಕೃಷಿ ಕುಟುಂಬದಲ್ಲಿ ಜನಿಸಿ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಾಂಗ ಮಾಡುತ್ತ ಸ್ವೀಪ್ ಸಮಿತಿಯ ಮತದಾರರ ದಿನಾಚಾರಣೆಯ ಅಂಗವಾಗಿ ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಗಿ ಶಾಲೆಗೂ ಮತ್ತು ಗ್ರಾಮಕ್ಕೂ ಗೌರವ ತಂದ ಈ ವಿದ್ಯಾರ್ಥಿನಿಯನ್ನು ಕ್ಷೇತ್ರಶಿಕ್ಷಣಾಧಿಕಾರಿ ಪಿ ಡಿ, ಭಜಂತ್ರಿ ಆ ಶಾಲೆಯ ಮುಖ್ಯೋಪಾಧ್ಯಾಯ ಬಗ್ಗೂರಪ್ಪ ಹಾಗೂ ಶಿಕ್ಷಕರುಗಳಾದ ಮಾಧವಾಚಾರ್ಯ, ಶೀಮತಿ ಡಿ, ಮಲ್ಲಮ್ಮ, ಯೋಗೀಶ್, ಮಾರುತಿ, ಪಂಪಾಪತಿ, ಚರಣ್, ಆದಿಬಸಪ್ಪ ಮತ್ತು ಕರ್ನಾಟಕ ಪತ್ರಕರ್ತರ ಸಂಘದ ಸಿರುಗುಪ್ಪ ತಾಲೂಕ ಅಧ್ಯಕ್ಷರು ಮತ್ತು ಪ್ರಜಾ ಎಕ್ಸ್ಪ್ರೆಸ್ ತೆಲುಗು ದಿನ ಪತ್ರಿಕೆಯ ಬಳ್ಳಾರಿ ಜಿಲ್ಲಾ ಸ್ಟಾಫ್ ರಿಪೊರ್ಟರ್ ಹಾಗೂ ಸಿರುಗುಪ್ಪ ತಾಲೂಕ ವರದಿಗಾರರಾದ ಎಂ, ಡಿ, ಶೇಕ್ಷಾವಲಿ ಇವರೊಂದಿಗೆ ಶಾಲೆಯ ವಿದ್ಯಾರ್ಥಿಗಳು ಮತ್ತು ಸಿಬ್ಬಂಧಿ ವರ್ಗ ಸೇರಿ ಗ್ರಾಮಕ್ಕೂ ಮತ್ತು ಶಾಲೆಗೆ ಹಾಗೂ ತನ್ನ ಕುಟಂಬದ ತಂದೆ ತಾಯಿಗಳಿಗೆ ಕೀರ್ತಿ ಗೌರವ ತಂದ ವಿಧ್ಯಾರ್ಥಿನಿ ಕುಮಾರಿ ಬಿ, ಅನಿತಾ ಇನ್ನು ಹೆಚ್ಚಿನ ಸಾಧನೆ ಮಾಡಲೆಂದು ಹಾರೈಸಿ ಅಭಿನಂದಿಸಿದರು.
ವರದಿಗಾರ:ಪವನ್ ಕುಮಾರ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.