ಗದಗ:ನಾಡು ನುಡಿಗಾಗಿ ವಿಶೇಷ ಸಾಧನೆ ಮಾಡುತ್ತಿರುವ ಸಾಧಕರ ಪುಸ್ತಕಕ್ಕೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಜಂತಲಿ ಶಿರೂರು ಗ್ರಾಮದ ಜನಪದ ಕಲಾವಿದ ಶ್ರೀ ಗವಿಶಿದ್ಧಯ್ಯ ಹಾಗೂ ಅವರ ಧರ್ಮಪತ್ನಿ ಕವಯಿತ್ರಿ ಭಾಗ್ಯ ಶ್ರೀ ಹಳ್ಳಿಕೇರಿಮಠ ಆಯ್ಕೆ ಆಗಿದ್ಧಾರೆ.
ಶ್ರೀ ಮುತ್ತು ವಡ್ಡರ ಸಂಪಾದಕೀಯದ ಸಾಧಕರ ಸಾಧನೆಯ ಪರಿಚಯದ ಎಲೆ ಮರೆಕಾಯಿಗಳು ಪುಸ್ತಕಕ್ಕೆ ಹಳ್ಳಿಕೇರಿಮಠ ದಂಪತಿಗಳು ಆಯ್ಕೆಗೊಂಡಿದ್ಧು ಲಯನ್ಸ ಕ್ಲಬ್ ಆಫ್ ಮೈಸೂರು ಮಿಲೇನಿಯಂ ಮತ್ತು ಕನ್ನಡ ನುಡಿ ಮುತ್ತು ಸಾಹಿತ್ಯ ವೇದಿಕೆ ಕರ್ನಾಟಕ,ನಿಸರ್ಗ ಸಂಗೀತ ಮಹಾವಿದ್ಯಾಲಯ ಸಂಘ (ರಿ.) ಹನುಮಸಾಗರ ಹಾಗೂ ಸಂಜನಾ ಬಳಗ ಪ್ರತಿಷ್ಠಾನ ಮೈಸೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ಇದೇ ದಿನಾಂಕ 9-6-2024 ರಂದು ಮೈಸೂರಿನ ಹೊಸಮಠ ಶ್ರೀ ನಟರಾಜ ಶಿಕ್ಷಣ ಸಂಸ್ಥೆಯ ಸೆಮಿನಾರ್ ಹಾಲ್ ದಲ್ಲಿ ನಡೆಯುವ ಸಮಾರಂಭದಲ್ಲಿ ಕೃತಿ ಲೋಕಾರ್ಪಣೆಯಾಗಲಿದೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.