ಈ ಬಾರಿ ಶಾಸಕ ಸ್ಥಾನ ಸ್ಥಳೀಯರಿಗೋ.. ಹೊರಗಿನವರಿಗೋ..?
ಹಾವೇರಿ:ಮಾಜಿ ಸಿಎಂ,ಶಾಸಕ ಬಸವರಾಜ ಬೊಮ್ಮಾಯಿ ಸಂಸದರಾಗಿದ್ದರಿಂದ ಶಿಗ್ಗಾವಿ-ಸವಣೂರ ಕ್ಷೇತ್ರದ ಉಪ ಚುನಾವಣೆಯತ್ತ ಆಕಾಂಕ್ಷಿಗಳ ಚಿತ್ತ ನೆಟ್ಟಿದೆ.ಈ ಬಾರಿ ಶಾಸಕ ಸ್ಥಾನ ಸ್ಥಳೀಯರಿಗೋ..ಹೊರಗಿನವರಿಗೋ..?ಎಂಬ ಚರ್ಚೆ ಆರಂಭವಾಗಿದೆ.ಬಹುತೇಕ 6 ತಿಂಗಳಲ್ಲಿ ಉಪ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಲಿದ್ದು, ಕಾಂಗ್ರೆಸ್-ಬಿಜೆಪಿ ಹಳೆ ಮತ್ತು ಹೊಸ ಆಕಾಂಕ್ಷಿಗಳಲ್ಲಿ ಶಾಸಕರಾಗುವ ಆಸೆ ಚಿಗುರೊಡೆದಿದೆ.
ಕಾಂಗ್ರೆಸ್-ಬಿಜೆಪಿ ಮುಖಂಡರ ಮೇಲೆ ಒತ್ತಡ
ಮಾಜಿ ಸಿಎಂ ಬೊಮ್ಮಾಯಿ ಪಟ್ಟ ಯಾರಿಗೆ..?
ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಶಿಗ್ಗಾವಿ ಕ್ಷೇತ್ರವನ್ನು 2008ರಿಂದ ನಾಲ್ಕು ಬಾರಿ ಬಿಜೆಪಿ ವಶಕ್ಕೆ ತೆಗೆದುಕೊಂಡಿದ್ದು,ಈಗ ಕಾಂಗ್ರೆಸ್ ಬಿಜೆಪಿ ಎರಡು ಪಕ್ಷಗಳಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಹೆಚ್ಚಾಗಿದೆ. ಹೌದು..ಹಾವೇರಿ ಲೋಕಸಭಾ ಕ್ಷೇತ್ರದ ಸಂಸದರಾಗಿ ಬೊಮ್ಮಾಯಿ ಆಯ್ಕೆಯಾಗುತ್ತಿದ್ದಂತೆ ಆಕಾಂಕ್ಷಿಗಳು, ಗೆಲುವಿನ ಲೆಕ್ಕಾಚಾರದೊಂದಿಗೆ ಟಿಕೆಟ್ ಪಡೆಯುವತ್ತ ತಮ್ಮ ಪಕ್ಷದ ವರಿಷ್ಠರ ಮೇಲೆ ಒತ್ತಡ ತರುವ ಕೆಲಸ ಮಾಡುತ್ತಾ,ಕರೆ ಮಾಡಿ ನಾನಾ ಕಸರತ್ತು ಶುರುವಿಟ್ಟಿದ್ದಾರೆ.ಬೊಮ್ಮಾಯಿ ಅಪ್ತ ವಲಯದಲ್ಲಿ ಗುರುತಿಸಿಕೊಂಡ ಶ್ರೀಕಾಂತ ದುಂಡಿಗೌಡ್ರ ಜತೆಗೆ ಶಿವಪ್ರಸಾದ ಸುರಗಿಮಠ,ಶಶಿಧರ ಯಲಿಗಾರ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲಿ ಪ್ರಮುಖರಾಗಿದ್ದಾರೆ. ಬೊಮ್ಮಾಯಿ ಪಕ್ಷದ ಟಿಕೆಟ್ ಕೊಡಿಸಿ ತಮ್ಮ ಉತ್ತರಾಧಿಕಾರಿಯನ್ನಾಗಿ ಯಾರನ್ನು ಮಾಡುತ್ತಾರೋ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.
ಮತ್ತೊಂದಡೆ 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋಲುಂಡ ಯಾಸೀರಖಾನ್ ಪಠಾಣ,ಟಿಕೆಟ್ ಪಡೆಯುವ ಕಸರತ್ತು ತೀವ್ರಗೊಳಿಸಿದ್ದಾರೆ.ಈ ನಡುವೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯ ಎಂ.ಎಂ.ಭದ್ರಾಪೂರ ಈಗ ಸಚಿವ ಪ್ರಿಯಾಂಕಾ ಖರ್ಗೆ ಮೂಲಕ ಎಐಸಿಸಿ ಮಟ್ಟದಲ್ಲಿ ಲಾಬಿ ನಡೆಸಿದ್ದಾರೆ. ಮೂಲತಃ ತಡಸದವರಾಗಿರುವ ಎಂ.ಎಂ.ಭದ್ರಾಪೂರ ಕಾಂಗ್ರೆಸ್ ಟಿಕೆಟ್ ಗಾಗಿ ಕಸರತ್ತು ನಡೆಸಿದ್ದು,ಟಿಕೆಟ್ ಪಡೆದರೂ ಅಚ್ಚರಿಪಡಬೇಕಾಗಿಲ್ಲ ಜತೆಗೆ ಮಾಜಿ ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ, ಮಾಜಿ ಶಾಸಕ ಸೈಯ್ಯದ ಅಜ್ಜಂಪೀರ ಖಾದ್ರಿ ಕೈ ಟಿಕೆಟ್ ಪಡೆದುಕೊಳ್ಳುವ ಯುತ್ನದಲ್ಲಿದ್ದಾರೆ.ಎರಡು ಪಕ್ಷದಲ್ಲಿ ವರಿಷ್ಠರು ಸ್ಥಳೀಯ ಆಕಾಂಕ್ಷಿಗಳಿಗೆ ಟಿಕೆಟ್ ಕೊಡುತ್ತಾರೋ?ಹೊಸ ಮುಖಗಳಿಗೆ ಮಣೆ ಹಾಕುತ್ತಾರೋ..?ಕಾದು ನೋಡಬೇಕಿದೆ…
ವರದಿ-ಮಂಜುನಾಥ ಪಾಟೀಲ,ಶಿಗ್ಗಾಂವ