ಕೊಪ್ಪಳ ತಾಲೂಕಿನ ಹಳೆ ಗೊಂಡಬಾಳ ಎರಡನೇ ಅಂಗನವಾಡಿ ಕೇಂದ್ರದಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಶ್ರೀಮತಿ ಪಲ್ಲವಿ ಪೊಲೀಸ್ ಪಾಟೀಲ್, ಶಿಕ್ಷಕಿಯ ನೇತೃತ್ವದಲ್ಲಿ ಅಂಗನಾಡಿಯ ತಾಯಂದಿರು ಮಕ್ಕಳೊಂದಿಗೆ ಸಸಿಗಳನ್ನು ನೆಟ್ಟರು ಇದೇ ಸಮಯದಲ್ಲಿ ಶ್ರೀಮತಿ ಪಲ್ಲವಿ ಮಾತನಾಡುತ್ತಾ ಪ್ರತಿಯೊಂದು ಮಗು ಪರಿಸರದ ಬಗ್ಗೆ ಪೋಷಕರು ಜಾಗೃತಿಯನ್ನು ಮೂಡಿಸಬೇಕು,
ಪ್ರತಿ ವರ್ಷ ವಾಯು ಮಾಲಿನ್ಯ,ಪ್ಲಾಸ್ಟಿಕ್ ತ್ಯಾಜ್ಯದಿಂದ ಇಂಧನ ಸಂರಕ್ಷಣೆ ಮತ್ತು ಸುಸ್ಥಿರ ಬಳಕೆಯವರೆಗೆ ನಿರ್ದಿಷ್ಟ ಪರಿಸರ ಕಾಳಜಿಯ ಮೇಲೆ ಬೆಳಕು ಚೆಲ್ಲಲು ನಿರ್ದಿಷ್ಟ ವಿಷಯವಿದೆ.ಪ್ರತಿ ವರ್ಷ ಜೂನ್ 5 ರಂದು ಪರಿಸರ ದಿನಾಚರಣೆ ಆಚರಣೆ ಮಾಡಲಾಗುತ್ತದೆ, 2024ರ ವಿಶ್ವ ಪರಿಸರ ದಿನದ ಥೀಮ್ ‘ಭೂಮಿ ಮರುಸ್ಥಾಪನೆ,ಮರುಭೂಮೀಕರಣ ಮತ್ತು ಬರ ಸ್ಥಿತಿಸ್ಥಾಪಕತ್ವ’.ಈ ಕಾರ್ಯಕ್ರಮದ ಘೋಷವಾಕ್ಯ “ನಮ್ಮ ಭೂಮಿ,ನಮ್ಮ ಭವಿಷ್ಯ”.ನಾವು ಜನರೇಷನ್ ಪುನಃಸ್ಥಾಪನೆಯಾಗಿದ್ದೇವೆ ಎಂದರು.ಈ ಸಂದರ್ಭದಲ್ಲಿ ,ಮಕ್ಕಳು ತಾಯಂದಿರಾದ,ಶ್ರೀಮತಿ ಶೈಲಜಾ,ಸಿದ್ದಮ್ಮ,ಕವಿತಾ,ಆಶಾ ಕಾರ್ಯಕರ್ತೆಯಾದ ಶ್ರೀಮತಿ ಅನ್ನಪೂರ್ಣಮ್ಮ,ಶಾಲೆ ಶಿಕ್ಷಕಿ ಶ್ರೀಮತಿ ಪಲ್ಲವಿ,ಸಹಾಯಕಿಯರು,ಪೋಷಕರು ಮಕ್ಕಳು ಭಾಗಿಯಾಗಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.