ಸೂರ್ಯನ ಬೆಳಕು ಚಂದ್ರನ ಮೇಲೆ
ಚಂದ್ರನಿಂದ ಬೆಳಕು ಭೂಮಿಯ ಮೇಲೆ
ಆಕಾಶದಲ್ಲಿ ಮೂಡಿದೆ ಕರಿಯ ಮೋಡ
ಭೂಮಿಗೆ ಬಯಸಿದೆ ಮಳೆಯ ಅಂದ
ಕಪ್ಪು ಬಣ್ಣದ ಮಣ್ಣಿನಲ್ಲಿ ಹಸಿರಿನ ಸಿರಿ
ಬೇಸಿಗೆಯು ಮೂಗಿಸಿ ಮಿರ್ಗ ಹೊಡಿತು
ರೈತನ ಮುಖದಲ್ಲಿ ಹಸಿರು ಮೂಡಿತ್ತು
ನಿಸರ್ಗದ ಅರಮನೆಯು ಖುಷಿ ತಂದಿತು
ಹೂವನವು ಮದುಮಗಳ ತರ ಸಿಂಗಾರ
ಯಾಲ್ಲಿ ನೋಡಿದರು ಸಾಕು ಹಸಿರು ಊರು
ಗಮನ ಸೆಳೆಯಲು ಕಂಡೆ ಕೇಸರಿ ಬಿಳಿ ಹಸಿರು
ಮನೆಯ ಹಿತ್ತಲದಲ್ಲಿ ಇರಲಿ ಒಂದು ಮರ
ಪರಮಾತ್ಮನೆ ನೀಡುತ್ತಾನೆ ಸಂಪತ್ತು ತಿಳಿದು
ಊಟಕ್ಕೆ ಕುಳಿತಾಗ ಊಟದ ಅರಿವು ತಿಳಿವುದು
ನಿಸರ್ಗ ಊಳಿದರೆ ಊರೆಲ್ಲಾ ವನಕಂಡುಬರುತ್ತದೆ
ಮನಸ್ಸು ಹಸಿರುವಾದರೆ ಉಸಿರು ಉಳಿಯುವುದು
-ಮಹಾಂತೇಶ ಖೈನೂರ,ಸಾ.ಯಾತನೂರ