ಕಲಬುರಗಿ:ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಕನ್ನಡ ಭೂಮಿ ಜಾಗೃತಿ ಸಮಿತಿಯ ಉತ್ತರ ಕರ್ನಾಟಕ ವಕ್ತಾರ ಆನಂದ ತೆಗನೂರ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು ದರ್ಶನ್ ಅನೇಕ ಚಿತ್ರಗಳನ್ನು ಮಾಡಿ ಸಮಾಜ ತಿದ್ದುವ ಕೆಲಸ ಮಾಡಿದ್ದರು ಆದರೆ ನಿಜ ಜೀವನದಲ್ಲಿ ಒಬ್ಬ ಭಿನ್ನವಾದ ವ್ಯಕ್ತಿಯಾಗಿದ್ದಾರೆ.
ಕೊಲೆಯಾದ ರೇಣುಕಾ ಸ್ವಾಮಿ ತಂದೆ-ತಾಯಿಯ ನೋವು ಎಂಥವರಿಗೂ ಕಣ್ಣೀರು ತರಿಸಿದೆ.ಒಂದು ವರ್ಷದ ಕೆಳಗೆ ಮದುವೆ ಆಗಿ,ಪತ್ನಿ ಗರ್ಭಿಣಿ ಇದ್ದಾರೆ. ಈ ಸಂದರ್ಭದಲ್ಲಿ ಪತಿಯನ್ನು ಕಳೆದುಕೊಂಡ ಪತ್ನಿ ಗತಿ ಏನಾಗಬೇಡ ಎಂದು ಪ್ರಶ್ನಿಸಿದ ಅವರು,ಇಂತಹ ಕೊಲೆ ಮಾಡಿರುವ ದರ್ಶನ್ ಒಬ್ಬ ಅಮಾನವೀಯ ಹಾಗೂ ಕ್ರೂರ ವ್ಯಕ್ತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.ರೇಣುಕಾಸ್ವಾಮಿ ದರ್ಶನ್ ಅಭಿಮಾನಿಯಾಗಿದ್ದಾನೆ.ಹಿರಿಯರಿಗೆ ಮಗನ ವಿಚಾರ ತಿಳಿಸಬಹುದಿತ್ತು.ಕಾನೂನಿನಲ್ಲೂ ಕೂಡಾ ದೂರು ಕೊಡಲು ಅವಕಾಶ ಇತ್ತು.ಕೊಲೆ ಮಾಡುವ ಕೆಲಸ ಮಾಡಿದ್ದು ನಿಜಕ್ಕೂ ಸರಿಯಲ್ಲ ನೇರವಾಗಿ ಈ ತಂಡ ಭಾಗಿಯಾಗಿರುವುದು ಕಂಡುಬಂದಿದ್ದು,ಕಾನೂನಿನಡಿ ಕಠಿಣ ಶಿಕ್ಷೆ ದರ್ಶನ್ ಗೆ ನೀಡಬೇಕು ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿದರು.
ಇದು ರೇಣುಕಾಸ್ವಾಮಿಯ ಕೊಲೆ ಅಲ್ಲ, ಮಾನವೀಯತೆಯ ಕೊಲೆ ರೇಣುಕಾಸ್ವಾಮಿ ತಪ್ಪು ಮಾಡಿದ್ದರೆ ಕಾನೂನು ಕ್ರಮ ಕೈಗೊಳ್ಳಬೇಕಿತ್ತು. ಅದನ್ನು ಬಿಟ್ಟು ಕಾನೂನು ಕೈಗೆತ್ತಿಕೊಳ್ಳುವುದು ಸರಿಯಲ್ಲ ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು ಮತ್ತು ಇಂತಹ ಪ್ರಕರಣಗಳು ಪುನರ್ ಘಟಿಸದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.