ಮುಂಡಗೋಡ :ಕೆಲ ದಿನಗಳ ಹಿಂದೆ,ಬಿಜೆಪಿ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂದು ಶಿವರಾಮ್ ಹೆಬ್ಬಾರ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದ ಮುಂಡಗೋಡ ಮಂಡಲ ಬಿಜೆಪಿ ಮುಖಂಡರ ವಿರುದ್ಧ ಪತ್ರಿಕಾಗೋಷ್ಠಿ ನಡೆಸಿ ಹೆಬ್ಬಾರ್ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ನಾಯಕ ಶಿವರಾಮ್ ಹೆಬ್ಬಾರ್ ಅವರ ರಾಜೀನಾಮೆ ಕೇಳುತ್ತಿರುವ ಎಲ್ ಟಿ ಪಾಟೀಲ್ ಅವರು 2018 ರಲ್ಲಿ ಕಾಂಗ್ರೆಸ್ ನಿಂದ ಬಿಜೆಪಿಗೆ ಬಂದರು ಆಗ ಅವರು ಜಿಲ್ಲಾ ಪಂಚಾಯ್ತಿಯ ಸದಸ್ಯರಾಗಿದ್ದವರು,ಆಗ ಅವರು ಯಾವುದೇ ರಾಜೀನಾಮೆ ನೀಡದೆ ಬಿಜೆಪಿ ಸೇರಿದ್ದರು ಅಂತಹವರಿಗೆ ಹೆಬ್ಬಾರ್ ರಾಜೀನಾಮೆ ಕೇಳುವ ನೈತಿಕತೆ ಇಲ್ಲ ಮುಂಡಗೋಡ ಇತಿಹಾಸದಲ್ಲಿ ಎಲ್ ಟಿ ಪಾಟೀಲ್ ಎಂತಹವರು ಅಂತ ಗೊತ್ತಿದೆ,ಶಿವರಾಮ್ ಹೆಬ್ಬಾರ್ ಬೆಂಬಲಿಗರು ಸ್ವಾಭಿಮಾನಿಗಳು,ನಿಷ್ಠೆಯಿಂದ ಕೆಲಸ ಮಾಡುವಂತಹವರು.ಕೆನರಾ ಲೋಕಸಭಾ ಚುನಾವಣೆಯಲ್ಲಿ ಜನ ಮೋದಿ ಮುಖ ನೋಡಿ ಮತ ಹಾಕಿದ್ದಾರೆ ಹೊರತು ಯಾರ ಮುಖ ನೋಡಿ ಅಲ್ಲ, ಅದಕ್ಕೆ ಈ ಬಾರಿ ಬಿಜೆಪಿ ಗೆದ್ದಿದ್ದು,ನಾವು ಬಿಜೆಪಿ ಯಲ್ಲಿ ಇದ್ದಾಗ ನಾವು ಕೆಲಸ ಮಾಡಿದ್ದೇವೆ,ಕೇಸ್ ಹಾಕಿಸಿಕೊಂಡು ಜೈಲಿಗೆ ಹೋಗಿದ್ದೇವೆ ಆದರೆ ಈಗಿನವರು ಸ್ಟೈಲ್ ಆಗಿ ಬಂದು ಖುರ್ಚಿ ಮೇಲೆ ಕುಳಿತು ಪತ್ರಿಕಾಗೋಷ್ಠಿ ಮಾಡುತ್ತಿದ್ದಾರೆ ಎಂದರು. ಹೋಳಿ ಹಬ್ಬದಲ್ಲಿ ಗಲಾಟೆ ಆದಾಗ ಇದೆ ಕಾಗೇರಿ ಹೆದರಿ ಓಡಿ ಹೋಗಿದ್ದರು.ಬಿಜೆಪಿ ಜಿಲ್ಲಾಧ್ಯಕ್ಷರಿಗೆ ಧಮ್ ಇದ್ದರೆ ಪಕ್ಷದಿಂದ ಹೆಬ್ಬಾರ್ ಅವರನ್ನು ಉಚ್ಛಾಟನೆ ಮಾಡಲಿ ಎಂದು ಹೆಬ್ಬಾರ್ ಅಭಿಮಾನಿ ಗುಡ್ಡಪ್ಪ ಕಾ ಆಕ್ರೋಶ ವ್ಯಕ್ತಪಡಿಸಿದರು.
ರವಿಗೌಡ ಪಾಟೀಲ್ ಮಾತನಾಡಿ ಎಲ್ ಟಿ ಪಾಟೀಲ್ ಅವರು ರಾಜಕೀಯವಾಗಿ ಸಾಕಷ್ಟು ಅನುಭವಸ್ಥರು,ಹೆಬ್ಬಾರ್ ಎಲ್ಲಿ ಇದ್ದಾರೋ ಅಲ್ಲಿ ನಾವು ಅವರ ಜೊತೆ ಇದ್ದೇವೆ,ಹೆಬ್ಬಾರ್ ಎರಡು ಬಾರಿ ಬಿಜೆಪಿಯಿಂದ,ಎರಡು ಬಾರಿ ಕಾಂಗ್ರೆಸ್ ನಿಂದ ಗೆದ್ದಾಗ ನಾವು ಅವರ ಜೊತೆ ನಿಂತಿದ್ದೇವೆ.ಕಾರ್ಯಕರ್ತ ರನ್ನು ಖರೀದಿ ಮಾಡಿದ್ದಾರೆ ಹಾಗೆ ಹೀಗೆ ಎಂಬ ಊಹಾಪೋಹ ಗಳ ಕುರಿತು ಮಾತನಾಡುವುದನ್ನು ಎಲ್ ಟಿ ಪಾಟೀಲ್ ನಿಲ್ಲಿಸಲಿ,ಎಚ್ಚರಿಕೆಯಿಂದ ಮಾತನಾಡಲಿ ಎಂದರು
ಸಿದ್ದು ಹಡಪದ್ ಮಾತನಾಡಿ ನನ್ನ 35 ವರ್ಷಗಳ ರಾಜಕೀಯ ಅನುಭವದಲ್ಲಿ ಹೆಬ್ಬಾರ್ ರಂತಹ ನಾಯಕ ಮತ್ತೊಬ್ಬರಿಲ್ಲ.ಅವರು ರಾಜೀನಾಮೆ ಕೊಡುವ ಪ್ರಸಂಗವೇ ಇಲ್ಲ ಎಂದು ಶಿವರಾಮ್ ಹೆಬ್ಬಾರ್ ಬೆಂಬಲಕ್ಕೆ ನಿಂತರು.
ಪತ್ರಿಕಾಗೋಷ್ಠಿ ವೇಳೆ ನಾಗಭೂಷಣ್ ಹಾವಣಗಿ,ಶೇಖರ್ ಲಮಾಣಿ,ರವಿ ಗೌಡ ಪಾಟೀಲ್ ಸೇರಿದಂತೆ ಗ್ರಾಮೀಣ ಭಾಗದ ಅನೇಕ ಹೆಬ್ಬಾರ್ ಅಭಿಮಾನಿಗಳು ಉಪಸ್ಥಿತರಿದ್ದರು.