ಬೆಂಗಳೂರು:ಭಾರತೀಯ ದಿವ್ಯಾಂಗ ಸಬಲೀಕರಣ ಸಂಘ ಶಿವಮೊಗ್ಗ ಇದರ ವತಿಯಿಂದ ಮಾನ್ಯ ಮುಖ್ಯಮಂತ್ರಿಗಳಿಗೆ ಈ ದಿನ ಜರುಗುವ ಸಚಿವ ಸಂಪುಟ ಸಭೆಯಲ್ಲಿ ವಿಕಲಚೇತನರ ಅವಶ್ಯಕತೆಗಳ ಬೇಡಿಕೆಗಳನ್ನು ಸೇರಿಸಲು ಮನವಿಯನ್ನು ಸಂಸ್ಥಾಪಕ ಅಧ್ಯಕ್ಷ ಶ್ರೀ ಕೊಡಕ್ಕಲ್ ಶಿವಪ್ರಸಾದ್ ಅವರು ಸಲ್ಲಿಸಿದ್ದು ಅದನ್ನು ಮಾನ್ಯ ಮುಖ್ಯಮಂತ್ರಿಗಳು
ಪರಿಶೀಲನೆಗಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಕಳುಹಿಸಿ ಕೊಟ್ಟಿದ್ದಾರೆ ಎಂದು ಮುಖ್ಯಮಂತ್ರಿಗಳ
ಕಚೇರಿ ಪ್ರಕಟಣೆ ತಿಳಿಸಿದೆ.
ಸಂಪುಟ ಸಭೆಯಲ್ಲಿ ಪ್ರಸ್ತಾವನೆಗಾಗಿ ಈ ಕೆಳಗಿನ ಮೂರು ಅಂಶಗಳನ್ನು ಸರಕಾರಕ್ಕೆ ಸಲ್ಲಿಸಲಾಗಿತ್ತು:
- ವೇತನ ಶ್ರೇಣಿ ಪರಿಷ್ಕರಣೆಯಲ್ಲಿ ಅಂಗವಿಕಲರಿಗೆ ಸಂಬಂಧಿಸಿದ ಸೌಲಭ್ಯಗಳನ್ನು ಸೇರಿಸಿ ಜಾರಿಗೊಳಿಸುವಿಕೆ
2.ಗ್ರೂಪ್ ಎ ಮತ್ತು ಬಿ ವರ್ಗದ ವಿಕಲಚೇತನ ಸಿಬ್ಬಂದಿ ಗಳಿಗೆ ಬಡ್ತಿಗೆ ಸಂಪುಟ ಸಭೆಯಲ್ಲಿ ಅನುಮೋದನೆ
3.ಉಚಿತ ಬಸ್ ಪಾಸ್ ಅನ್ನು ಎಲ್ಲ ವರ್ಗದ ವಿಕಲಚೇತನ ಜನರಿಗೆ ಹಾಗೂ ರಾಜ್ಯಾದ್ಯಂತ ಪ್ರಯಾಣಕ್ಕ ವಿಸ್ತರಿಸುವಿಕೆ.
ವಿಕಲಚೇತನರ ಅಭಿವೃದ್ಧಿಯನ್ನು ಸರಕಾರವು ಗೌರವಿಸುವುದು ಎಂದು ನಿರೀಕ್ಷಿಸಲಾಗಿದೆ.