ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಪಟ್ಟಣ ಪಂಚಾಯ್ತಿ ಒಟ್ಟಾರೆ 19 ವಾರ್ಡಗಳನ್ನು ಹೊಂದಿರುವ ಪಟ್ಟಣ ಪಂಚಾಯ್ತಿಯಾಗಿದೆ.ಮುಂಡಗೋಡ ನಗರದಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆ ಇದೆ.ಪಟ್ಟಣ ಪಂಚಾಯ್ತಿ ಮುಂಡಗೋಡದಲ್ಲಿ ಅಭಿವೃದ್ದಿ ಕೆಲಸ ಮತ್ತು ವಿವಿಧ ರೀತಿಯ ಕಾಮಗಾರಿಗಳನ್ನು ಕಿರಿಯ ಎಂಜಿನಿಯರ್ ಅವರೇ ನೋಡಿಕೊಳ್ಳಬೇಕಾಗುತ್ತದೆ,ಆದರೆ ಮುಂಡಗೋಡ ಪಟ್ಟಣ ಪಂಚಾಯ್ತಿಯಲ್ಲಿದ್ದ ಕಿರಿಯ ಎಂಜಿನಿಯರ್ ಬೇರೆಡೆ ವರ್ಗಾವಣೆ ಆದ ಕಾರಣ ಯಲ್ಲಾಪುರ ಪಟ್ಟಣ ಪಂಚಾಯ್ತಿಯ ಕಿರಿಯ ಎಂಜಿನಿಯರ್ ಅವರು ಪ್ರಭಾರಿಯಾಗಿ ವಾರಕ್ಕೆ 2 ದಿನ ಮಾತ್ರ ಮುಂಡಗೋಡದಲ್ಲಿ ಲಭ್ಯರಿರುತ್ತಾರೆ, ಇದರಿಂದ ಮುಂಡಗೋಡದ ವಿವಿಧ ವಾರ್ಡ್ ಗಳಲ್ಲಿ ಅಭಿವೃದ್ದಿ ಕೆಲಸಗಳು ಸರಿಯಾಗಿ ಕಾಲ ಕಾಲಕ್ಕೆ ಆಗುತ್ತಿಲ್ಲ,ಕಾಮಗಾರಿಗಳೆಲ್ಲಾ ಕುಂಟುತ್ತಾ ಸಾಗುತ್ತಿದೆ, ಅದರಲ್ಲೂ ಮೀಸಲಾತಿ ಕಾರಣ ಅಧ್ಯಕ್ಷ,ಉಪಾಧ್ಯಕ್ಷರ ನೇಮಕ ಕೂಡಾ ಆಗಿಲ್ಲ,ಇದರಿಂದ ತುಂಬಾ ತೊಂದರೆ ಆಗುತ್ತಿದೆ,ಎಲ್ಲದಕ್ಕೂ ಮುಖ್ಯಾಧಿಕಾರಿಯ ಬಳಿಯೇ ಬರಬೇಕೆಂದು ಪಟ್ಟಣ ಪಂಚಾಯ್ತಿ ಮುಂಡಗೋಡದ ವಾರ್ಡ್ ಸದಸ್ಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ, ಅದರಲ್ಲಿ ನಾಗರಿಕರು ಕೂಡಾ ಎಂಜಿನಿಯರ್ ಬಳಿ ಯಾವುದಾದರೂ ಕೆಲಸ ಮಾಡಿಕೊಳ್ಳಬೇಕೆಂದು ಕಚೇರಿಗೆ ಆಗಮಿಸಿದರೆ ವಾರಗಟ್ಟಲೆ ಕಾಯಬೇಕು ಎಂದು ಸಾರ್ವಜನಿಕರು ಕೂಡಾ ವ್ಯವಸ್ಥೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಯಾವುದಾದರೂ ಕಾಮಗಾರಿ ಕುರಿತು ಕಿರಿಯ ಎಂಜಿನಿಯರ್ ಬಳಿ ಕೇಳಿದರೆ ನಮಗೂ ಸಾಕಾಗಿದೆ,ಕೆಲಸ ಮಾಡಿ ಮೊದಲು ಈ ಪ್ರಭಾರಿಯಿಂದ ನಮ್ಮನ್ನು ಮುಕ್ತಿ ಮಾಡಿ ಎಂದು ಬೇಜವಾಬ್ದಾರಿ ಉತ್ತರ ಕೊಡುತ್ತಾರೆ ಆದ ಕಾರಣ ಮುಂಡಗೋಡ ಪಟ್ಟಣ ಪಂಚಾಯ್ತಿಗೆ ಪೂರ್ಣ ಪ್ರಮಾಣ ಕಿರಿಯ ಎಂಜಿನಿಯರ್ ಅವರನ್ನು ನಿಯುಕ್ತಿ ಮಾಡಿ ಎಂದು ಸಾರ್ವಜನಿಕರು ಮೇಲಾಧಿಕಾರಿಗಳಿಗೆ,ಜನಪ್ರತಿನಿಧಿಗಳಿಗೆ ಒತ್ತಾಯ ಮಾಡುತ್ತಿದ್ದಾರೆ.
ವರದಿ:ಶಿವರಾಜ್ ಶಿರಾಲಿ