ಹುಡುಗನಿಗೆ ಡಾಕ್ಟರ್ ಆಗುವ ಕನಸು ನನಸಾಗಲು ನೀಟ್ ಪರೀಕ್ಷೆ ಅಡ್ಡಿ, ಅದನ್ನು ಪಾಸಾಗಲೇಬೇಕು ಎಂದು ಒಳ್ಳೆಯ ತರಬೇತಿಗಾಗಿ ಎಲ್ಲಾ ಕಡೆ ವಿಚಾರಿಸಿದ ಹತ್ತಾರು ಕಡೆ ಸುತ್ತಿದ ಸಾಲ ಮಾಡಿ ದಿಲ್ಲಿ,ಮುಂಬೈ ಅಲೆದಾಡಿದ.
ಕೆಲವು ಕಡೆ ಬೋರ್ಡ್ ಪರೀಕ್ಷೆಗೆ ಒತ್ತು ಕೊಟ್ಟರೆ ಸ್ಪರ್ಧಾತ್ಮಕ ಪರೀಕ್ಷೆಗೆ ಒತ್ತು ಕೊಡಲ್ಲ,ಅವೆರಡಕ್ಕೂ ಫ಼ೋಕಸ್ ಮಾಡಿದರೆ ಪ್ರಾಯೋಗಿಕ ತರಗತಿಗಳನ್ನು ಭಾಷೆಗಳನ್ನು ಮರೆತೇ ಬಿಡುತ್ತಾರೆ ಅಲ್ಲಿ ಒಂದು ಇದ್ದರೆ ಒಂದು ಇರಲಿಲ್ಲ ಕನಸಿನ ರೆಕ್ಕೆ ತುಂಡಾಗಲು ಶುರುವಾಯಿತು.ಎಲ್ಲವೂ ಇರುವ ಅಕಾಡೆಮಿಯಲ್ಲಿ ಸಿಕ್ಕಾಪಟ್ಟೆ ದುಡ್ಡು ತೆರಬೇಕು ಸಾಲ ಮಾಡಿದರೂ ಕೈಗೆಟುಕದ ಅಕಾಡೆಮಿಗಳು ಅವು ನೀಟ್ ಎಲ್ಲಾ ಬಡವರಿಗೆ ಅಲ್ಲ ಹುಡುಗನ ಕನಸುಗಳು ಮುರಿದು ಬೀಳುವ ಹಂತ ರಾಜಿ ಮಾಡಿಕೊಳ್ಳಬೇಕೆನಿಸಿತು..
ಆಗ ಅವನಿಗೆ ಸಿಕ್ಕಿದ್ದೇ ಈ ಅಕಾಡೆಮಿ…ಅಲ್ಲಿ ಅವನು ಅಂದುಕೊಂಡಿದ್ದ ಎಲ್ಲವೂ ಇತ್ತು:ಕೈಗೆ ಸಿಗುವ ದುಡ್ಡಲ್ಲಿ!
ಅದು ಕೂಡಾ ನಮ್ಮ ಬೆಂಗಳೂರಿನಲ್ಲಿ.
ಹೌದು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿದೆ ಈ
ನೆಕ್ಸ್ಜೆನ್ ಡಾಕ್ಟರ್ಸ್ ಅಕಾಡೆಮಿ.
ನೆಕ್ಸ್ಜೆನ್ ಡಾಕ್ಟರ್ಸ್ ಅಕಾಡೆಮಿ
ಇಲ್ಲಿ ಇಂಟಿಗ್ರೇಟೆಡ್ ಕೋರ್ಸ್ ಗಳಿವೆ.
ಪಿಯು ಜೊತೆ ಜೊತೆಗೆ ಐಐಟಿ-ಜೆಇಇ,ನೀಟ್
ಕೆಸಿಇಟಿ ತರಬೇತಿ ನೀಡುತ್ತಾರೆ.
ಬೇರೆ ಅಕಾಡೆಮಿಗೂ ಇದಕ್ಕೂ ಏನು ವ್ಯತ್ಯಾಸ ಅಂದರೆ:ಇಲ್ಲಿ ಕಟ್ಟಡ ಕೇಂದ್ರಿತ ಅಲ್ಲ,ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ ಸಿಗುತ್ತದೆ!
ಇಲ್ಲಿ ಪಿಯು ಜೊತೆಗೆ ಸಿಬಿಎಸ್ಸಿಗೂ ತರಗತಿಗಳು ನಡೆಯುತ್ತವೆ.
ಪ್ರತಿ ಒಬ್ಬ ವಿದ್ಯಾರ್ಥಿಯೂ ಬೇರೆ ಬೇರೆ;ಆತನ ಶಕ್ತಿ ಸಾಮರ್ಥ್ಯಗಳು ಬೇರೆ ಬೇರೆ.
ಅದನ್ನು ಅರ್ಥ ಮಾಡಿಕೊಂಡು ಅದಕ್ಕೆ ತಕ್ಕಂತೆ ತರಬೇತಿ ನೀಡುತ್ತಾರೆ ಇಲ್ಲಿ.ಈ ಅಕಾಡೆಮಿಯ ಸೀಕ್ರೆಟ್ ಇರುವುದು ಅದರ-ಅನುಭವಿ ಶಿಕ್ಷಕರು ಮತ್ತು ಸ್ಟಡಿ ಮೆಟಿರಿಯಲ್ಸ್ ನಲ್ಲಿ.
ಸ್ಟಡಿ ಮೆಟಿರಿಯಲ್ಸ್ ಅಂದರೆ ವಿದ್ಯಾರ್ಥಿಗಳು ತಮ್ಮ ಸ್ವಂತ ಕಲಿಕೆಗೆ ಅನುಕೂಲವಾಗವಂತಹ,ಸುಲಭವಾಗಿ ಅರ್ಥವಾಗುವಂತಹ,ಸರಳ ಭಾಷೆಯಲ್ಲಿ ಇರುವ ಓದುವ ಟಿಪ್ಪಣಿ ಪುಸ್ತಕಗಳು.
ಇದು ವಿದ್ಯಾರ್ಥಿಗಳಿಗೆ ವಿಷಯದ ಆಳ ಅಗಲವನ್ನು ಅರ್ಥ ಮಾಡಿಸಲು, ಟಾಪಿಕ್ಸ್ ಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ.
ನೆಕ್ಸ್ಜೆನ್ ಅಕಾಡೆಮಿಯು ಈ ಓದುವ ಟಿಪ್ಪಣಿ ಪುಸ್ತಕಗಳನ್ನು ತನ್ನ ಅಕಾಡೆಮಿಯ ಶಿಕ್ಷಕರಿಂದಲೇ ತಯಾರಿಸಿದೆ.
ಒಬ್ಬೊಬ್ಬ ಶಿಕ್ಷಕರಿಗೂ ಕನಿಷ್ಠ 15-20 ವರ್ಷ ಅನುಭವವಿದೆ!
ಇವರೇ ಅವರುಗಳಿಗೆ ನಿತ್ಯವೂ ಪಾಠ ಮಾಡುತ್ತಾರೆ. ವಿದ್ಯಾರ್ಥಿಗಳ ಅನುಮಾನಗಳನ್ನು ಬಗೆಹರಿಸಲು ಪ್ರತ್ಯೇಕವಾಗಿಯೇ ಡೌಟ್-ಕ್ಲಿಯರಿಂಗ್ ತರಗತಿಗಳು ಕೂಡಾ ನಡೆಯುತ್ತವೆ!
ಬೇರೆ ಅಕಾಡೆಮಿಗಳ ತರಹ ಎಲ್ಲಾ ವಿದ್ಯಾರ್ಥಿಗಳನ್ನು ಒಂದೆಡೆ ಕುರಿ ಹಿಂಡಿನಂತೆ ಕೂರಿಸಿ ಒಮ್ಮೆಗೆ ಪಾಠ ಮಾಡುವುದಿಲ್ಲ ಬದಲಿಗೆ ವಿದ್ಯಾರ್ಥಿಗಳನ್ನು ಚಿಕ್ಕ ಚಿಕ್ಕ ಗುಂಪುಗಳಾಗಿ ಮಾಡಿ ಪರಿಣಾಮಕಾರಿಯಾದ ತರಬೇತಿ ನೀಡುತ್ತಾರೆ.
ಈ ಅಕಾಡೆಮಿಯು ಪಿಯುಸಿ (11 ಹಾಗೂ 12) ಮತ್ತು ಸಿಬಿಎಸ್ಸಿ (11 ಹಾಗೂ 12) ವಿದ್ಯಾರ್ಥಿಗಳಿಗೂ ತರಬೇತಿ ನೀಡುತ್ತದೆ.
ಇಲ್ಲಿ ಕೆಲಸ ಮಾಡುವ ಶಿಕ್ಷಕರು ದೊಡ್ಡ ದೊಡ್ಡ ತರಬೇತಿ ಸಂಸ್ಥೆಗಳಲ್ಲಿ ಕೆಲಸ ಮಾಡಿ ಬಂದ ಅನುಭವ ಇರುವವರು.
ಇವರು ನೀಟ್ ಪರೀಕ್ಷೆಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ;
ಅದು ಬೇಡುವ ವಿಷಯ ಜ್ಞಾನವನ್ನು ತಿಳಿದವರಾಗಿದ್ದಾರೆ.
ಆ ಕಾರಣಕ್ಕೆ ಇವರುಗಳು ನಡೆಸುವ ತರಗತಿಗಳು ವಿದ್ಯಾರ್ಥಿ ಸ್ನೇಹಿಯಾಗಿರುತ್ತದೆ.
ವಿದ್ಯಾರ್ಥಿಗಳು ಮುಕ್ತವಾಗಿ ತಮ್ಮ ಪ್ರಶ್ನೆಗಳನ್ನು ಕೇಳಬಹುದು,
ಶಿಕ್ಷಕರೊಟ್ಟಿಗೆ ಯಾವಾಗ ಬೇಕಾದರೂ ಗೊಂದಲ ಬಗೆಹರಿಯವವರೆಗೆ ಚರ್ಚಿಸಬಹುದು!
ಇವೆಲ್ಲಾ ಅಂಶಗಳು ಸೇರಿ ನೆಕ್ಸ್ಜೆನ್ ಅಕಾಡೆಮಿಗೆ-ನೀಟ್ ತರಬೇತಿಯಲ್ಲಿ-ಒಳ್ಳೆಯ ಹೆಸರನ್ನು ತಂದಿವೆ.
ವಿಶೇಷತೆಗಳು:
ಈ ಅಕಾಡೆಮಿಯು 11 ತಿಂಗಳ ಇಂಟಿಗ್ರೇಟೆಡ್ ಕೋರ್ಸ್ ನಡೆಸುತ್ತದೆ.
ಪ್ರತಿ ವರ್ಷ ಜೂನ್ ತಿಂಗಳಲ್ಲಿ ತರಗತಿಗಳನ್ನು ಪ್ರಾರಂಭಿಸುತ್ತದೆ.
ಮೊದಲ 15 ದಿನ ಬೇಸಿಕ್ ತರಗತಿಗಳು ನಡೆಯುತ್ತವೆ. ಇದರಲ್ಲಿ 8 ರಿಂದ 12ನೇ ತರಗತಿಗಳ ಬೇಸಿಕ್ಸ್ ಗಳನ್ನು ನೆನಪಿಸಿ ತಿಳಿಸಿಕೊಡಲಾಗುತ್ತದೆ.
ನಂತರ 8 ತಿಂಗಳ ರೆಗ್ಯುಲರ್ ಕೋರ್ಸ್ ನಡೆಯುತ್ತದೆ, ಆಮೇಲೆ 2 ತಿಂಗಳು ರಿವಿಜ಼ನ್ ತರಗತಿಗಳು ನಡೆಯುತ್ತವೆ.
45 ದಿನಗಳ ಕ್ರ್ಯಾಶ್ ಕೋರ್ಸ್ಗಳೂ ನಡೆಯುತ್ತವೆ. ಹುಡುಗ-ಹುಡುಗಿಯರಿಗೆ ಪ್ರತ್ಯೇಕ ವಸತಿ ವ್ಯವಸ್ಥೆ ಇರುತ್ತದೆ.
ಹೋಗಲು ಬರಲು ವ್ಯಾನ್ ವ್ಯವಸ್ಥೆ ಇರುತ್ತದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಕೂಡಾ ಇರುತ್ತದೆ.
ಉತ್ತಮವಾದ ಗಾಳಿ ಬೆಳಕಿನೊಂದಿಗೆ ವಿಶಾಲವಾದ ಕ್ಲಾಸ್ ರೂಂಗಳಿವೆ.
ಅಚ್ಚುಕಟ್ಟಾದ ಪ್ರಯೋಗಾಲಯ(ಲ್ಯಾಬ್) ಇದೆ.
ಇಲ್ಲಿ ಯೋಗ,ಧ್ಯಾನ ಮತ್ತು ಸಾಫ್ಟ್ ಸ್ಕಿಲ್ಸ್ ಗಳ ತರಬೇತಿಯನ್ನು ಪರಿಣಿತರಿಂದ ನೀಡಲಾಗುತ್ತದೆ.
ಶುಚಿಯಾದ ರುಚಿಯಾದ ಪೌಷ್ಟಿಕಾಂಶಯುಕ್ತ ಆಹಾರವನ್ನು ನೀಡಲಾಗುತ್ತದೆ.
ಸುಸಜ್ಜಿತವಾದ ವಸತಿ ವ್ಯವಸ್ಥೆಯಿರುತ್ತದೆ ಜೊತೆಗೆ ಹಾಸ್ಟೆಲ್ ಗಳನ್ನು ಒಳಗೊಂಡಂತೆ ಇಡೀ ಕ್ಯಾಂಪಸ್ ಸಿಸಿಟಿವಿ ಕಣ್ಗಾವಲಿನಲ್ಲಿರುತ್ತದೆ.
ಇನ್ನು ಪರೀಕ್ಷೆಗಳ ವಿಷಯಕ್ಕೆ ಬಂದರೆ:
“ಪ್ರತಿ ಭಾನುವಾರ ಕಿರು ಪರೀಕ್ಷೆ ಇರುತ್ತದೆ
ಪ್ರತಿ ಬುಧವಾರ ರಿವಿಜ಼ನ್ ಟೆಸ್ಟ್ (ಪುನರಾವರ್ತನೆಯ ಪರೀಕ್ಷೆ) ಇರುತ್ತದೆ.
ಕೊನೆಯ ತಿಂಗಳಂತೂ ವಿದ್ಯಾರ್ಥಿಗಳು 25 ಪರೀಕ್ಷೆಗಳನ್ನು ಬರೆಯುತ್ತಾರೆ.
ಇವೆಲ್ಲವುಗಳಿಂದ ಏನಿಲ್ಲವೆಂದರೂ 400 ಅಂಕಗಳು ಬಂದೇ ಬರುತ್ತವೆ.
ಇನ್ನು ಮೇಲಿನ 150-200 ಅಂಕಗಳಿಗೆ ಮಾತ್ರ ವಿದ್ಯಾರ್ಥಿಗಳು ಶ್ರಮಪಡಬೇಕು,ಇಲ್ಲಿ ಬೋರ್ಡ್ ಪರೀಕ್ಷೆ,ಸ್ಪರ್ಧಾತ್ಮಕ ಪರೀಕ್ಷೆ, ಪ್ರಾಯೋಗಿಕ ತರಗತಿಗಳು ಹಾಗೂ ಭಾಷೆಗಳಿಗೂ ಅಷ್ಟೇ ಕಾಳಜಿಯಿಂದ ತರಬೇತಿಯನ್ನು ಕೊಡುತ್ತೇವೆ. ಯಾವುದನ್ನೂ ಕಡೆಗಣಿಸುವುದಿಲ್ಲ.
ಇಲ್ಲಿ ವಿದ್ಯಾರ್ಥಿಗಳಿಗೆ ಅವಶ್ಯವಿರುವ ಎಲ್ಲವನ್ನೂ ಕಲಿಸುತ್ತೇವೆ”ಎಂದು ಹೆಮ್ಮೆಯಿಂದ ಹೇಳುತ್ತಾರೆ
ನೆಕ್ಸ್ಜೆನ್ ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕರಾದ ಗೋಪಿ ಚಂದ್.
ಇಲ್ಲಿ PCMC (JEE),PCMB (NEET) ಇಂಟಿಗ್ರೇಟೆಡ್ ಕೋರ್ಸ್ಗಳೂ ಲಭ್ಯವಿವೆ.ಇಂಜಿನಿಯರಿಂಗ್ ಮಾಡುವ ಕನಸಿದ್ದರೆ ಉತ್ತಮ ಜೆಇಇ ತರಬೇತಿಯನ್ನೂ ಇಲ್ಲಿ ಕೊಡುತ್ತಾರೆ.”ಜೆಇಇ,ನೀಟ್,ಕೆಸಿಇಟಿ,ಬಿ.ಎಸ್ಸಿ.ಅಗ್ರಿ ತರಬೇತಿಗೆ ಹೇಳಿ ಮಾಡಿಸಿದ ಜಾಗ ಇದು”ಎನ್ನುತ್ತಾರೆ ನೆಕ್ಸ್ಜೆನ್ ಡಾಕ್ಟರ್ಸ್ ಅಕಾಡೆಮಿಯ ವಿದ್ಯಾರ್ಥಿಯೊಬ್ಬರು.
ಇನ್ನೋರ್ವ ವಿದ್ಯಾರ್ಥಿ:”ನಾನು ನೀಟ್ ಪರೀಕ್ಷೆಯ ಲಾಂಗ್ ಟರ್ಮ್ (ದೀರ್ಘ ಅವಧಿಯ) ಕೋರ್ಸ್ ಅನ್ನು ಆಯ್ದುಕೊಂಡಿದ್ದೇನೆ.ಇಲ್ಲಿ ನನಗೆ ಶಿಕ್ಷಕರಿಂದ ವೈಯಕ್ತಿಕ ಕಾಳಜಿ ಸಿಗುತ್ತದೆ.ಎಲ್ಲಾ ವಿದ್ಯಾರ್ಥಿಗಳ ಸಾಮರ್ಥ್ಯಗಳನ್ನು ಗಣನೆಗೆ ತೆಗೆದುಕೊಂಡು ಅವರಿಗೆಲ್ಲಾ ಅಗತ್ಯವಿರುವಷ್ಟು ಪ್ರತ್ಯೇಕ ಗಮನವನ್ನೂ ನೀಡುತ್ತಾರೆ ಇಲ್ಲಿನ ಶಿಕ್ಷಕರು ಯಾರಾದರೂ ಎಂ.ಬಿ.ಬಿ.ಎಸ್ ಮಾಡಬೇಕು ಅನ್ನುವವರಿಗೆ ಇದೇ ಮೊದಲನೇ ಆಯ್ಕೆಯಾಗಬೇಕು” ಎಂದು ತಮ್ಮ ಅನುಭವ ಹಂಚಿಕೊಂಡರು.
ನೆಕ್ಸ್ಜೆನ್ ಡಾಕ್ಟರ್ಸ್ ಅಕಾಡೆಮಿಯ ವಿದ್ಯಾರ್ಥಿ ಕೇಂದ್ರಿತ ತರಬೇತಿ ಪದ್ಧತಿಯ ಬಗ್ಗೆ ಮಾತನಾಡುತ್ತಾ, ಅಲ್ಲಿ ಬೋಧಿಸುವ-ಹದಿನೆಂಟು ವರ್ಷಗಳ ಅನುಭವವಿರುವ-ಶಿಕ್ಷಕರೊಬ್ಬರು:”ಇಲ್ಲಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಯುಗಕ್ಕೆ ತಯಾರು ಮಾಡಲಾಗುತ್ತದೆ.ಪರೀಕ್ಷಾ ಅವಶ್ಯಕತೆಗಳನ್ನು ಪೂರೈಸುವಂತೆ ಸಜ್ಜುಗೊಳಿಸಲಾಗುತ್ತದೆ.
ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆಗಳಿಗೆ ತಕ್ಕಂತೆ ಮಾಡ್ಯೂಲ್ (ನಮೂನೆ)ಗಳನ್ನು ತಯಾರಿಸಿ ಅದಕ್ಕೆ ತಕ್ಕಂತೆ ವಿದ್ಯಾರ್ಥಿಗಳಿಗೆ ಬೋಧಿಸಲಾಗುತ್ತದೆ. ಪ್ರಶ್ನೆಪತ್ರಿಕೆಯ ಸ್ವರೂಪವನ್ನು ವಿದ್ಯಾರ್ಥಿಗಳಿಗೆ ಅರ್ಥಮಾಡಿಸಿ ಉತ್ತರ ಬರೆಯುವ ಶೈಲಿಯನ್ನು ಕಲಿಸಲಾಗುತ್ತದೆ.ಇದು ವಿದ್ಯಾರ್ಥಿಗಳಿಗೆ ಬಹು ಉಪಯೋಗಿ” ಎಂದು ಮೆಚ್ಚುಗೆ ಸೂಚಿಸುತ್ತಾರೆ.
ನೆಕ್ಸ್ಜೆನ್ ಡಾಕ್ಟರ್ಸ್ ಅಕಾಡೆಮಿಯ ಸದಸ್ಯರೊಬ್ಬರು: “ವಿದ್ಯಾರ್ಥಿಗಳು ತರಗತಿಗಳಲ್ಲಿ ಕುಳಿತುಕೊಳ್ಳಲು ತುಂಬಾ ಉತ್ಸುಕರಾಗಿರುತ್ತಾರೆ.ಯಾಕೆಂದರೆ ಇಲ್ಲಿನ ಅನುಭವಿ ಶಿಕ್ಷಕರ ಬೋಧನಾ ವಿಧಾನ ಅಷ್ಟು ಪರಿಣಾಮಕಾರಿಯಾಗಿರುತ್ತದೆ.ಆಕರ್ಷಕ ಬೋಧನಾ ವಿಧಾನವೇ ಈ ಸಂಸ್ಥೆಯ ಯಶಸ್ಸಿನ ಗುಟ್ಟು.ಕಳೆದ ವರ್ಷದಲ್ಲಿನ 95 ವಿದ್ಯಾರ್ಥಿಗಳಲ್ಲಿ 39 ವಿದ್ಯಾರ್ಥಿಗಳಿಗೆ ಉಚಿತ ವೈದ್ಯಕೀಯ ಸೀಟುಗಳು ಸಿಕ್ಕಿವೆ.ಇದು ಒಂದು ಸಾಧನೆಯೇ ಸರಿ. ಬೆಂಗಳೂರಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಅಕಾಡೆಮಿ ಇದಾಗಿದೆ”ಎಂದು ಅಭಿಮಾನದಿಂದ ಹೇಳುತ್ತಾರೆ.
ಇನ್ನೊಬ್ಬ ಹಿರಿಯ ಶಿಕ್ಷಕರೊಬ್ಬರು ಮಾತನಾಡುತ್ತಾ: “ಇಲ್ಲಿ ಇರುವುದು ಶಿಕ್ಷಕ ಕೇಂದ್ರಿತ ತರಬೇತಿ ಪದ್ಧತಿಯಲ್ಲ,ಇಲ್ಲಿ ನಡೆಯುತ್ತಿರುವುದೆಲ್ಲವೂ ವಿದ್ಯಾರ್ಥಿ ಕೇಂದ್ರಿತ ತರಬೇತಿ ಪದ್ಧತಿ.
ಎಲ್ಲವನ್ನೂ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡೇ ನಡೆಸಲಾಗುತ್ತದೆ. ವಿದ್ಯಾರ್ಥಿಗಳ ಆಶೋತ್ತರಗಳನ್ನು ಗಮನಿಸಿಯೇ ಈ ವರ್ಷ ಲಾಂಗ್ ಟರ್ಮ್ (ದೀರ್ಘ ಅವಧಿಯ) ಜೆಇಇ ಕೋರ್ಸ್ ಅನ್ನು ಶುರು ಮಾಡಲಾಗಿದೆ. ಇಂಜಿನಿಯರಿಂಗ್ ಸೇರ ಬಯಸುವ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಅತ್ಯುತ್ತಮವಾದ ಗುಣಮಟ್ಟದ ಶಿಕ್ಷಣ ತರಬೇತಿಯನ್ನು ನೀಡಲಾಗುತ್ತಿದೆ” ಎಂದು ಅಕಾಡೆಮಿಯ ಕಾರ್ಯಕ್ರಮಗಳನ್ನು ಪ್ರಶಂಸಿಸಿದರು.
ಸಂತೆಯಲ್ಲಿ ಕೇಳಿದರೆ ನಾಲ್ಕು ಜನ ನಾಲ್ಕು ಹೆಸರು ಹೇಳುತ್ತಾರೆ.ತಲೆಗೆ ಒಂದೊಂದು ಕಾಲೇಜು-ತರಬೇತಿ ಸಂಸ್ಥೆಗಳ ಹೆಸರು ಹೇಳುತ್ತಾರೆ.ಅವೆಲ್ಲವೂ ಇದೇ ರೀತಿ ಹೇಳುತ್ತವೆ ಹಾಗಾದರೆ ನಿಜವಾಗಲೂ ಯಾವ ಸಂಸ್ಥೆಯನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಬೇಕು?
ಎಂಬ ಪ್ರಶ್ನೆಗೆ ಸರಳವಾಗಿ ಉತ್ತರಿಸುತ್ತಾರೆ ಗೋಪಿ ಚಂದ್:
“ಯಾವುದೇ ತರಬೇತಿ ಸಂಸ್ಥೆಯನ್ನು 5 ಅಳತೆಗೋಲುಗಳಲ್ಲಿ ನೋಡಬೇಕು-
1.ಶಿಕ್ಷಕರು
2.ಓದುವ ಟಿಪ್ಪಣಿ ಪುಸ್ತಕಗಳು
3.ಊಟದ ವ್ಯವಸ್ಥೆ
4.ವಸತಿ-ಸುರಕ್ಷತೆ
5.ಅತ್ಯಂತ ಕಡಿಮೆ ದುಡ್ಡು!
ಈ ಐದರಲ್ಲೂ ನೆಕ್ಸ್ಜೆನ್ ಡಾಕ್ಟರ್ಸ್ ಅಕಾಡೆಮಿ ಗೆದ್ದಿದೆ. ನೀವು ಬೇರೆ ಅಕಾಡೆಮಿಗಳಿಗೆ ಸೇರುವುದಾದರೆ ಅವು ಈ ಅಂಶಗಳಲ್ಲಿ ಗೆದ್ದಿರಬೇಕು.ನಿಮಗೆ ಅಂತಹ ಯಾವುದಾದರೂ ಸಂಸ್ಥೆ ಸಿಕ್ಕರೆ ನೀವು ಅಲ್ಲೇ ಸೇರಿಕೊಳ್ಳಿ!”
ಕೊನೆಯದಾಗಿ-ಕನಸುಗಳ ರೆಕ್ಕೆಯನ್ನು ಕತ್ತರಿಸಬೇಡಿ, ಸಿಗುವ ಅವಕಾಶವನ್ನು ಬಳಸಿಕೊಳ್ಳಿ.
ನೆನಪಿಡಿ:ಹಾರುವುದಿದೆ ದೂರ.ನಿದ್ದೆಗೆ ಜಾರುವ ಮುನ್ನ!…
*ವಿಳಾಸ:*
ನೆಕ್ಸ್ಜೆನ್ ಡಾಕ್ಟರ್ಸ್ ಅಕಾಡೆಮಿ,
116/1, ಹಸ್ಕರ್ ರಸ್ತೆ, ಹಣ್ಣಿನ ಸಂತೆಯ ಹತ್ತಿರ, ಎರಡನೇ ಫೇಸ್, ಎಲೆಕ್ಟ್ರಾನಿಕ್ ಸಿಟಿ, ಬೆಂಗಳೂರು – 560100
ಫೋನ್: 99000 99539