ಬಳ್ಳಾರಿ ಜಿಲ್ಲೆಯ ಸಿರಗುಪ್ಪ ನಗರದ ಸಿಂಧನೂರು ರಸ್ತೆ ಬಳಿ ಇರುವ ರಿಲಯನ್ಸ್ ಪೆಟ್ರೋಲ್ ಬಂಕಿನಲ್ಲಿ ವಾಹನಗಳಿಗೆ ದುಡ್ಡು ಕೊಟ್ಟು ಪೆಟ್ರೋಲ್ ಹಾಕಿಸಿದರೆ ಅದರಲ್ಲಿ ನೀರು ಮಿಶ್ರಿತ ಪೆಟ್ರೋಲ್ ಬರುತ್ತಿದೆ
ನೀರು ಮಿಶ್ರಿತ ಪೆಟ್ರೋಲ್ ನಿಂದಾಗಿ ಪೆಟ್ರೋಲ್ ಹಾಕಿಸಿಕೊಂಡ ಅನೇಕ ವಾಹನಗಳು ಜಖಂಗೊಂಡಿದ್ದು ಅನೇಕ ವಾಹನ ಮಾಲೀಕರು ಮತ್ತು ಸವಾರರು ರಿಲಯನ್ಸ್ ಪೆಟ್ರೋಲ್ ಬಂಕಿನ ಮುಂದೆ ಬಂದು ತಮ್ಮ ವಾಹನಗಳಿಂದ ನೀರು ಮಿಶ್ರಿತ ಪೆಟ್ರೋಲ್ ಅನ್ನು ಬಾಟಲ್ ಗಳಲ್ಲಿ ಹೊರತೆಗೆದು ಮಾಲೀಕರುಗಳಿಗೆ ತೋರಿಸಿದರು
ಇದರಿಂದ ಎಚ್ಚೆತ್ತುಕೊಂಡ ಮಾಲೀಕರು ಪೆಟ್ರೋಲ್ ಪಂಪ್ ನಿಂದ ಡ್ರಮ್ಮೊಂದಕ್ಕೆ ಪೆಟ್ರೋಲ್ ತೆಗೆಸಿದರೆ ಡ್ರಮ್ ತುಂಬಾ ನೀರು ಬಂದಿದೆ ಇದರಿಂದಾಗಿ ವಾಹನ ಸವಾರರು ಮತ್ತು ಮಾಲೀಕರು ಕುಪಿತಗೊಂಡಿದ್ದು ಲಕ್ಷಾಂತರ ರೂಪಾಯಿ ಬೆಲೆ ಬಾಳುವ ವಾಹನಗಳು ಈ ರೀತಿ ಆಗಿರುವುದಕ್ಕೆ ಮಾಲೀಕರ ಬಗ್ಗೆ ಆಕ್ರೋಶ ಭರಿತವಾದ ಮಾತುಗಳನ್ನು ಆಡಿದರು
ಈ ಸಂದರ್ಭದಲ್ಲಿ ಪೆಟ್ರೋಲ್ ಬಂಕ್ ಮಾಲಿಕರಿಗೂ ಮತ್ತು ವಾಹನ ಸವಾರ, ಮಾಲೀಕರಿಗಳಿಗೂ ತೀವ್ರ ಮಾತುಗಳು ಬೆಳೆದು ವಾಹನಗಳನ್ನು ಸರಿಪಡಿಸಿ ಕೊಡುವಂತೆ ವಾಹನ ಸವಾರರು ಮತ್ತು ಮಾಲೀಕರುಗಳು ಪೆಟ್ರೋಲ್ ಬಂಕ್ ಮಾಲೀಕರನ್ನು ಒತ್ತಾಯಿಸಿದರು.
-ಪವನ್ ಕುಮಾರ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.