ಕಲಬುರಗಿ:ರಕ್ತದಾನದ ಮಹತ್ವ ಹಾಗೂ ರಕ್ತದಾನಿಗಳಿಂದ ಜೀವ ಉಳಿಸುವುದರಲ್ಲಿ ಸಾಮಾಜಿಕ ಕೊಡುಗೆ ಮತ್ತು ರಕ್ತದಾನಿಗಳಿಗೆ ಆಗುವ ಲಾಭಗಳ ಪಡೆಯಬೇಕು ಎಂದು ಇಎಸ್ಐ ಆಸ್ಪತ್ರೆಯ ವೈದ್ಯರಾದ ಡಾ.ಸತೀಶ ಬೆಳಗಟ್ಟಿ ಅವರು ವಿಧ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು.
ನಗರದ ಸರಕಾರಿ ಸ್ವಯತ್ತ ಮಹಾವಿದ್ಯಾಲಯದ ಪ್ರಾಣಿ ಶಾಸ್ತ್ರ ವಿಭಾಗದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಸವಿತಾ ತಿವಾರಿ ಮಾತನಾಡಿ ಅವರು ಸಬಲ ಯುವಕರು ರಕ್ತವನ್ನು ದಾನ ಮಾಡುವುದರ ಮುಖಾಂತರ ಜೀವದ ಮಹತ್ವವನ್ನು ಅರಿತುಕೊಳ್ಳಬೇಕು, ಒಳ್ಳೆಯ ಪೌಷ್ಟಿಕ ಆಹಾರವನ್ನು ಸೇವಿಸಬೇಕು ಎಂಬ ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಪ್ರಾಣಿ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾಕ್ಟರ್ ಮೀನಾಕ್ಷಿ ಕೆ ಸಿ ಸಂಯೋಜಕರಾದ ಶ್ರೀ ದಿನೇಶ ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕರಾದ ಡಾ ಗಾಯತ್ರಿ, ಮತ್ತು ಪ್ರಾಣಿ ಶಾಸ್ತ್ರ ವಿಭಾಗದ ಎಲ್ಲಾ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ರಾಜ ನಿರೂಪಿಸಿದರು.ಐಶ್ವರ್ಯ ಸ್ವಾಗತಿಸಿ,ಡಾ.ರಾಜಶೇಖರ ಅವರು ಕಾರ್ಯಕ್ರಮವನ್ನು ವಂದಿಸಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.