ರಾಜ್ಯದಲ್ಲಿ ಹೆಚ್ಚುತ್ತಿರುವ ಉಗ್ರ ಕೃತ್ಯಗಳ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಇನ್ನೂ ಮುಂದೆ ಮನೆಯನ್ನು ಬಾಡಿಗೆ ಉದ್ದೇಶಕ್ಕೆ ನೀಡುವಾಗ ಪೊಲೀಸ್ ವೇರಿಫಿಕೇಶನ್ ಸರ್ಟಿಫಿಕೇಟ್ ಅನ್ನು ಪಡೆಯುವದು ಕಡ್ಡಾಯ ಮಾಡಬೇಕಿದೆ. ಏಕೆಂದರೆ ಇತ್ತೀಚಿಗೆ ತುಮಕೂರಿನ ರೈಲ್ವೇ ಉದ್ಯೋಗಿಯೊಬ್ಬರ ಕಳೆದುಹೋದ ಆಧಾರ್ ಕಾರ್ಡ್ ಅನ್ನು ಶಂಕಿತ ಉಗ್ರರು ತಮ್ಮ ದುಷ್ಕ್ರತ್ಯಕ್ಕೆ ಬಳಸಿಕೊಂಡಿದ್ದರು, ಭವಿಷ್ಯದಲ್ಲಿ ಮನೆ ಬಾಡಿಗೆ ಪಡೆಯುವಾಗ ಇದೇ ರೀತಿ ವಂಚನೆ ಮೂಲಕ ಇಲ್ಲವೇ ನಕಲಿ ದಾಖಲೆಗಳ ಮೂಲಕ ಮನೆ ಬಾಡಿಗೆ ಪಡೆಯುವುದು ಕೆಲವೊಮ್ಮೆ ಕೆಲವೆಡೆ ನಡೆದಿದೆ,ಆದ ಕಾರಣ ಇನ್ನು ಮುಂದೆ ಜಿಲ್ಲೆಯಲ್ಲಿ ಮನೆಗಳನ್ನು ಅನ್ಯರಿಗೆ ಬಾಡಿಗೆ ನೀಡುವಾಗ ಪೊಲೀಸ್ ವೆರಿಫಿಕೇಷನ್ ಮಾಡಿಸಿದ್ದೇ ಆದಲ್ಲಿ ಭವಿಷ್ಯದಲ್ಲಿ ಉಂಟಾಗಬಹುದಾದ ಗಂಭೀರ ಅಪರಾಧಗಳನ್ನು ತಡೆಯಬಹುದಾಗಿದೆ, ಇತ್ತೀಚಿಗೆ ಮೈಸೂರು ಜಿಲ್ಲಾ ಪೊಲೀಸ್ ಈ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಕೂಡಾ ಈ ನಿಟ್ಟಿನಲ್ಲಿ ಕ್ರಮ ಕೈಗೊಂಡರೆ ಸಾರ್ವಜನಿಕರಿಗೆ ಹೆಚ್ಚಿನ ಉಪಯೋಗವಾಗುವುದು ಖಂಡಿತ.
-ಶಿವರಾಜ್ ಕುಮಾರ್ ಶಿರಾಲಿ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.