ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಶ್ವೇತ ಕ್ರಾಂತಿಯೊಂದಿಗೆ ಸಂವಿಧಾನ ದಿನಾಚರಣೆ


ಕೊಪ್ಪಳ ಜಿಲ್ಲೆಯ ಕಾರಟಗಿ ತಾಲ್ಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿಂಗನಾಳ ಗ್ರಾಮದಲ್ಲಿ ರಾಷ್ಟ್ರೀಯ ಸಂವಿಧಾನ ದಿನದೊಂದಿಗೆ ರಾಷ್ಟ್ರೀಯ ಹಾಲು ಉತ್ಪಾದಕರ ದಿನಾಚರಣೆಯನ್ನು ಮಾಡುವ ಮೂಲಕ ಸಂವಿಧಾನ ಅಡಿಯಲ್ಲಿ ಜನ ಸೇವೆಗೆ ಬದ್ಧ ಪ್ರಬುದ್ಧ ಅಡಿಯಲ್ಲಿ ಪ್ರತಿಜ್ಞೆ ಮಾಡುತ್ತಾ “ಭಾರತ ಮಾತೆಯ ಪುತ್ರರಾದ ನಾವು ಭಾರತ ಸಾರ್ವಭೌಮ ಸಮಾಜವಾದಿ ಧರ್ಮ ನಿರಪೇಕ್ಷ, ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ, ರೂಪಿಸುವುದಕ್ಕಾಗಿ,ಭಾರತ ಎಲ್ಲಾ ಪ್ರಜೆಗಳಿಗೆ,ಸಾಮಾಜಿಕ,ರಾಜಕೀಯ ಮತ್ತು ಆರ್ಥಿಕ,ನ್ಯಾಯವನ್ನು,ವಿಚಾರ,ಅಭಿವ್ಯಕ್ತಿ, ನಂಬಿಕೆ,ಧರ್ಮ ಮತ್ತು ಉಪಸನೆಯ ಸ್ವಾತಂತ್ರವನ್ನು ಸ್ಥಾನಮಾನ ಅವಕಾಶಗಳ ಸಮಾನತೆಯನ್ನು ಬರುವಂತೆ ಮಾಡುವುದಕ್ಕಾಗಿ,ವ್ಯಕ್ತಿ ಗೌರವ,ದೇಶದ ಏಕತೆ,ಸಮಗ್ರತೆ ಎಲ್ಲರಲ್ಲಿ,ಭ್ರಾತೃತ್ವ ಭಾವನೆಯಲ್ಲಿ ಮೂಡಿಸುವುದಕ್ಕೆ ದೃಢ ಸಂಕಲ್ಪ ಪ್ರತಿಜ್ಞೆ ಮಾಡುವ ಮೂಲಕ ಸಂವಿಧಾನ ದಿನ ಆಚರಣೆ ಮಾಡಿದರು ಶಾಲೆಯ ಶಿಕ್ಷಕರಾದ ಶೋಭರಾಜ ಅವರು ಮಾತನಾಡಿ ವರ್ಗೀಸ್ ಕುರಿಯನ್ (ನವೆಂಬರ್ ೨೬, ೧೯೨೧ – ಸೆಪ್ಟೆಂಬರ್ ೯, ೨೦೧೨) ಅಮುಲ್ ಡೈರಿ ಸಂಸ್ಥೆಯ ಸ್ಥಾಪಕರು ಮತ್ತು ಭಾರತದಲ್ಲಿ ಆಪರೇಶನ್ ಫ್ಲಡ್ ಎಂಬ ಹೆಸರಿನ ಕ್ಷೀರಕ್ರಾಂತಿಯ ಪ್ರಮುಖ ಪಾತ್ರಧಾರಿ
ವರ್ಗಿಸ್ ಕುರಿಯನ್ ಇವರು
ನವೆಂಬರ್ ೨೬, ೧೯೨೧ ರಂದು
ಕೇರಳದ ಕೋಯಿಕೋಡ್ ನಲ್ಲಿ ಜನಿಸಿದರು ಇವರು ಸೆಪ್ಟೆಂಬರ್ ೯, ೨೦೧೨
ಗುಜರಾತಿನ ನಾಡಿಯಾಡ್ ನಲ್ಲಿ ಮರಣ ಹೊಂದಿದರು ಇವರ
ಇತರೆ ಹೆಸರು,ಬಿರುದು
ಮಿಲ್ಕ್ ಮ್ಯಾನ್ ಆಫ್ ಇಂಡಿಯಾ
ಅಮುಲ್ ಸಂಸ್ಥೆಯ ಸಂಸ್ಥಾಪಕರು
ಹಾಲು ಉತ್ಪಾದಕರಾ ಸಂಘಟನೆಯ ನೇತಾರರಾಗಿ ‘ಕ್ಷೀರ ಪಿತಾಮಹ’ರೆನಿಸಿದವರು
ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ (GCMMF)ದ ಸಂಸ್ಥಾಪಕ ಅಧ್ಯಕ್ಷರಾಗಿ , ಕುರಿಯನ್ ಅವರು ಅಮುಲ್ ಡೈರಿ ಉತ್ಪನ್ನಗಳ ಬ್ರಾಂಡ್ ನ ಸೃಷ್ಟಿ ಮತ್ತು ಯಶಸ್ಸಿಗೆ ಕಾರಣರಾದವರು.ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟದಲ್ಲಿ ಅವರ ಸಾಧನೆ ಕಂಡು ರಾಷ್ಟ್ರೀಯ ಮಟ್ಟದಲ್ಲಿನ ಅಮುಲ್ ಯಶಸ್ಸನ್ನು ಪುನರಾವರ್ತಿಸಲು,೧೯೬೫ ರಲ್ಲಿ ಅವರನ್ನು ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ(NDDB) ಯ ಸ್ಥಾಪಕ ಅಧ್ಯಕ್ಷರನ್ನಾಗಿ ನೇಮಿಸಿದರು.ಕೆಲವು ವರ್ಷಗಳ ನಂತರ ಕುರಿಯನ್ ರ ಮುಂದಾಳುತನದಲ್ಲಿ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯು ಆಪರೇಷನ್ ಫ್ಲಡ್ (ಅಥವಾ ವೈಟ್ ರೆವಲ್ಯೂಷನ್-ಕ್ಷೀರಕ್ರಾಂತಿ ) ಎಂಬ ಜಗತ್ತಿನ ಅತಿ ದೊಡ್ಡ ಡೈರಿ ಅಭಿವೃದ್ಧಿ ಯೋಜನೆಯನ್ನು ಪ್ರಾರಂಭಿಸಿತು. ಆಪರೇಷನ್ ಫ್ಲಡ್ ಯೋಜನೆಯು ಭಾರತವನ್ನು ವಿಶ್ವದ ಅತ್ಯಂತ ದೊಡ್ಡ ಹಾಲು ಉತ್ಪಾದಕ ದೇಶವನ್ನಾಗಿ ಮಾಡಿತು; ೨೦೧೦-೨೦೧೧ ರಲ್ಲಿ, ಜಾಗತಿಕ ಉತ್ಪಾದನೆಯ ಸುಮಾರು ಪ್ರತಿ ನೂರಕ್ಕೆ ೧೭ ರಷ್ಟು ಭಾಗವು ಭಾರತದ್ದಾಗಿತ್ತು .
“ಭಾರತದ ಹಾಲು ವಿತರಕ” ಮತ್ತು “ಕ್ಷೀರ ಕ್ರಾಂತಿಯ ಪಿತಾಮಹ” ಎಂದು ಬಣ್ಣಿಸಲ್ಪಟ್ಟ ಕುರಿಯನ್ ರವರು ಭಾರತದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ‘”ಪದ್ಮ ವಿಭೂಷಣ” ಪ್ರಶಸ್ತಿ,ವಿಶ್ವ ಆಹಾರ ಪ್ರಶಸ್ತಿ ಮತ್ತು ಮ್ಯಾಗ್ಸೇಸೆ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಶಾಲೆಯ ಸೋಮರಾಜ ಸರ್,ಬಸವರಾಜ, ಕೃಷ್ಣ,ರುದ್ರೇಶ,ಶ್ರೀನಿವಾಸ ಮಾತನಾಡಿ ನಮ್ಮ ರಾಷ್ಟ್ರೀಯ ನಾಯಕರು ನಮ್ಮ ಸಂವಿಧಾನ ರಚಿಸಿ ಕೊಟ್ಟಿದ್ದಾರೆ.ಸಂವಿಧಾನ ನಮಗೆ ಹಲವಾರು ಹಕ್ಕುಗಳನ್ನು & ಕರ್ತವ್ಯಗಳನ್ನು ಒದಗಿಸಿದೆ. ಪ್ರತಿಯೊಬ್ಬರೂ ಸಂವಿಧಾನದ ಮೌಲ್ಯಗಳನ್ನು ಗೌರವಿಸಿ ಪಾಲಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ವೀರೇಶ ಸರ್, ಶ್ರೀ ಮತಿ ಶೋಭಾ,ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಯಮನೂರ ಸಿಂಗನಾಳ ಕಾರ್ಯಕ್ರಮದ ಕೇಂದ್ರ ಬಿಂದುವಾಗಿ ಶಾಲಾ ಮಕ್ಕಳು ಶಾಲಾ ಶಿಕ್ಷಕ ವೃಂದದವರು,ಶಾಲೆಯ ಬಿಸಿ ಊಟ ಅಡಿಗೆದಾರರು ಮತ್ತಿತರರು ಉಪಸ್ಥಿತರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ