ನಿತ್ಯ ಮಾಡು ನೀ ಯೋಗ
ದೂರವಿಡು ದೇಹದ ರೋಗ
ವಿಲಾಸಿ ಜೀವನದಲ್ಲಿ ನೀ ಆಲಸಿಯಾಗಬೇಡ
ದಿನಂಪ್ರತಿ ದೇಹವು ಸುಚಿಗೊಳಿಸುವುದಾ ಮರೆಯಬೇಡ
ದೈಹಿಕ ಮಾನಸಿಕ ಅನುಸಂಧಾನವೇ ಯೋಗ
ಭಕ್ತಿ ಮತ್ತು ಆಧ್ಯಾತ್ಮಿಕ ಆಚರಣವೆ ಯೋಗ
ಆಸ್ತಿಕರ ಪಾಲಿಗೆ ಜೀವಾತ್ಮ ಪರಮಾತ್ಮವೂ ಯೋಗ
ಭೋಗಿಯಾದರೆ ಬದುಕೇ ನಿಸ್ಸಾರ ಅದಕ್ಕೇ ಬೇಕು ಯೋಗ
ಕುಂಭಕ ರೇಚಕ ವಿಧಾನವೇ ಯೋಗ ಅದೇ ಅಷ್ಟಾಂಗ ಯೋಗ
ಹಿಂದಿನ, ಇಂದಿನ ಕಾಲಮಾನಕ್ಕೆ ಬೇಕಿದೆ ಯೋಗ
ದೇಹವಾ ದಂಡಿಸು ಮನಸನ್ನ ನಿಯಂತ್ರಿಸು
ಉದ್ವೇಗವ ದೂರಮಾಡು ದೇಹದ ಮನಸಿನ ತೂಕವ ಇಳಿಸು ನೀ ಎದೆಯ ಭಾರವ
ಪ್ರಸನ್ನಾನಾಗು, ಸಂತೃಪ್ತಿಯಾಗು
ಇದು ಒಂದು ದಿನದ ಯೋಗವಲ್ಲ,
ಪ್ರತಿನಿತ್ಯ ಸಾಗುವ ಯೋಗ
ಯೋಗದಿಂದ ರೋಗ ಮುಕ್ತಿ ಅಲ್ಲವ !
-ಪರಸಪ್ಪ ತಳವಾರ ತುರ್ವಿಹಾಳ