ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಭಾರತ ಇಡೀ ವಿಶ್ವಕ್ಕೆ ಯೋಗವನ್ನು ಪರಿಚಯಿಸಿದೆ:ಮಲ್ಲಪ್ಪ ಬಾದರ್ಲಿ

ಸಿಂಧನೂರು:ವೇದಗಳ ಕಾಲದಿಂದಲೂ ಇದ್ದ ಯೋಗ ಶಾಸ್ತ್ರವನ್ನು ಪತಂಜಲಿ ಮುನಿಗಳು ಯೋಗ ಸೂತ್ರಗಳ ಮೂಲಕ ಪರಿಚಯಿಸಿದರು.ಅಂದಿನಿಂದ ಪರಿಚಯವಾದ ಯೋಗವನ್ನು ಇಂದು ಇಡೀ ವಿಶ್ವವೇ ಹೆಮ್ಮೆಯಿಂದ ಆಚರಿಸುತ್ತಿದೆ ಎಂದು ಕಲಮಂಗಿ ಪ್ರೌಢಶಾಲೆಯ ಮುಖ್ಯಗುರು ಮಲ್ಲಪ್ಪ ಬಾದರ್ಲಿ ಹೇಳಿದರು.

ಅವರು ಇಂದು ಕಲಮಂಗಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆ,ಶ್ರೀ ಚೆನ್ನಮಲ್ಲಿಕಾರ್ಜುನ ಗ್ರಾಮಾಭಿವೃದ್ಧಿ ಸಮಿತಿ ಹಾಗೂ ಸ್ನೇಹ ಸಿರಿ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಅಂತರಾಷ್ಟ್ರೀಯ ಯೋಗ ದಿನಾಚರಣೆ, ಸ್ಟೇಜ್ ಪರದೆ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, 2015 ರಲ್ಲಿ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ವಿಶ್ವಸಂಸ್ಥೆಯಲ್ಲಿ ಯೋಗ ದಿನಾಚರಣೆಯನ್ನು ಆಚರಿಸುವ ಕುರಿತು ವಿಷಯವನ್ನು ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿ ವರ್ಷ ಜೂನ್-21ರಂದು ದಿನಾಚರಣೆಯನ್ನು ನೆರವೇರಿಸಲಾಗುತ್ತಿದೆ ಎಂದರು.
ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಯೋಗ ತರಬೇತಿಯನ್ನು ನೀಡಿದ ತಾವರಗೇರಿಯ ಯೋಗಗುರು ಶಶಿಕುಮಾರ್ ದಂಡಿನ್ ಮಾತನಾಡುತ್ತಾ, ಯೋಗದಿಂದ ಅನೇಕ ಲಾಭಗಳಿವೆ ಇಂದು ಇಡೀ ಜಗತ್ತು ಇದನ್ನು ಅರ್ಥ ಮಾಡಿಕೊಂಡಿದೆ. ವಿದ್ಯಾರ್ಥಿ-ಯುವಕರು ನಿತ್ಯವೂ ಯೋಗಭ್ಯಾಸಗಳನ್ನು ಮಾಡುವುದರಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರಾಗುತ್ತಾರೆ. ದಿನಂಪ್ರತಿ ನಿತ್ಯ ಕರ್ಮಗಳ ಜೊತೆಗೆ ಯೋಗ, ಪ್ರಾಣಾಯಾಮ ಅಭ್ಯಾಸ ಮಾಡುವ ಮೂಲಕ ನಿಮ್ಮ ಮನಸ್ಸನ್ನು ಶುದ್ಧಿಗೊಳಿಸಿಕೊಂಡು ಹತೋಟಿಯಲ್ಲಿ ಇಟ್ಟುಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಇಂಗ್ಲಿಷ್ ಭಾಷಾ ಶಿಕ್ಷಕರಾದ ವೀರೇಶ ಗೋನವಾರ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಸಮುದಾಯದ ಸಹಕಾರದಿಂದ ಶೈಕ್ಷಣಿಕವಾಗಿ ಅಭಿವೃದ್ಧಿ ಸಾಧ್ಯವಾಗುತ್ತದೆ. ಕಲಮಂಗಿ ಗ್ರಾಮದ ಗ್ರಾಮಸ್ಥರು ನಮ್ಮ ಶಾಲೆಗೆ 3-ಎಕರೆ, 27-ಗುಂಟೆ ಭೂಮಿಯನ್ನು ಖರೀದಿಸಿ ಸರ್ಕಾರಿ ಶಾಲೆಗೆ ನೀಡುವ ಮೂಲಕ ಬಹುದೊಡ್ಡ ಕಾಣಿಕೆಯನ್ನು ನೀಡಿದ್ದಾರೆ. ಇಲಾಖೆ ಗ್ರಾಮಸ್ಥರಿಗೆ ಸದಾ ಋಣಿಯಾಗಿರುತ್ತದೆ. ಇಂತಹ ಸಮಾಜಮುಖಿ, ಶೈಕ್ಷಣಿಕಪರ ಕಾರ್ಯಕ್ರಮಗಳು ನಿರಂತರವಾಗಿರಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಶ್ರೀ ಚನ್ನಮ್ಮಲ್ಲಿಕಾರ್ಜುನ ಗ್ರಾಮಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ದಯಾನಂದ ಸ್ವಾಮಿ ಹಿರೇಮಠ,
ಗ್ರಾಮದ ಹಿರಿಯರಾದ ಶರಣೇಗೌಡ ಪೋಸ್ಟ್ ಹಳೆಮನಿ,
ಕಲ್ಮಂಗಿ ಗ್ರಾಮದ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯ ಗುರುಗಳಾದ ನಾಗೇಶ್ ಅವರು ಯೋಗ ಮತ್ತು ಶಿಕ್ಷಣದ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಿದರು.
ವೇದಿಕೆಯ ಮೇಲೆ ಶ್ರೀ ಚನ್ನಮ್ಮಲ್ಲಿಕಾರ್ಜುನ ಗ್ರಾಮಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳಾದ ಶರಣೆಗೌಡ ಪೋಲಿಸ ಪಾಟೀಲ,
ಹನುಮಂತಪ್ಪ ಕೆಸರಟ್ಟಿ,
ಬಸವರಾಜ್ ಕುಲಕರ್ಣಿ,
ಚನ್ನಬಸವ ಕುಲಕರ್ಣಿ,
ಮಹಾಂತೇಶ್ ಕುಲಕರ್ಣಿ,
ಶರಣಬಸವ ಕುಲಕರ್ಣಿ,
ಸ್ನೇಹ ಸಿರಿ ಟ್ರಸ್ಟಿನ ಅಧ್ಯಕ್ಷರಾದ ಅಯ್ಯನಗೌಡ,
ನಿವೃತ್ತ ಶಿಕ್ಷಕರಾದ ಪಂಪನಗೌಡ ಹಳೆಮನೆ,
ಗ್ರಾಮದ ಹಿರಿಯರಾದ ಶರಣೆಗೌಡ ಕುಲಕರ್ಣಿ, ಚೆನ್ನಬಸನಗೌಡ ಹಳೆಮನೆ,
ಬಸನಗೌಡ ಹಳೆಮನೆ,
ಸೋಮಲಿಂಗಪ್ಪ ತಾವರಗೇರಿ,
ಆರೋಗ್ಯ ಇಲಾಖೆಯ ದೊಡ್ಡಬಸವ,ಲಕ್ಷ್ಮೀದೇವಿ, ಶಿಕ್ಷಕರಾದ ಸುಭಾಷ ಪತ್ತಾರ,
ಎಂ.ಮಾರುತಿ,
ರೂಪಾ,
ಬಸವರಾಜ,
ಅತಿಥಿ ಶಿಕ್ಷಕಿ ಗುರುಲಿಂಗಮ್ಮ ಸೇರಿದಂತೆ ಗ್ರಾಮದ ಹಿರಿಯರು, ಯುವಕರು ಉಪಸ್ಥಿತರಿದ್ದರು.

ಯೋಗ:ತಾವರಗೇರಿಯ ಯೋಗಗುರು ಶಶಿಕುಮಾರ್ ದಂಡಿನ್ ಇವರ ಮಾರ್ಗದರ್ಶನದಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ಓಂಕಾರ-ಸೂರ್ಯ ನಮಸ್ಕಾರದಿಂದ ಆರಂಭವಾಗಿ ಯೋಗದ ವಿವಿಧ ಆಸನಗಳು, ಪ್ರಾಣಾಯಾಮ ಮತ್ತು ಧ್ಯಾನವನ್ನು ಆಕರ್ಷಕವಾಗಿ ಹೇಳಿಕೊಟ್ಟರು.

ಕೊಡುಗೆ:ಶಾಲೆಯಲ್ಲಿ ನಡೆಯುವ ಸಭೆ ಸಮಾರಂಭಗಳಿಗೆ ಅವಶ್ಯಕವಾಗಿ ಬೇಕಾಗಿದ್ದ ಸ್ಟೇಜ್ ಪರದೆ (ಸ್ಕ್ರೀನ್)ಯನ್ನು ಸುಝಲಾನ್ ಫೌಂಡೇಶನ್ ಮತ್ತು ನೀಡ್ಸ್ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಕಲಮಂಗಿ ಗ್ರಾಮದ ಶ್ರೀ ಚೆನ್ನಲ್ಲಿಕಾರ್ಜುನ ಗ್ರಾಮಾಭಿವೃದ್ಧಿ ಸಮಿತಿ ವತಿಯಿಂದ ಶಾಲೆಗೆ ಕೊಡುಗೆಯಾಗಿ ನೀಡಿದರು.

ಪ್ರತಿಭಾ ಪುರಸ್ಕಾರ:ಇದೇ ಸಂದರ್ಭದಲ್ಲಿ 2023-24ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶಾಲೆಗೆ ಕ್ರಮವಾಗಿ ಪ್ರಥಮ, ದ್ವಿತೀಯ ತೃತೀಯ ಸ್ಥಾನ ಪಡೆದ ಸ್ಪೂರ್ತಿ ತಂದೆ ವಿಶ್ವನಾಥ್ ರೆಡ್ಡಿ, ಅನ್ನಪೂರ್ಣ ತಂದೆ ಸೋಮಲಿಂಗಪ್ಪ, ಪವಿತ್ರ ತಂದೆ ಶರಣಪ್ಪ ಇವರನ್ನು ಶಾಲೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಅದೇ ರೀತಿಯಾಗಿ ಪ್ರತಿ ವರ್ಷ ಸಮಾಜ ವಿಜ್ಞಾನ ವಿಷಯದಲ್ಲಿ ಶಾಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ ಶಾಲೆಯ ಸಮಾಜ ವಿಜ್ಞಾನ ವಿಷಯದ ನಿವೃತ್ತ ಶಿಕ್ಷಕರಾದ ವೀರೇಶ್ ಅಂಗಡಿ ಇವರು ಕೊಡ ಮಾಡುವ ನಗದು ಬಹುಮಾನವನ್ನು ಸ್ಪೂರ್ತಿ ತಂದೆ ವಿಶ್ವನಾಥ್ ರೆಡ್ಡಿ ಇವರಿಗೆ ನೀಡಲಾಯಿತು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ