ಪಾವಗಡ:ತಾಲ್ಲೂಕಿನ ವೈ.ಎನ್.ಹೊಸಕೋಟೆ ಗ್ರಾಮದಲ್ಲಿ ಕನ್ನಡ ನಾಡಿನಲ್ಲಿ ಮಾತೃಭಾಷೆ ಒತ್ತು ನೀಡಬೇಕು ಮತ್ತು ಕನ್ನಡವನ್ನೇ ಬಳಸಬೇಕು ಎಂದು ಶಾಸಕ ವೆಂಕಟರಮಣಪ್ಪ ತಿಳಿಸಿದರು.
ಗ್ರಾಮದ ಕನ್ನಡ ಕಲಾ ಮತ್ತು ಸಾಂಸ್ಕೃತಿಕ ಮಂಡಲಿ ವತಿಯಿಂದ ಶನಿವಾರದಂದು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಬಾಲಕರ ಪಾಠಶಾಲೆ ಆವರಣದಲ್ಲಿ 67 ನೇ ಕರ್ನಾಟಕ ಕನ್ನಡ ರಾಜ್ಯೋತ್ಸವ ಮತ್ತು ಮಂಡಲಿಯ 37ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇದು ಗಡಿ ಪ್ರದೇಶವಾಗಿತ್ತು ನಾವು ಮಾತನಾಡಲು ಹೆಚ್ಚಿನದಾಗಿ ತೆಲುಗು ಬಳಸುತ್ತೇವೆ, ಓದಲು ಬರೆಯಲು ಕನ್ನಡ ಭಾಷೆ ಬಳಸುತ್ತೇವೆ. ಇನ್ನು ಮುಂದೆ ಮನೆಮನೆಗಳಲ್ಲಿ ಕನ್ನಡ ಭಾಷೆ ಮಾತನಾಡಬೇಕು ಕನ್ನಡ ಭಾಷೆಗೆ ಹೆಚ್ಚಿನ ಒತ್ತನ್ನು ನೀಡಬೇಕು. ಕನ್ನಡ ಕಲಾ ಮತ್ತು ಸಾಂಸ್ಕೃತಿಕ ಮಂಡಲಿಯು ಪ್ರತಿವರ್ಷ ರಾಜ್ಯೋತ್ಸವ ಅದ್ದೂರಿಯಾಗಿ ಆಚರಿಸುತ್ತದೆ. ಕಳೆದ 2 ವರ್ಷಗಳಿಂದ ಕೋವಿಡ್ ನಿಂದ ನಿಂತು ಈಗ ನಡೆಯುತ್ತಿರುವ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ದೊಡ್ಡ ಸಂಖ್ಯೆಯಲ್ಲಿ ಕನ್ನಡ ಅಭಿಮಾನಿಗಳು ಭಾಗವಹಿಸಿರುವುದು ಸಂತೋಷ ತರುತ್ತಿದೆ ಎಂದರು.
ಗಡಿನಾಡಿನಲ್ಲಿ ಕನ್ನಡ ಕಟ್ಟುವುದು ತುಂಬಾ ಕಷ್ಟದ ಕೆಲಸ. ಆದಾಗ್ಯೂ ಈ ಪ್ರದೇಶದಲ್ಲಿ ಮಂಡಲಿ ಸತತ 37 ವರ್ಷಗಳಿಂದ ಕನ್ನಡ ಚಟುವಟಿಕೆಗಳ ಮೂಲಕ ಕನ್ನಡ ಜಾಗೃತಿ ಮೂಡಿಸಿರುತ್ತಿದ್ದಾರೆ. ಈ ಬಾರಿ ರಾಜ್ಯಮಟ್ಟದ ನಾಟಕೋತ್ಸವ ಹಮ್ಮಿಕೊಂಡು ಕಲಾದೇವಿಯನ್ನು ಆರಾಧಿಸುತ್ತಿರುವುದು ಹೆಮ್ಮೆಯ ಕೆಲಸ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಟ್ಟಾ ನರಸಿಂಹಮೂರ್ತಿ ತಿಳಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಕನ್ನಡಶ್ರೀ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಸ್ಥಳೀಯ ಪ್ರತಿಭೆ ಎಚ್.ವೈ.ರಾಮಮೂರ್ತಿ ರವರ ಒಕ್ಕೊರಲ ಕನ್ನಡ ಯುಟ್ಯೂಬ್ ಚಾನೆಲ್ ಅನಾವರಣಗೊಳಿಸಲಾಯಿತು. ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಮಂಡಲಿಯ ಕಲಾವಿದರಿಂದ ನಾಟಕ ಪ್ರದರ್ಶನ ನೆರವೇರಿತು.
ಗ್ರಾ.ಪಂ ಅಧ್ಯಕ್ಷೆ ಹನುಮಕ್ಕ, ಉಪಾಧ್ಯಕ್ಷೆ ನಾಗಮಣಿ, ಸದಸ್ಯ ಕೇಶವಮೂರ್ತಿ, ಎನ್.ಆರ್.ಅಶ್ವಥಕುಮಾರ್, ಸಾದಿಖ್ ಸಾಬ್, ಪೂಜಾರಿ ಚೌಡಪ್ಪ, ಎಸ್.ಎಂ.ಗ್ಯಾನ್ ಏಜೆನ್ಸಿಯ ಮುನ್ನಾ, ಚೌಡೇಶ್ವರಿ ಕಾನ್ವೆಂಟಿನ್ ಮು.ಶಿ ರಾಜಪ್ಪ ಇತರರು ಇದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.