ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕು ಹನುಮನಹಳ್ಳಿ ಗ್ರಾಮದಲ್ಲಿ ದಿನಾಂಕ 23 ಜೂನ್ 2024 ರಂದು ಭಾನುವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕೊಟ್ಟೂರು ಯೋಜನಾ ಕಚೇರಿ ವ್ಯಾಪ್ತಿಯ ತೊಟ್ಟಿಲು ಮಠ ವಲಯದ ಹನುಮನಹಳ್ಳಿ ಕಾರ್ಯಕ್ಷೇತ್ರದ ಶ್ರೀ ಆಂಜನೇಯ ದೇವಸ್ಥಾನದ ಜೀರ್ಣದ್ದಾರಕ್ಕೆ ಧರ್ಮಸ್ಥಳದ ಧರ್ಮಧಿಕಾರಿಗಳು 1,50,000 ರೂಪಾಯಿ ಮೊತ್ತವನ್ನು ಮಂಜೂರು ಮಾಡಿದ್ದು.ಈ ದಿನ ವಿಜಯನಗರ ಜಿಲ್ಲೆಯ ಗೌರವಾನ್ವಿತ ಜಿಲ್ಲಾ ನಿರ್ದೇಶಕರಾದ ಸತೀಶ್ ಶೆಟ್ಟಿ ರವರು ದೇವಸ್ಥಾನದ ಮುಂದಿನ ಎಲ್ಲಾ ಕೆಲಸ ಕಾರ್ಯಗಳು ಸುಲಲಿತವಾಗಿ ಸಾಗಲಿ ಮಂಜುನಾಥ ಸ್ವಾಮಿಯ ಪ್ರಸಾದ ನಿಮ್ಮ ಗ್ರಾಮದ ದೇವಸ್ಥಾನಕ್ಕೆ ದೊರಕಿದೆ ಎಂಬುವ ಮಾತನ್ನು ಸಮಿತಿ ಸದಸ್ಯರಿಗೂ ಹಾಗೂ ಊರಿನ ಗ್ರಾಮಸ್ಥರಿಗೂ ತಿಳಿಸುವಮೂಲಕ ಡಿ ಡಿ ಯನ್ನು ಸಮಿತಿ ಯ ಅಧ್ಯಕ್ಷರು ಹಾಗೂ ಎಲ್ಲಾ ಸದಸ್ಯರ ಉಪಸ್ಥಿತಿಯಲ್ಲಿ ವಿತರಣೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಯ ಅಧ್ಯಕ್ಷರು ಡಿ ಭರಮನಗೌಡ್ರು, ತಾಲ್ಲೂಕಿನ ಯೋಜನಾಧಿಕಾರಿ ನವೀನ್ ಕುಮಾರ್, ದೇವಸ್ಥಾನ ಸಮಿತಿ ಅಧ್ಯಕ್ಷರಾದ ಪ್ರಭಾಕರ್,ಬಿ ಬಸವರಾಜ್,ನಿವೃತ್ತ ಶಿಕ್ಷಕರಾದ ಸಿದ್ದಪ್ಪ,ಹಾಗೂ ಊರಿನ ಮುಖಂಡರು ಮತ್ತು ಸಮಿತಿಯ ಉಪಾಧ್ಯಕ್ಷರು ಹಾಗು ಸರ್ವ ಸದಸ್ಯರು,ವಲಯದ ಮೇಲ್ವಿಚಾರಕರಾದ ಜಗದೀಶ್,ಸೇವಾ ಪ್ರತಿನಿಧಿ ರಂಜಿತಾ ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಲಾಯಿತು.
ಈ ಸಂದರ್ಭದಲ್ಲಿ ಹೆಚ್ ಜಿ ರಾಮನಗೌಡ ಚನ್ನಬಸಪ್ಪ ಜಯಪ್ಪ ಸ್ವಾಮಿ ಎಂ ಸುನಿಲ್ ಅಧ್ಯಕ್ಷರು ಕೃಷಿ ಪತ್ತಿನ ಸಹಕಾರ ಸಂಘ ಟಿ ರವಿಗೌಡ ಬೆನಕನಹಳ್ಳಿ ಬಸನಗೌಡ್ರು ಶರಣಪ್ಪ ಮತ್ತಿತರರು ಮುಖಂಡರು ಹಾಗೂ ಮಹಿಳೆಯರು ಹಾಗೂ ಯುವಕರು ಸೇರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.