ಬೆಳಗಾವಿ:ಕಾಗವಾಡ ಮತಕ್ಷೇತ್ರದ ಮದಭಾವಿ ಗ್ರಾಮದ ಕಾಂಗ್ರೆಸ್ ಪಕ್ಷದ ಕಾರ್ಯಲಯದಲ್ಲಿ ಕೇಂದ್ರ ಸರಕಾರದ ಮೂರನೇ ಬಾರಿಗೆ ಪ್ರಧಾನಮಂತ್ರಿ ಆಗಿ ನರೇಂದ್ರ ಮೋದಿ ಅವರು ಅಧಿಕಾರ ಸ್ವೀಕಾರ ಮಾಡಿದ ಬಳಿಕ ಮತ್ತೆ ಉಜ್ವಲ ಯೋಜನೆ ಅಡಿಯಲ್ಲಿ ಗ್ಯಾಸ್ ಮಂಜೂರಾದ ಫಲಾನುಭವಿಗಳಿಗೆ ಗ್ಯಾಸ್ ಗಳನ್ನು ಕಾಂಗ್ರೇಸ್ ಪಕ್ಷದ ಮುಖಂಡ ಪ್ರವೀಣ ನಾಯಿಕ ವಿತರಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಆಗಲಿ ಕೇಂದ್ರದಲ್ಲಿ ಆಗಲಿ ಯಾವದೆ ಪಕ್ಷ ಅಧಿಕಾರದಲ್ಲಿ ಇರಲಿ ಅದು ಮುಖ್ಯ ಅಲ್ಲಾ ಜನಸಾಮಾನ್ಯರಿಗೆ ಯೋಜನೆಗಳು ತಲುಪಿಸುವದು ಮುಖ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸುರೇಶ ನಾಯಿಕ,ಗ್ರಾಮ ಪಂಚಾಯತ ಸದಸ್ಯ ಸಂತೋಷ ಕಲ್ಲೋತ್ತಿ,ಉಮೇಶ ಪಾಟೀಲ, ಸಿದ್ದರಾಯ ತೋಡಕರ,ಪಿ ಕೆ ಪಿ ಎಸ್ ಬ್ಯಾಂಕಿನ ನಿರ್ದೇಶಕ ಭೀಮಗೌಡ ನಾಯಿಕ,ಸಂತೋಷ ನಾಯಿಕ,ಧನಂಜಯ ಹವಾಲ್ದಾರ, ದಯಾನಂದ ಇಂಡೇನ್ ಗ್ಯಾಸ್ ಮಾಲೀಕರಾದ ಸತೀಶ ಹಲ್ಲೋಳಿ,ಕೃಷ್ಣ ಸುತಾರ,ಅಶೋಕ ಬಾಡಗಿ, ಮಹಾದೇವ ನಾಯಿಕ ಪ್ರೇಮಕುಮಾರ ನಾಯಿಕ ಹಾಗೂ ಪಲಾನುಭವಿಗಳು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.