ಸರ್ಕಾರ-ಶಿಕ್ಷಣ ಇಲಾಖೆ ಗಮನಹರಿಸುವಂತೆ ಕೆ.ಎಲ್.ಈಶ್ವರ್ (ಡಯಾನ) ಮನವಿ
ಶಿವಮೊಗ್ಗಃರಾಜ್ಯದಾದ್ಯಂತ ೧೦ನೇ ತರಗತಿಯ ಮಕ್ಕಳು ಅತಿ ಹೆಚ್ಚು ಸಂಖ್ಯೆಯಲ್ಲಿ ಉತ್ತೀರ್ಣರಾಗಿದ್ದು,ಪದವಿ ಪೂರ್ವ ವಿದ್ಯಾಭ್ಯಾಸಕ್ಕೆ ಎಲ್ಲಾ ಮಕ್ಕಳು ಉತ್ಸಾಹದಲ್ಲಿ ಕಾಲೇಜುಗಳಿಗೆ ಪ್ರವೇಶವಾಗಿದ್ದಾರೆ.ಎಲ್ಲಾ ಪದವಿ ಪೂರ್ವ ಕಾಲೇಜುಗಳು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಂದ ತುಂಬಿಕೂಳ್ಳುತ್ತಿವೆ ಆದರೆ ವಿದ್ಯಾರ್ಥಿಗಳ ಮುಂದಿನ ಭವಿಷ್ಯವನ್ನು ಕಟ್ಟುಕೊಳ್ಳುವ ಕನಸಿನಲ್ಲಿ ಶಿಕ್ಷಣ ಇಲಾಖೆ ಮಾತ್ರ ನಿರ್ಲಕ್ಷ್ಯ ತೋರುತ್ತಿದೆ.ಪದವಿ ಪೂರ್ವ ಕಾಲೇಜಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಪ್ರತಿ ವರ್ಷದಂತೆ ಈ ವರ್ಷವೂ ಮಕ್ಕಳ ಪಠ್ಯ ಪುಸ್ತಕಗಳನ್ನು ಸಮಯಕ್ಕೆ ಸರಿಯಾಗಿ ದೊರಕಿಸುವುದರಲ್ಲಿ ಇಲಾಖೆ ವಿಫಲವಾಗಿದೆ.ಲಕ್ಷ ಲಕ್ಷ ಮಕ್ಕಳಿಗೆ ಯಾವ ಪುಸ್ತಕಗಳು ದೊರಕದೆ (ಕನ್ನಡ, ಇಂಗ್ಲೀಷ, ಹಿಂದಿ, ಸಂಸ್ಕ್ರತ, ಉರ್ದು, ವಾಣಿಜ್ಯ ವಿಭಾಗ, ಕಲಾ ವಿಭಾಗ,ವಿಜ್ಞಾನ ವಿಭಾಗ ಈ ರೀತಿಯ ವಿಷಯ ಪುಸ್ತಕಗಳು) ಎಲ್ಲಾ ವಿದ್ಯಾರ್ಥಿಗಳು ಕಾಲೇಜಿಗೆ ಬರೀ ನೋಟ್ ಪುಸ್ತಕ ತೆಗೆದುಕೂಂಡು ಹೋಗುತ್ತಿರುವ ಪರಿಸ್ಥಿತಿ ಎದುರಾಗಿದೆ.
ತಮ್ಮ ಅಗತ್ಯ ಪಠ್ಯ ಪುಸ್ತಕಗಳು ಇಲ್ಲದೇ ವಿದ್ಯಾರ್ಥಿಗಳು ಕಳೆದ ಒಂದು ತಿಂಗಳಿಗಿಂತ ಹೆಚ್ಚು ಕಾಲ ಬರಿಗೈಯಲ್ಲೇ ಕಾಲೇಜಿಗೆ ಹೋಗುತ್ತಿದ್ದಾರೆ. ಇಂದು ಸಿಗಬಹುದು,ನಾಳೆ ಸಿಗಬಹುದು ಎಂದು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪೋಷಕರೊಂದಿಗೆ ಪ್ರತಿನಿತ್ಯ ಪುಸ್ತಕದಂಗಡಿಗಳಿಗೆ ಅಲೆದಾಡುತ್ತಿದ್ದಾರೆ. ಈ ಮದ್ಯೆ ಶಿಕ್ಷಕರು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ತರುವಂತೆ ಒತ್ತಡ ಹೇರುತ್ತಿದ್ದಾರೆ,ಮಕ್ಕಳು ಪರೆದಾಡುತ್ತಿದ್ದಾರೆ ಪೋಷಕರು ಅಲೆದಾಡುತ್ತಿದ್ದಾರೆ. ಈ ಮೂಲಕ ಒಂದು ಪುಸ್ತಕ ಅಂಗಡಿಯ ಮಾಲಿಕನಾಗಿ,ಮಕ್ಕಳ ಈ ರೀತಿಯ ಅಲೆದಾಟವನ್ನು ಶಿಕ್ಷಣ ಇಲಾಖೆ ಹಾಗೂ ಸರ್ಕಾರದ ಗಮನಕ್ಕೆ ತರುವುದರ ಜೊತೆಗೆ,ಶಿಕ್ಷಕರಿಗೆ ಎಲ್ಲಾ ಪಠ್ಯ ಪುಸ್ತಕಗಳು ಸಿಗುತ್ತೆಲ್ಲವೆಂದು ಪತ್ರಿಕೆಗಳ ಮೂಲಕ ಗಮನಕ್ಕೆ ತರುತ್ತಿದ್ದೇನೆ.
ಇನ್ನು ಮುಂದಿನ ದಿನಗಳಲ್ಲಿ ಸರ್ಕಾರ ಮಕ್ಕಳಿಗೆ ಬೇಕಾದ ಪುಸ್ತಕಗಳನ್ನು ಸಮಯಕ್ಕೆ ಸರಿಯಾಗಿ ಸಿಗುವಂತೆ ಮಾಡಬೇಕು.ಇಲ್ಲಿಯವರೆಗೆ ಸರಿಯಾಗಿ ಯಾವುದೇ ಪುಸ್ತಕಗಳು ಒದಗಿಸುವಲ್ಲಿ ವಿಫಲವಾಗಿದೆ. ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗದಂತೆ ಮುಂಜಾಗ್ರತವಾಗಿ ಸಿಗುವಂತಾಗಲಿ ಎಂದು ವಿನಂತಿಸುತ್ತೇನೆ.
ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಕಾಲೇಜು ಪ್ರಾರಂಭದ ಮೊದಲೇ ಎಲ್ಲಾ ಪಠ್ಯ ಪುಸ್ತಕಗಳು ಬೇಡಿಕೆ ಇರುವಷ್ಟು ಒದಗಿಸುವಂತೆ ವ್ಯವಸ್ಥಿತವಾಗಿ ಸರಬರಾಜು ಮಾಡುವಂತೆ ಸರ್ಕಾರವನ್ನು ವಿನಂತಿಸಿಕೊಳ್ಳುತ್ತೇನೆ.
ಈ ಮೂಲಕ ಮುಂದಿನ ೨೦೨೪-೨೫ ರ ನಂತರ ವಿದ್ಯಾರ್ಥಿಗಳಿಗೆ ಈ ರೀತಿಯ ತೂಂದರೆಗಳು ಆಗದಿರಲಿ, ಮುಂಚಿತವಾಗಿ ಡಿಪ್ಪೋಗಳಲ್ಲಿ ಸಂಗ್ರಹವಾಗುವಂತೆ ನೋಡಿಕೊಳ್ಳುವಂತೆ ವಿನಂತಿಸಿಕೊಳ್ಳುತ್ತೇನೆ.
ವರದಿ:ಕೊಡಕ್ಕಲ್ ಶಿವಪ್ರಸಾದ್