ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ತಾಂಬಾ ಗ್ರಾಮದಲ್ಲಿ ಸತತವಾಗಿ 34 ವರ್ಷಗಳಿಂದ,
ಗ್ರಾಮದ ಪ್ರತಿ ರಸ್ತೆಯ ಉದ್ದಕ್ಕೂ,
ಮೈಸೂರು ಮಹಾದೇವ ಮಹಾರಾಜರ ಭಾವಚಿತ್ರವನ್ನು ಮೆರವಣಿಗೆ ಮೂಲಕ ಪ್ರದರ್ಶನ ಮಾಡುತ್ತಾ ಜಾತ್ರೆಯನ್ನು ಯಶಸ್ವಿಯಾಗಿ ಆಚರಿಸಲಾಗುತ್ತದೆ.
ಸುಮಾರು ಹತ್ತು ವರ್ಷಗಳ ಹಿಂದೆ ಗ್ರಾಮಕ್ಕೆ ಅತೀವ ನೀರಿನ ತೊಂದರೆ ಹಾಗೂ ಬರಗಾಲ ಬಿದ್ದಿರುವಾಗ,ಎಲ್ಲಿಯೂ ಬೋರ್ ಗಳನ್ನು ಕೊರೆದರೂ ನೀರು ಆಗುತ್ತಿರಲಿಲ್ಲ,
ಆಗ ಮಠದಲ್ಲಿ ಏಕಕಾಲದಲ್ಲಿ ಮೂರು ಕೊಳವೆ ಬಾವಿಗಳನ್ನು ಕೊರೆದಾಗ,ಪ್ರತಿ ಕೊಳವೆ ಬಾವಿಗೂ ಸರಿಸುಮಾರು ನಾಲ್ಕರಿಂದ ಆರು ಇಂಚುಗಳಷ್ಟು ನೀರು ಚಿಮ್ಮಿದವು.
ಮತ್ತು ಆಗಿನ ದಶಕದಲ್ಲಿ ಅನಾರೋಗ್ಯಕ್ಕೆ ಒಳಗಾದ ಎಷ್ಟೊ ಭಕ್ತಾದಿಗಳಿಗೆ ಗುಣಪಡಿಸಿದ ಉದಾಹರಣೆಗಳಿವೆ.
ಆಗಿನಿಂದ ಭಕ್ತಾದಿಗಳು ಹೆಚ್ಚಾಗತೊಡಗಿದರು,
ಹೊರ ರಾಜ್ಯದಿಂದ ಸಹಿತ ಭಕ್ತಾದಿಗಳು ಬಂದು ಈ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ.
ಇನ್ನೂ ಅನೇಕ ಪವಾಡಗಳನ್ನು ಮಾಡಿದ್ದಾರೆ.
ಪ್ರತಿ ವರ್ಷವೂ ಇನ್ನೂರಕ್ಕೂ ಹೆಚ್ಚು ಸಾಧು,ಸಂತರು ಈ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ.
ಜಾತ್ರಾ ಮಹೋತ್ಸವದ ಮುಗಿದ ನಂತರ,
ಪ್ರತಿ ಸಾಧು ಸಂತರಿಗೂ ಐದು ನೂರರಿಂದ ಸಾವಿರ ವರೆಗೂ ಗುರು ದಕ್ಷಿಣೆಯಾಗಿ ಹಣವನ್ನು ನೀಡುವ ವಾಡಿಕೆ ಇದೆ.
ಈ ಕಾರ್ಯಕ್ರಮದಲ್ಲಿ
ಗ್ರಾಂ ಪಂ ಅಧ್ಯಕ್ಷರು ರಜಾಕ್ ಚಿಕ್ಕಗಸಿ,ಮಾಜಿ ತಾಲೂಕ ಪಂಚಾಯತ ಸದಸ್ಯರು ಪ್ರಕಾಶ್ ಮುಂಜಿ,ಜಕ್ಕಪ್ಪ ಹತ್ತಳ್ಳಿ,ಮಲ್ಲಿಕಾರ್ಜುನ ಹೊರ್ತಿ, ಹಣಮಂತ ಕಾಳೆ,ದತ್ತು ಬಂಕಲಗಿ,ಚಿದಾನಂದ ಗೌಡಗಾವಿ, ವಿಶ್ವನಾಥ್ ಮಸಳಿ,ಗಂಗಾರಾಮ ಹಜೇರಿ, ಹೊನ್ನಪ್ಪ ಕಳ್ಳಿ, ನಾಗು ದೊಡಮನಿ,ಮೋನಪ್ಪ ನಾವಿ, ಶ್ರೀಶೈಲ ಹೊರ್ತಿ,ಯಲ್ಲಾಲಿಂಗ ಬಿರಾದಾರ,ಮುರ್ತುಜ ಚಿಕ್ಕಗಸಿ,ರವಿ ಉಟಗಿ,ಗೋಪಾಲ ನಂದಿಕೋಲ,ಶಿವು ನಾವಿ,ಪಿಂಟು ರಜಪೂತ,ಲಕ್ಕಪ್ಪ ಕಳ್ಳಿ, ಕಾಸು ಹೊನ್ನಾಳ್ಳಿ, ಅನೇಕ ಪ್ರಮುಖರು ಹಾಗೂ ಭಕ್ತಾದಿಗಳು ಪಾಲ್ಗೊಂಡಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.