ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದಲ್ಲಿ ದಿನಾಂಕ 26 ಜೂನ್ 2024 ರ ಬುಧವಾರದಂದು ಸಿ ಪಿ ಐ (ಎಂಎಲ್) ಲಿಬರೇಷನ್ ಪಕ್ಷ ಮತ್ತು ಅಖಿಲ ಭಾರತ ಮಹಾಸಭಾ,ಅಖಿಲ ಭಾರತ ಕೃಷಿ ಕಾರ್ಮಿಕ ಸಂಘಟನೆ ಮತ್ತು ಅಖಿಲ ಭಾರತ ವಿದ್ಯಾರ್ಥಿ ಸಂಘಟನೆಯಿಂದ ನೂತನ ಕೊಟ್ಟೂರು ತಾಲೂಕಿನ ವಿವಿಧ ಕಚೇರಿ ಪ್ರಾರಂಭಕ್ಕಾಗಿ ಮತ್ತು ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಮತ್ತು ವಿವಿಧ ಗ್ರಾಮ ಪಂಚಾಯಿತಿಗಳ ಮೂಲಭೂತ ಸೌಕರ್ಯಕ್ಕಾಗಿ ಸರ್ಕಾರಕ್ಕೆ ಒತ್ತಾಯಿಸಿ ತಹಶೀಲ್ದಾರ್ ಅವರ ಮೂಲಕ ಪ್ರತಿಭಟನೆ ಮತ್ತು ಅನಿರ್ದಿಷ್ಟ ಅವಧಿ ಧರಣಿ ಸತ್ಯಾಗ್ರಹ ನಡಸಿ ಮನವಿ ಸಲ್ಲಿಸಲಾಯಿತು.ಪ್ರಮುಖವಾದ ಬೇಡಿಕೆಗಳೆಂದರೆ ನೂತನ ಕೊಟ್ಟೂರು ತಾಲೂಕಿನಲ್ಲಿ ಸರ್ಕಾರಿ ಪದವಿ ಕಾಲೇಜ್,ನೂತನ ಕಚೇರಿಗಳು,ಕೆಲ ಅಧಿಕಾರಿಗಳು ಹಾಗೂ ಪಿಡಿಒ ಗಳ ಭ್ರಷ್ಟಾಚಾರ,ಡೋರ್ ನಂಬರ್ ಮತ್ತು ಫಾರಂ ನಂಬರ್ 3 ತಾಲೂಕಿನ ಎಲ್ಲಾ ಕೆರೆಗಳ ಒತ್ತುವರಿ ತೆರವುಗೊಳಿಸಲು,ಕೆ ಅಯ್ಯನಹಳ್ಳಿ ಗ್ರಾಮಕ್ಕೆ ಮುರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ವಿವಿಧ ಬೇಡಿಕೆಗಳನ್ನು ಕುರಿತು ಗುಡಿಯರ್ ಮಲ್ಲಿಕಾರ್ಜುನ್ ಸಿಪಿಐ (ಎಂಎಲ್)ಲಿಬರೇಶನ್ ತಾಲೂಕು ಕಾರ್ಯದರ್ಶಿ,ಗುಡದಯ್ಯ ಟಿ ಅಜ್ಜಪ್ಪ ರಾಮನಗೌಡ ಮತ್ತಿತರರು ವಿದ್ಯಾರ್ಥಿಗಳು ಸಮೂಹವೇ ಉಪಸ್ಥಿತರಿದ್ದು ಮತ್ತು ಪೊಲೀಸ್ ಸಿಬ್ಬಂದಿಯವರು ಸುರಕ್ಷತೆ ಕಾಪಾಡುವಲ್ಲಿ ಪಾತ್ರರಾಗಿದ್ದರು.
