ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮತ್ತು ಪೊಲೀಸ್ ಇಲಾಖೆ ಜಾಲಹಳ್ಳಿ ಸಹಭಾಗಿತ್ವದಲ್ಲಿ ಜೆ.ಜೆ.ಪಿ.ಯು ಕಾಲೇಜಿನಲ್ಲಿ “ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆ” ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಸಿಪಿಐ ಎನ್.ವೈ. ಗುಂಡುರಾವ ರವರು ಹಾಗೂ ತಾಲೂಕಿನ ಮಾನ್ಯ ಯೋಜನಾಧಿಕಾರಿಗಳಾದ ರಾಜೇಶ್ ಎಮ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಾನ್ಯ ಯೋಜನಾಧಿಕಾರಿಗಳು ಪ್ರಾಸ್ತಾವಿಕವಾಗಿ ಮಾತನಾಡಿ ಯೋಜನೆ ಕಳೆದ 4 ದಶಕಗಳಿಂದ ಸಮಾಜ ನಿರ್ಮಾಣಕ್ಕೆ ಸಂಕಲ್ಪ ತೊಟ್ಟಿದ್ದು ಯುವಜನತೆಯನ್ನು ಜಾಗೃತಗೊಳಿಸುವ ಕೆಲಸ ಮಾಡುತ್ತಿದೆ ಮಾದಕ ವಸ್ತುಗಳ ಸೇವನೆಗೊಮ್ಮೆ ಒಳಗಾದರೆ ಅದರಿಂದ ಹೊರಬರುವುದು ಕಷ್ಟ ಇದು ಮಾನವನ ಆರೋಗ್ಯದ ಮೇಲೆ ದುಷ್ಟರಿಣಾಮ ಬೀರಲಿದೆ ಮತ್ತು ಆಗುವ ತೊಡಕುಗಳು,ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು ವ್ಯೆಸನ ಮುಕ್ತ ಸಮಾಜ ನಿರ್ಮಾಣಕ್ಕೆ ಪರಮ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಜನ ಜಾಗೃತಿ ಕಾರ್ಯಕ್ರಮದ ಮೂಲಕ ಮಧ್ಯವರ್ಜನ ಶಿಬಿರ ಮಾಡುತ್ತಿದ್ದು,ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಮಾಡುತ್ತಿರುವ ಬಗ್ಗೆ ಮಾಹಿತಿಯನ್ನು ನೀಡಿದರು. ಯೋಜನೆಯ ವಿವಿಧ ಸಮುದಾಯದ ಅಭಿವೃದ್ಧಿ ಕಾರ್ಯಕ್ರಮಗಳಾದ ಸುಜ್ಞಾನನಿಧಿ,ಮಾಶಾಸನ, ಜನಮಂಗಳ,ಜ್ಞಾನ ದೀಪ ಶಿಕ್ಷಕರು ಇತ್ಯಾದಿಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಸಿಪಿಐ ಎನ್.ವೈ. ಗುಂಡೂರಾವ ರವರು ಮಕ್ಕಳಿಗೆ ಪ್ರತಿಜ್ಞಾವಿಧಿ ಭೋದಿಸಿ ಮಾತನಾಡಿ ಮಾದಕ ವಸ್ತು ವಿರೋಧಿ ಬಗ್ಗೆ ಕಾನೂನುನಲ್ಲಿ ಯಾವ ರೀತಿಯ ಯಾವ ಸೆಕ್ಷನಲ್ಲಿ ಕೇಸ್ ದಾಖಲೆ ಮಾಡುತ್ತಾರೆ ಎಂಬ ಮಾಹಿತಿಯನ್ನು ನೀಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಬಸವರಾಜ್ ಉಪನ್ಯಾಸಕರು ಸ.ಪ.ಪೂ.ಕಾಲೇಜ್ ಜಾಲಹಳ್ಳಿ ಯವರು ಮಾತನಾಡುತ್ತಾ ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಕನಸು ಕಾಣಬೇಕು ತಂದೆ ತಾಯಿ ಕೊಟ್ಟ ಮಾರ್ಗದಲ್ಲಿ ಉತ್ತಮ ವ್ಯಕ್ತಿಯಾಗಿ ಹೊರ ಹೊಮ್ಮಬೇಕು ಯುವ ಪೀಳಿಗೆ ಕೆಲವೊಮ್ಮೆ ತನಗರಿವಿಲ್ಲದಂತೆ ದುಶ್ಚಟ ದುರಭ್ಯಾಸಗಳಿಗೆ ಬಲಿಯಾಗುತ್ತಾರೆ ಹದಿ ಹರೆಯದ ಯುವಕ ಯುವತಿಯರು ಜಾಗೃತರಾದಲ್ಲಿ ಸಮಾಜದಲ್ಲಿ ನಡೆಯುತ್ತಿರುವ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಡಲು ಸಾಧ್ಯ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲಕರಾದ ಆದೇಶ ಗೂಡೂರು ರವರು ಅಧ್ಯಕ್ಷತೆ ವಹಿಸಿದ್ದರು.
ಪೊಲೀಸ್ ಇಲಾಖೆಯ ಮುಖ್ಯ ಪೇದೆ ರಾಜು, ಮುರುಗೇಶ್ ವಲಯದ ಮೇಲ್ವಿಚಾರಕರಾದ ಶಿವರಾಜ,ಸೇವಾ ಪ್ರತಿನಿಧಿ ಯಲ್ಲಪ್ಪ,ಕಾಲೇಜಿನ ಸಿಬ್ಬಂದಿಗಳು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು
ವರದಿ:ಶರಣು ಹುಣಸಗಿ