ಪಟ್ಟಣದ ಲೋಕಪಯೋಗಿ ಅತಿಥಿ ಗೃಹ ಮುಂಭಾಗದಲ್ಲಿ ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ
ಬೆಂಗಳೂರು ನಿರ್ಮಾತೃ ಕೆಂಪೇಗೌಡರು ನಿರ್ಮಿಸಿದ ಇಂದು ರಾಜಧಾನಿಯಾಗಿ ಅವರು ಕಟ್ಟಿದ ಕೆರೆಕಟ್ಟೆಗಳು ಕಲ್ಯಾಣಿಗಳು ಉದ್ಯಾನವನಗಳು ದೇವಾಲಯಗಳ ನಿರ್ಮಾಣ ಕಾರ್ಯ ವೈಖರಿ ಕುರಿತು ಇಂದು ನಾಡಿನಾದ್ಯಂತ ಕೆಂಪೇಗೌಡರ 515 ನೇ ಜಯಂತಿಯನ್ನು ಸಂಭ್ರಮ ಸಡಗರದಿಂದ ಆಚರಣೆ ಮಾಡುತ್ತಿದ್ದೇವೆ ಅವರು16ನೇ ಶತಮಾನದಲ್ಲಿಯೇ ಹಾಕಿಕೊಟ್ಟಿರುವ ಬುನಾದಿಯಿಂದ ಇತರೆ ಜಿಲ್ಲೆ ಮತ್ತು ತಾಲೂಕುಗಳಿವು ಅವರು ಮಾಡಿದಂತಹ ಅಭಿವೃದ್ಧಿ ಕಾರ್ಯಗಳ ಬಗ್ಗೆ ಹೆಮ್ಮೆ ಪಡುವ ವಿಷಯಗಳ ಕುರಿತು ವಿಚಾರ ಹಾಗೂ ಅವರ ಸೇವೆ ನಾಡಿನ ಜನತೆಗೆ ಅಪಾರವಾದದ್ದು ಎಂದು ಬಣ್ಣಿಸಿದರು.
ಇದೇ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿ ಗುರುಪ್ರಸಾದ್, ಉಪ ತಹಿಶೀಲ್ದಾರ್ ಧನಂಜಯ್,ಕ್ಷೇತ್ರ ಶಿಕ್ಷಣ ಅಧಿಕಾರಿ ಮಹೇಶ್,ತಾಲೂಕು ಸಹಾಯಕ ನಿರ್ದೇಶಕ ರವೀಂದ್ರ ,ತಾಲೂಕು ಆರೋಗ್ಯ ಅಧಿಕಾರಿ ಪ್ರಕಾಶ್ ,ದೈಹಿಕ ಪರಿವೀಕ್ಷಕರಾದ ಮಹದೇವ್ , ಶಿರಸ್ತೇದಾರ ನಾಗೇಂದ್ರ, ಶಿಕ್ಷಣ ಸಂಯೋಜಕರಾದ ಕಂದವೇಲು ಹಾಗೂ ಮುಖಂಡರುಗಳಾದ,ಪಟ್ಟಣ ಪಂಚಾಯತಿ ಸದಸ್ಯರಾದ ಆನಂದ್ ಕುಮಾರ್,ಮುಮ್ತಾಜ್ ಬಾನು, ಕರಿಯಪ್ಪ, ರಾಜೂಗೌಡ ,ಮಂಜೇಶ್ ಗೌಡ, ಸಿದ್ದೇಗೌಡ,ವೆಂಕಟೇಗೌಡ.ಕೃಷ್ಣೇಗೌಡ,ವೆಂಕಟೇಶ್, ಸಿದ್ದರಾಜು, ಕಿರಣ್ ಕುಮಾರ್,ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಶಿವಮೂರ್ತಿ,ಡಿಕೆ ರಾಜು,ಗೋಪಾಲ್ ನಾಯಕ,ಎಸ್.ಆರ್ ಮಹಾದೇವ್ ,ಮುಖ್ಯ ಭಾಷಣಕಾರರಾದ ಶ್ರೀನಿವಾಸ್ ನಾಯ್ದು,ಇನ್ನಿತರರು ಹಾಜರಿದ್ದರು
ವರದಿ:ಉಸ್ಮಾನ್ ಖಾನ್