ಗದಗ:ಕರ್ನಾಟಕ ಅಚೀವರ್ಸ್ ಬುಕ್ ಆಪ್ ರೆಕಾರ್ಡ್ (KABR)ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಹಾವೇರಿಯ ಗುರುಭವನದ ಹತ್ತಿರ ಅಂಗನವಾಡಿ ಎದುರಿಗೆ ನಡೆದ ಕರ್ನಾಟಕ ಅಚೀವರ್ಸ್ ಬುಕ್ ಆಪ್ ರೆಕಾರ್ಡ್ ಪುಸ್ತಕದ ಬಿಡುಗಡೆ ಹಾಗೂ ಕೋಟಿ ಕನಸುಗಳ ಅರಮನೆ ನಾಮಫಲಕದ ಅನಾವರಣ ಮತ್ತು ಹೈ ವೈಬ್ ಬುಕ್ ಆಪ್ ವರ್ಲ್ಡ್ ರೆಕಾರ್ಡ್ ಲೋಗೋ ಉದ್ಘಾಟನೆ ಸಮಾರಂಭದಲ್ಲಿ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಜಂತಲಿ ಶಿರೂರು ಗ್ರಾಮದ ಚುಟುಕು ಕವಯತ್ರಿ ಶ್ರೀಮತಿ ಭಾಗ್ಯ ಶ್ರೀ ಗವಿಶಿದ್ಧಯ್ಯ ಹಳ್ಳಿಕೇರಿಮಠ ಅವರ ಕನ್ನಡ ವರ್ಣಾಕ್ಷರಗಳಲ್ಲಿ ರಚಿತವಾದ ಅಕ್ಷರ ಭಾಗ್ಯ-2 ಹಸ್ತಪ್ರತಿ ಲೋಕಾರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಬಾದಾಮಿ-ಬೇಲೂರಿನ ಶ್ರೀ ಗುರು ಬಸವೇಶ್ವರ ಮಠದ ಶ್ರೀ ಮ.ನಿ.ಪ್ರ.ಡಾ.ಮಹಾಂತ ಸ್ವಾಮಿಗಳು, ಹಾವೇರಿಯ ಹಿರಿಯ ಸಾಹಿತಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶ್ರೀ ಸತೀಶ ಕುಲಕರ್ಣಿ,ಹಾವೇರಿಯ ಹಿರಿಯ ಸಾಹಿತಿ ಶ್ರೀ ಸಿ.ಎಸ್.ಮರಳಿ ಹಳ್ಳಿ,
ಶ್ರೀ ಶ್ರೀನಿವಾಸ ರಾಮರಾವ್ ಹಂಚಾಟೆ,ಶ್ರೀಮತಿ ಶಾಂತಾಬಾಯಿ ಶ್ರೀನಿವಾಸ ಹಂಚಾಟೆ,
KABR ಸಂಸ್ಥೆಯ ಸಂಸ್ಥಾಪಕರಾದ ಡಾ.ಅಂಬಿಕಾ ಹಂಚಾಟೆ,ಬೀದರಿನ ಹಿರಿಯ ಕಲಾವಿದ ಶ್ರೀ ಶಂಭುಲಿಂಗ ವಾಲ್ದೊಡ್ಡಿ,ಕನ್ನಡಪರ ಹೋರಾಟಗಾರ ಶ್ರೀ ರಮೇಶ ಬಿರಾದರ,ಶ್ರೀ ಲಕ್ಷ್ಮಣ ಚೌದ್ರಿ ಗೋಕಾಕ,ಶ್ರೀಮತಿ ಡಾ.ಶಾಂತಾಬಾಯಿ ಕರಡಿಗುಡ್ಡ,ಶ್ರೀ ಮಂಜುನಾಥ ಸಣ್ಣಿರಿಂಗಣ್ಣವರ,ಶ್ರೀ ಶಂಭುಲಿಂಗಯ್ಯ ಗಂಟೆಪ್ಪಗೌಡರ,ಶ್ರೀ ಜಿ ಎಮ್ ಓಂಕಾರನ್ನವರ,ಶ್ರೀ ಮಾರುತಿ ಮೆಡ್ಲೀರಿ ಸೇರಿದಂತೆ ಕಲಾವಿದರು,ಕವಿಗಳು ಪಾಲ್ಗೊಂಡಿದ್ದರು.