ಕೊಟ್ಟೂರು:ಪಟ್ಟಣ ದಿನದಿಂದ ದಿನಕ್ಕೆ ಸ್ವತಂತ್ರ್ಯವಾಗಿ ಅಭಿವೃದ್ಧಿಯತ್ತ ಬೆಳೆಯುತ್ತಿರುವ ನಗರವಾಗಿದೆ. ಅದರಲ್ಲೂ ಪಟ್ಟಣ ಸಂಪರ್ಕಿಸುವ ಉಜ್ಜಿನಿ ರಸ್ತೆ ಜನಸಂದಣಿಯಿಂದ ಕೂಡಿದ ಪ್ರದೇಶವಾಗಿದೆ ಅಷ್ಟೇ ಆ ರಸ್ತೆಯಲ್ಲೇ ಬಹು ಸಂಖ್ಯೆಯ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿ ಕಂಡುಬರುತ್ತಿದೆ.ಉಜ್ಜಿನಿ ಮುಖ್ಯ ರಸ್ತೆಯಲ್ಲಿ ಬಿಡಾಡಿ ದನಗಳ ಕಂಡು ಸಾರ್ವಜನಿಕರು ಬೆಚ್ಚಿ ಬೀಳುವಂತಾಗಿದೆ. ಬಿಡಾಡಿ ದನಗಳ ನಿಯಂತ್ರಣಕ್ಕೆ ಬೇಗನೆ ಕ್ರಮ ಕೈಗೊಳ್ಳದ ಸಂಬಂಧಪಟ್ಟ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿರುವ ಸಾರ್ವಜನಿಕರು.
ಕೊಟ್ಟೂರು ಪಟ್ಟಣ ಒಂದು ಧಾರ್ಮಿಕ ಕ್ಷೇತ್ರವಾಗಿದ್ದು ಧಾರ್ಮಿಕ ದತ್ತಿ ಇಲಾಖೆ 1 ನೇ ದರ್ಜೆಯ ದೇವಸ್ಥಾನವಾಗಿದೆ.ಸರ್ಕಾರಕ್ಕೆ ಪ್ರತಿ ವರ್ಷವೂ ಅಂದಾಜು 1.50 ರಿಂದ 2 ಕೋಟಿಯವರೆಗೆ ಆದಾಯವೂ ಇದೆ.ನಾಡಿನ ಭಕ್ತರು ತಮ್ಮ ಹರಕೆ ತೀರಿಸಿಕೊಳ್ಳಲು ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನಕ್ಕೆ ಗೂಳಿ,ಹಸುಗಳನ್ನು ಬಿಡುವ ಸಂಸ್ಕೃತಿ ಸಂಪ್ರದಾಯವೂ ಇದೆ ಆದರೆ ಆ ದೇವಸ್ಥಾನದ ಭಕ್ತರ ದುರ್ದೈವ,ನಾವು ಹರಕೆ ತೀರಿಸಲು ಬಿಟ್ಟ ಹಸುಗಳಿಗೆ ರಕ್ಷಣೆ ಇಲ್ಲಾಂದ್ರೆ ಹೇಗೆ ಎಂದು ಸರ್ಕಾರವನ್ನು ಪ್ರಶ್ನಿಸಿದರು.ಸರ್ಕಾರಕ್ಕೆ ಭಕ್ತರು ಕಾಣಿಕೆ ರೂಪದಲ್ಲಿ ಹಾಕುವ ಹಣ ಹಾಗೂ ಬೊಕ್ಕಸದ ಲೆಕ್ಕ ಮಾತ್ರ ಬೇಕಾಗಿದೆ ವಿನಃ ದೇವಸ್ಥಾನದ ಗೂಳಿಗಳ ರಕ್ಷಣೆ ಮಾತ್ರ ಬೇಡವಾಗಿದೆ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ದೇವಸ್ಥಾನದ ಗೂಳಿಗಳ ಜೊತೆ ಸಾರ್ವಜನಿಕರ ಸಾಕು ದನಗಳು ಸಹ ಸೇರಿಕೊಂಡು ಪ್ರತಿದಿನ ರಸ್ತೆ ತುಂಬಾ ಓಡಾಡುವುದು,ರಸ್ತೆಯಲ್ಲೇ ಮಲಗುವುದು,ರಸ್ತೆ ಮಧ್ಯೆಯೇ ಹೊಡೆದಾಟ ಮಾಡುವುದರಿಂದ ರಸ್ತೆ ಪಾದಚಾರಿಗಳು ಹಾಗೂ ವಾಹನ ಸವಾರರು ಭಯದಲ್ಲಿ ಸಂಚಾರ ಮಾಡುವ ಸ್ಥಿತಿ ಕೊಟ್ಟೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರ ಪರಿಸ್ಥಿತಿಯಾಗಿದೆ.
ಪಟ್ಟಣದಲ್ಲಿ ಹಿಂದೆ ಉಜ್ಜಿನಿ ರಸ್ತೆಯಲ್ಲಿಂದು ನಡೆದ ಗೂಳಿ ಇರಿತದಿಂದ ವ್ಯಕ್ತಯೊಬ್ಬರು ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಜೂ 28 ರ ಮಧ್ಯಾಹ್ನ ಸುಮಾರು 1.30 ರ ಹೊತ್ತಿಗೆ ತುಂಗಭದ್ರಾ ಬಿ.ಪಿ.ಇಡಿ ಕಾಲೇಜು ಹಾಗೂ ಪಟ್ಟಣದ ಉಜ್ಜಿನಿ ರಸ್ತೆ ನಕ್ಕನಗುಂಡಿ ಮಧ್ಯೆ ಎರಡು ಗೂಳಿಗಳು ಅರ್ಧಗಂಟೆಗೂ ಹೆಚ್ಚುಕಾಲ ಹೊಡೆದಾಟ ನಡೆಸಿ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತೊಂದರೆ ಕೊಟ್ಟು ಭಯ ಹುಟ್ಟಿಸಿದ ಘಟನೆಯು ನಡೆಯಿತು,ಗೂಳಿ ಕಾದಾಟ ಕಣ್ಣಾರೆ ಕಂಡು ದೇವಸ್ಥಾನದ ಅಧಿಕಾರಿಗಳಿಗೂ ಹಾಗೂ ಸ್ಥಳೀಯ ಆಡಳಿತವನ್ನು ಸಾರ್ವಜನಿಕರು ಪ್ರಶ್ನಿಸಿದರು.
ಸರ್ಕಾರ ಬೊಕ್ಕಸದ ಲೆಕ್ಕ ಮಾತ್ರ ಕೇಳುವುದಲ್ಲ,ಆ ಹಣದಿಂದಲೇ ದೇವಸ್ಥಾನದ ಆಸ್ತಿಗಳಾದ ಗೂಳಿ,ಹಸುಗಳ ಸಂರಕ್ಷಣೆ ಕೂಡಾ ಮಾಡಬೇಕು ಆಗಿದ್ದಾಗ ಮಾತ್ರ ದೇವಸ್ಥಾನ ಘನತೆ,ಗೌರವ, ಉಳಿಯುತ್ತದೆ.ಭಕ್ತರಲ್ಲಿ ಸರ್ಕಾರ ಹಾಗೂ ಅಧಿಕಾರಿಗಳ ಮೇಲಿನ ಗೌರವ ಹೆಚ್ಚಾಗುತ್ತದೆ ಎಂದ ಸ್ವಾಮಿಯ ಭಕ್ತರು.