ಬಳ್ಳಾರಿ:ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿಗೆ ಮನವಿ ಪತ್ರ ಸಲ್ಲಿಸಲು ತೆರಳಿದ್ದ ವಿದ್ಯಾರ್ಥಿಗಳು ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ. ವಿದ್ಯಾರ್ಥಿಗಳ ಸಮಸ್ಯೆಯನ್ನು ಕೇಳುವುದು ದೂರದ ಮಾತು ಅವರ ಮನವಿ ಪತ್ರವನ್ನು ಸ್ವೀಕರಿಸಲು ಬಾರದ ವಿಭಾಗೀಯ ನಿಯಂತ್ರಣಾಧಿಕಾರಿ ಮತ್ತು ಅವರ ಕಚೇರಿಯ ಅಧಿಕಾರಿಗಳು ಮನವಿ ಪತ್ರವನ್ನು ಟಪಾಲು ವಿಭಾಗಕ್ಕೆ ಕೊಟ್ಟು ಹೋಗಿ ಎಂದ ಅಧಿಕಾರಿಗಳು ಸರ್ಕಾರಿ ಕಚೇರಿಯಲ್ಲಿ ಮನವಿಪತ್ರವನ್ನು ಸ್ವೀಕರಿಸಲು ಯಾವ ಅಧಿಕಾರಿಗಳು ಬಾರದ ಕಾರಣ ವಿದ್ಯಾರ್ಥಿಗಳು ತಮಗೆ ತಾವೇ ಮನವಿ ಪತ್ರ ಸಲ್ಲಿಸಿಕೊಂಡರು.
ಕೋವಿಡ್ ನಿಂದ ಶಾಲಾ-ಕಾಲೇಜುಗಳ ಶೈಕ್ಷಣಿಕ ವರ್ಷವೂ ವ್ಯತ್ಯಯವಾಗಿದ್ದು ಇದರಿಂದ ಎಲ್ಲಾ ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷವು ಹಿಂದೆ ಉಳಿದಿದೆ. ಪದವಿ,ಸ್ನಾತಕೋತ್ತರ,ಕಾನೂನು,ಇಂಜಿನಿಯರಿಂಗ್, ನರ್ಸಿಂಗ್ ಹೀಗೆ ಇನ್ನೂ ಹಲವಾರು ಕೋರ್ಸ್ ಗಳ ವಿದ್ಯಾರ್ಥಿಗಳ ತರಗತಿಗಳು ಮತ್ತು ಪರೀಕ್ಷೆಗಳು ಅಕ್ಟೋಬರ್ ವರೆಗೆ ನಡೆಯುತ್ತಿವೆ.ಜೂನ್ 30ಕ್ಕೆ ಬಸ್ ಪಾಸ್ ಅವಧಿ ಮುಗಿಯಲಿದ್ದು ಪಠ್ಯಕ್ರಮ ಕೇವಲ 50% ರಷ್ಟು ಮಾತ್ರ ಪೂರ್ಣಗೊಂಡಿದ್ದು ಇನ್ನೂ 50% ಪಠ್ಯಕ್ರಮ ಬಾಕಿ ಇದೆ ಇದರಿಂದ ತರಗತಿಗಳನ್ನು ನಾಲ್ಕು ತಿಂಗಳುಗಳ ಕಾಲ ಪಠ್ಯಕ್ರಮ ಮತ್ತು ಪರೀಕ್ಷೆಗಳಿಗಾಗಿ ವಿಸ್ತರಿಸಲಾಗಿದೆ.ಸರ್ಕಾರವು ಯಾವುದೇ ರೀತಿಯ ಹೆಚ್ಚುವರಿ ಶುಲ್ಕ ವಿಧಿಸದೆ ವಿದ್ಯಾರ್ಥಿಗಳ ಬಸ್ ಪಾಸ್ ನಾಲ್ಕು ತಿಂಗಳು ಕಾಲ ಉಚಿತವಾಗಿ ವಿಸ್ತರಿಸಬೇಕು ಎಂದು ವಿದ್ಯಾರ್ಥಿಗಳು ತಮಗೆ ತಾವೇ ಮನವಿ ಸಲ್ಲಿಸಿಕೊಂಡು ಟಪಾಲು ವಿಭಾಗಕ್ಕೆ ಪತ್ರವನ್ನು ನೀಡಿದರು.
ಬಳ್ಳಾರಿ ವಿಭಾಗೀಯ ನಿಯಂತ್ರಣಾಧಿಕಾರಿ ಇನಾಯತ್ ಬಾಗಬಾನ್ ಹಾಗೂ ಸಹಾಯಕ ಸಂಚಾರ ವ್ಯವಸ್ಥಾಪಕರದಂತಹ ಹೇಮಲತಾ ಕೆ ಮತ್ತು ಈರಮ್ಮ ಅಧಿಕಾರಿಗಳು ಕಚೇರಿಯಲ್ಲಿ ಲಭ್ಯವಿದ್ದರೂ ಮನವಿ ಪತ್ರವನ್ನು ಸ್ವೀಕರಿಸಲು ಬಾರದೆ ವಿದ್ಯಾರ್ಥಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಕಾನೂನು ವಿದ್ಯಾರ್ಥಿಗಳಾದಂತಹ ಸೈಯದ್ ವಾರೀಶ್ ಎನ್,ಗುರು ಶಾಸ್ತ್ರಿ ಎಚ್.ಎಂ,ವಿಜಯ ಕುಮಾರ್, ಶರಣಪ್ಪ,ಮಣಿಕಂಠ,ಲಕ್ಷ್ಮೀಕಾಂತ,ಸುರೇಶ್, ಮಹಾಂತೇಶ್,ಗಿರೀಶ್ ಉಪಸ್ಥಿತರಿದ್ದರು.