ಸೈದಾಪೂರ: ಇಲ್ಲಿಗೆ ಸಮೀಪದ ಕಾಳೆಬೆಳಗುಂದಿ ಶ್ರೀ ಬನದೇಶ್ವರ ಜಾತ್ರಾ ಮಹೋತ್ಸವ ಮಂಗಳವಾರ ಬೆಳಿಗ್ಗೆ 05 ಗಂಟೆಗೆ ರಥೋತ್ಸವವೂ ಅದ್ದೂರಿಯಾಗಿ ಜರುಗಿತು.
ಈ ಜಾತ್ರೆಗೆ ಸುತ್ತ-ಮುತ್ತಲಿನ ಊರಿನ, ಜಿಲ್ಲಾ & ರಾಜ್ಯಗಳಿಂದ ಬಹಳಷ್ಟು ಜನರು ಜಾತ್ರೆಯ ಹಿಂದಿನ ದಿನವೇ ಆಗಮಿಸಿ, ಅಲ್ಲೇ ವಸ್ತಿ ಮಾಡಿ, ದೇವರಿಗೆ ಪಡಿ-ಪಾವುಗಳ ಜೊತೆಗೆ ಹೊಳಿಗೆ, ಸಿಹಿತಿಂಡಿಗಳನ್ನು ಮಾಡಿ, ದೇವರಿಗೆ ನೈವೇದ್ಯವನ್ನು ಮಾಡುತ್ತಾರೆ. ಹಾಗೆಯೇ ಇನ್ನೂ ಕೆಲವು ಜನರು ಕಾಲ್ನಡಿಗೆಯ ಮೂಲಕ ದೇವಸ್ಥಾನಕ್ಕೆ ಬರುತ್ತಾರೆ.
