ಬೆಳಗಾವಿ:ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆ ನಂ.೨ ರಾಮದುರ್ಗ ಈ ಶಾಲೆಯವರು ದಿನಾಂಕ 28-06-2024 ರಂದು ತಮ್ಮ ಶಾಲೆ ಸ್ವಚ್ಛ ಮಾಡುವ ಸಂದರ್ಭದಲ್ಲಿ ಏನೋ ಇರಬಹುದು..!! ಈ ಪೋಟೋ ತಂದು.. ಸಾರ್ವಜನಿಕ ಮೂತ್ರಾಲಯದ ಗೋಡೆಯ ಬಾಜು ಕಸದಲ್ಲಿ ತಂದು ಬಿಸಾಕಿ ಹೋಗಿದ್ದಾರೆ. ಅದನ್ನು ಕಂಡ ದಾರಿಹೋಕ ಸಾರ್ವಜನಿಕ ವ್ಯಕ್ತಿಯೊಬ್ಬರು ನನಗೆ ಕರೆ ಮಾಡಿ.. “ಸರ್.ಇಲ್ಲಿ (ಜುನಿಪೇಠೆಯಲ್ಲಿ..ರಾಮದುರ್ಗದ ಹಳೆಯ ಪೋಲೀಸ ಸ್ಟೇಶನ್ ಹತ್ತಿರದ..ಸಾರ್ವಜನಿಕರು ಉಚ್ಚೆ ಹೊಯ್ಯುವ ಪಾಯಖಾನೆಯ ಮುಂದಿನ ಗೋಡೆಗೆ) ಚೆಲ್ಲಿ ಹೋಗಿದ್ದಾರೆ.. ನೋಡಬರ್ರಿ.. ಈ ತರ.. ಈ ೨ ನಂಬರ್ ಸರ್ಕಾರಿ ಶಾಲೆಯವರು ಮಾಡಬೇಕೇನ್ರೀ ಸರ್..!!? ಇದನ್ನ ಪೇಪರಿನ್ಯಾಗ ಬರೀ ಬರ್ರೀ” ಅಂತ.. ಅಂದ್ರು..!! ಆಗ ನಾ.. “ಈಗ ಊರಾಗ ಇಲ್ಲರೀ.. “ನೀವು ಆ ದೃಶ್ಯ ಪೋಟೋ ತೆಗೆದು ನನಗ.. ವ್ಯಾಟ್ಸಪ್ ಗೆ ಹಾಕಿರಿ” ಅಂತಾ ಹೇಳಿದೆ..ಆಗ ಅವರು ಈ ರೀತಿ ಪೋಟೋ ತೆಗೆದು.. ಹಾಕಿದ್ದಾರೆ.!
ಇದನ್ನ ಆ ಶಾಲೆಯವರು.. ಶಿಕ್ಷಕರು ಒಗದಾರೋ.. ಅಥ್ವಾ ವಿದ್ಯಾರ್ಥಿಗಳು ಒಗದಾರೋ..ಮತ್ತ… ಏನ್.. ಆ ಶಾಲೆಗೆ ಸಂಬಂಧಪಟ್ಟ ಯಾರಾದ್ರೂ ಒಗದಾರೋ ಗೊತ್ತಿಲ್ಲ.. ಆದರ.. ನೋಡ್ರೀ ನಮ್ಮ ದೇಶದ ಉಪರಾಷ್ಟ್ರಪತಿ,ಎರಡನೇ ರಾಷ್ಟ್ರಪತಿ.. ಶಿಕ್ಷಣಪ್ರೇಮಿ..ಹಾಗೇ ಶಿಕ್ಷಕ ದಿನಾಚರಣೆಯನ್ನಾಗಿ ತಮ್ಮ ದಿನಾಚರಣೆಯನ್ನು ಆಚರಿಸುವಂತೆ ಮಾಡಿದ ಉತ್ತಮೋತ್ತಮ ವ್ಯಕ್ತಿಯ ಭಾವಚಿತ್ರ ಹಳೆಯದಾಗಿದೆ ಎಂದು..ಅದನ್ನು ಉಚ್ಚೆಯ ಪಾಯಖಾನೆಯ ಹತ್ತಿರದ.. ಕಸ ಚೆಲ್ಲುವ ಜಾಗೆಯಲ್ಲಿ ಬಿಸಾಕಿ ಹೋಗೋದು ಅಷ್ಟೊಂದು ಸೂಕ್ತ ಕಾರ್ಯ ಅಲ್ಲ. ಈ ಬಗ್ಗೆ ಅವರಲ್ಲಿ ಜ್ಞಾನೋದಯ ಆಗಿ..ಉತ್ತಮ ಬದಲಾವಣೆ ಆದರೆ ಬಹಳ ಒಳ್ಳೆಯದು.
ವರದಿ ಕರಿಯಪ್ಪ ಮಾ ಮಾದರ