ಧಾರವಾಡ: ಪಂಚಸೇನಾ ಪಂಚಮಸಾಲಿ ಕೂಡಲ ಸಂಗಮ ಧಾರವಾಡ ಜಿಲ್ಲಾ ಘಟಕ ವತಿಯಿಂದ,
ಹುಬ್ಬಳ್ಳಿ ಶಹರ ವಾರ್ಡ 68 ರಲ್ಲಿರುವ ಬೆಂಡಿಗೇರಿ ಓಣಿಯಲ್ಲಿರುವ ಶ್ರೀಬನ್ನಿ ಮಹಾಕಾಳಿ ದೇವಸ್ಥಾನ ಸುತ್ತಮುತ್ತಲಿನ ಆವರಣ ಸ್ವಚ್ಛ ಗೊಳಿಸಬೇಕೆಂದು ಪಂಚಸೇನೆಯ ಜಿಲ್ಲಾಧ್ಯಕ್ಷರಾದ ಶ್ರೀ ಮುತ್ತು ಬೆಳ್ಳಕ್ಕಿ ಯುವರ ನೇತೃತ್ವದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪಂಚಸೇನೆಯ ಪದಾಧಿಕಾರಿಗಳಾದ ಜಿಲ್ಲಾ ಸಾಮಾಜಿಕ ಜಾಲತಾಣದ ಅಧ್ಯಕ್ಷರಾದ ಸುರೇಶ ಎಸ್ ಜಿ, ಜಿಲ್ಲಾ ಉಪಾಧ್ಯಕ್ಷರಾದ ಚಂದ್ರಗೌಡ ಪಾಟೀಲ, ಜಿಲ್ಲಾ ಖಜಾಂಚಿ ರುದ್ರಗೌಡ ಪರ್ವತಗೌಡರ, ತಾಲೂಕು ಉಪಾಧ್ಯಕ್ಷರಾದ ಮೈಲಾರಿ ಗೌಡ ಪಾಟೀಲ, ತಾಲೂಕು ಮುಖಂಡರಾದ ವೀರಪಾಕ್ಷ ಮಲ್ಲೂರು, ಧಾರವಾಡ ಶಹರ ಅಧ್ಯಕ್ಷರಾದ ಮನೋಜ ಕಡಪಟ್ಟಿ, ಸಮಾಜದ ಹಿರಿಯ ಮುಖಂಡರಾದ ಲೋಕಚಂದ್ರ ಕಿಲ್ಲೇಧಾರ,ವೀರಪ್ಪ ನವಲಗುಂದ, ರಾಜು ಪಾಟೀಲ, ನಾಗಪ್ಪ ಭಾವಿಕಟ್ಟಿ, ರಾಜು ಸವದತ್ತಿ, ಈರಣ್ಣಾ ಬಳೇಗೇರ, ಮಹಿಳಾ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಅನುಪಮಾ ಬೆಳ್ಳಕ್ಕಿ, ಜಿಲ್ಲಾ ಉಪಾಧ್ಯಕ್ಷರಾದ ಪುಷ್ಪಾ ನವಲಗುಂದ, ಜಿಲ್ಲಾ ಮುಖಂಡರಾದ ಸಾವಿತ್ರಿ ಬೆಳ್ಳಕ್ಕಿ, ಮುಂತಾದವರು ಉಪಸ್ಥಿತರಿದ್ದರು.
ವರದಿ-ಸದಾಶಿವ ಭೀಮಪ್ಪ ಮುಡೆಮ್ಮನವರ
![](https://i0.wp.com/karunadakanda.com/wp-content/uploads/2023/06/IMG_20230605_071424.jpg?fit=344%2C664&ssl=1)